ಇತ್ತೀಚೆಗೊಂದು ದಿನ ಟ್ರಂಪ್ ಗಾಲ್ಫ್ ಕ್ಲಬ್ ಕಡೆ ಹೋಗುತ್ತಿದ್ದರು. ಈ ವೇಳೆ ಅದೇ ಕ್ಲಬ್‌ನಲ್ಲಿ ಕೆಲಸ ಮಾಡುವ ಜ್ಯೂಲಿ ಸೈಕಲ್‌ನಲ್ಲಿ ಹೋಗುತ್ತಿದ್ದರು

ಅಮೆರಿಕ ಅಧ್ಯಕ್ಷರನ್ನು ಎದುರು ಹಾಕಿಕೊಂಡು ಬದುಕಲಾದೀತೆ. ಅಮೆರಿಕದ ಮಹಿಳೆಯೊಬ್ಬಳಿಗೆ ಇದೇ ಗತಿ ಆಗಿದೆ. ಟ್ರಂಪ್‌ರನ್ನು ಎದುರು ಹಾಕಿಕೊಳ್ಳಲು ಹೋಗಿ ಜ್ಯೂಲಿ ಎಂಬಾಕೆ ಕೆಲಸ ಕಳೆದುಕೊಂಡಿ ದ್ದಾಳೆ. ಇತ್ತೀಚೆಗೊಂದು ದಿನ ಟ್ರಂಪ್ ಗಾಲ್ಫ್ ಕ್ಲಬ್ ಕಡೆ ಹೋಗುತ್ತಿದ್ದರು. ಈ ವೇಳೆ ಅದೇ ಕ್ಲಬ್‌ನಲ್ಲಿ ಕೆಲಸ ಮಾಡುವ ಜ್ಯೂಲಿ ಸೈಕಲ್‌ನಲ್ಲಿ ಹೋಗುತ್ತಿದ್ದರು. ಟ್ರಂಪ್ ವಾಹನ ನೋಡಿದ ಕೂಡಲೇ ತನ್ನ ಎಡಗೈನ ಮಧ್ಯಬೆರಳನ್ನು ಟ್ರಂಪ್ ಕಡೆಗೆ ತೋರಿಸಿ ಅಶ್ಲೀಲ ಸಂಜ್ಞೆ ಮಾಡಿದ್ದಾಳೆ. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ವಿಷಯ ಗೊತ್ತಾದ ಬಳಿಕ ಆಕೆಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.

Add Asianetnews Kannada as a Preferred SourcegooglePreferred