Asianet Suvarna News Asianet Suvarna News

ತನ್ನನ್ನೇ ತಾನು ವರಿಸಿದ ಕಪ್ಪು ಸುಂದರಿ

ಉಗಾಂಡ ಮೂಲದ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿನಿ ಲುಲು ಜಮೀಮಾ ಎಂಬಾಕೆ ತನ್ನ 32ನೇ ವಯಸ್ಸಿನ ಪ್ರಯುಕ್ತ ತನ್ನನ್ನೇ ತಾನು ವರಿಸಿದ್ದಾಳೆ. ಚರ್ಚಿನಲ್ಲಿ ಸಾಂಪ್ರದಾಯಿಕ ವಿವಾಹ ಧರಿಸಿನಲ್ಲಿ ಆಗಮಿಸಿದ ಈಕೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವರನಿಲ್ಲದೆ ನನ್ನನ್ನೇ ನಾನು ಮದುವೆಯಾಗಿರುವುದಾಗಿ ಘೋಷಿಸಿಕೊಂಡಳು.

Woman Marries Herself To Get Parents Off Her Back
Author
Bengaluru, First Published Oct 10, 2018, 5:56 PM IST
  • Facebook
  • Twitter
  • Whatsapp

ಲಂಡನ್ [ಅ.10]: ಪ್ರಾಣಿಗಳನ್ನು, ಗಿಡ ಮರಗಳನ್ನು ಅಥವಾ ಯಾವುದಾದರೂ ವಸ್ತುಗಳನ್ನು ಮದುವೆಯಾಗುವುದನ್ನು ಕೇಳಿರುತ್ತೇವೆ ಇಲ್ಲವೇ ನೋಡಿರುತ್ತೇವೆ. ಆದರೆ ಇಲ್ಲೊಬ್ಬಳು ಸುಂದರಿ ತನ್ನನ್ನು ತಾನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ.

ಈ ವಿಚಿತ್ರ ಘಟನೆ ನಡೆದಿರುವುದು ಲಂಡನಿನ್ನಲ್ಲಿ ಉಗಾಂಡ ಮೂಲದ ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿನಿ ಲುಲು ಜಮೀಮಾ ಎಂಬಾಕೆ ತನ್ನ 32ನೇ ವಯಸ್ಸಿನ ಪ್ರಯುಕ್ತ ತನ್ನನ್ನೇ ತಾನು ವರಿಸಿದ್ದಾಳೆ. ಚರ್ಚಿನಲ್ಲಿ ಸಾಂಪ್ರದಾಯಿಕ ವಿವಾಹ ಧರಿಸಿನಲ್ಲಿ ಆಗಮಿಸಿದ ಈಕೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ವರನಿಲ್ಲದೆ ನನ್ನನ್ನೇ ನಾನು ಮದುವೆಯಾಗಿರುವುದಾಗಿ ಘೋಷಿಸಿಕೊಂಡಳು.

ಲುಲು 16ನೇ ವರ್ಷಕ್ಕೆ ಕಾಲಿಟ್ಟಾಗ ಈಕೆಯ ತಂದೆ ಮದುವೆಯ ಓಲೆಯನ್ನು ಬರೆದುಕೊಟ್ಟಿದ್ದರಂತೆ. ಪ್ರತಿ ಹುಟ್ಟು ಹಬ್ಬದ ವರ್ಷಾಚರಣೆಯಲ್ಲಿ  ಒಳ್ಳೆಯ ಪತಿ ಸಿಕ್ಕಿ ಉತ್ತಮ ಜೀವನ ಕಂಡುಕೊಳ್ಳಲಿ ಎಂದು ಈಕೆಯ ತಾಯಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದರಂತೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಲುಲು ತನ್ನ ಜೀವನವನ್ನು  ಸ್ವತಃ ತಾನೇ ನೋಡಿಕೊಳ್ಳುವ ಸಲುವಾಗಿ ವರನಿಲ್ಲದೆ ಮದುವೆಯಾಗಿದ್ದಾಳೆ. ಇನ್ನೊಂದು ವಿಚಾರವೆಂದರೆ ಪೋಷಕರು ಈಕೆಯ ಮದುವೆಗೆ ಹಾಜರಾಗಿರಲಿಲ್ಲ.

ಈಕೆಯ ಮದುವೆಗೆ ತಗುಲಿದ ವೆಚ್ಚ ಕೇವಲ ಎರಡೂವರೆ ಡಾಲರ್, ಅದೂ ಮನೆಯಿಂದ ಚರ್ಚಿಗೆ ತೆರಳಲು ವಾಹನದ ಬಾಡಿಗೆ. ಸ್ನೇಹಿತೆಯಿಂದ ಗೌನನ್ನು ಮದುವೆಯ ಪ್ರಯುಕ್ತ ಪಡೆದುಕೊಂಡಿದ್ದಳು. ಸಹೋದರ ತನ್ನ ಖರ್ಚಿನಲ್ಲಿ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಕೇಕನ್ನು ತಂದುಕೊಟ್ಟಿದ್ದ. ಒಟ್ಟಿನಲ್ಲಿ ವಿಚಿತ್ರ ಮದುವೆಗೆ ಒಂದಷ್ಟು ಮಂದಿ ಕೂಡ ಸಾಕ್ಷಿಯಾದರು. 

Follow Us:
Download App:
  • android
  • ios