ಗಲ್ಲದವರೆಗೆ ಸುರಿಯುವ ಜೊಲ್ಲೇ ಏನ್ ಕಥೆ ನಿಂದು?

Why kids will be having more saliva
Highlights

ಸಾಧಾರಣವಾಗಿ ಮಗುವು ಮೂರು ತಿಂಗಳಿರುವಾಗ ಜೊಲ್ಲು ಸುರಿಸಲು ಆರಂಭಿಸುತ್ತದೆ. ಮಗುವಿಗೆ ಹನ್ನೆರಡರಿಂದ ಹದಿನೈದು ತಿಂಗಳಾಗುವಷ್ಟರಲ್ಲಿ ಹಲ್ಲು ಮೂಡಲಾರಂಭಿಸುತ್ತದೆ. ಆಗ ಗಲ್ಲದವರೆಗೂ ಸುರಿವ ಜೊಲ್ಲು ನಿಂತುಬಿಡುತ್ತದೆ. ಕೆಲವು ಮಕ್ಕಳು ಕಡಿಮೆ ಜೊಲ್ಲು ಸುರಿಸಿದರೆ ಇನ್ನು ಕೆಲವು ನಿರಂತರವಾಗಿ ಜೊಲ್ಲು ಸುರಿಸುತ್ತಲೇ ಇರುತ್ತವೆ.

- ರಾಜೇಶ್ವರಿ ಜಯಕೃಷ್ಣ


'ಎಷ್ಟು ಬಾರಿ ಡ್ರೆಸ್‌ಚೇಂಜ್ ಮಾಡಿದ್ರೂಕತ್ತು, ಕಾಲರ್ ಎಲ್ಲ ಒದ್ದೆ ಮಾಡ್ಕೋತಾನೆ ಈ ಪುಟ್ಟ.. ಅಷ್ಟೂ ಜೊಲ್ಲು .. '

ಪುಟ್ಟ ಕಂದಮ್ಮಗಳ ಅಮ್ಮಂದಿರ ಈ ಮಾತುಗಳು ಉತ್ಪ್ರೇಕ್ಷೆಯದೇನೂ ಅಲ್ಲ. ಹಾಗಾದ್ರೆ ಎಳೆಯ ಕೂಸುಗಳು ಇಷ್ಟೊಂದು ಜೊಲ್ಲು ಸುರಿಸೋದಾದರೂ ಯಾಕೆ?

ಸಾಧಾರಣವಾಗಿ ಮಗುವು ಮೂರು ತಿಂಗಳಿರುವಾಗ ಜೊಲ್ಲು ಸುರಿಸಲು ಆರಂಭಿಸುತ್ತದೆ. ಮಗುವಿಗೆ ಹನ್ನೆರಡರಿಂದ ಹದಿನೈದು ತಿಂಗಳಾಗುವಷ್ಟರಲ್ಲಿ ಹಲ್ಲು ಮೂಡಲಾರಂಭಿಸುತ್ತದೆ. ಆಗ ಗಲ್ಲದವರೆಗೂ ಸುರಿವ ಜೊಲ್ಲು ನಿಂತುಬಿಡುತ್ತದೆ. ಕೆಲವು ಮಕ್ಕಳು ಕಡಿಮೆ ಜೊಲ್ಲು ಸುರಿಸಿದರೆ ಇನ್ನು ಕೆಲವು ನಿರಂತರವಾಗಿ ಜೊಲ್ಲು ಸುರಿಸುತ್ತಲೇ ಇರುತ್ತವೆ.

ಮಗುವಿನ ಬೆಳವಣಿಗೆಗೂ ಸುರಿಸೋ ಜೊಲ್ಲಿಗೂ ಸಂಬಂಧ ಇದೆ.  ನಿಮ್ಮ ಮಗುವಿನ ಜೊಲ್ಲು, ಅದರ ದೈಹಿಕ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಸುಮಾರು ಮೂರು ತಿಂಗಳಾಗುವಷ್ಟರಲ್ಲಿ ಮಗುವಿನ ಜೊಲ್ಲನ್ನುಉತ್ಪತ್ತಿ ಮಾಡುವ ಗ್ರಂಥಿಯಾದ ಲಾಲಾರಸ ಗ್ರಂಥಿ ಕ್ರಿಯಾಶೀಲವಾಗ ತೊಡಗುತ್ತೆ.  ಈ ಸಂದರ್ಭದಲ್ಲಿ ಮಗುವು ಜಗಿಯುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತದೆ. ಕೈಯನ್ನು ಬಾಯಿಗೆ ಕೊಂಡೊಯುುವಷ್ಟರ ಮಟ್ಟಿಗೆ ಅದರ ಸ್ನಾಯುಗಳು ಬಲಗೊಳ್ಳುತ್ತವೆ. ಇವೆರಡು ಚಟುವಟಿಕೆಗಳಿಂದಲೂ ಜೊಲ್ಲು ಉತ್ಪತ್ತಿಯಾಗತೊಡಗುತ್ತದೆ. ಉತ್ಪತ್ತಿಯಾದ ಜೊಲ್ಲನ್ನು ಕಲಿತಿರುವುದಿಲ್ಲ. ಮಗುವು ಕೈಯನ್ನುಅಥವಾ ಆಟಿಕೆ ಕೊಂಡೊಯ್ದಾಗ ಜೊಲ್ಲು ಹೆಚ್ಚೆಚ್ಚು ಸುರಿಯಲಾರಂಭಿಸುತ್ತದೆ. 

ಹಲ್ಲು ಬರುವಾಗ ಜೊಲ್ಲು ಸುರಿಯುತ್ತೆ 

ಮಗುವಿಗೆ ಹಲ್ಲು ಬರುವ ಸಮಯದಲ್ಲಿ ಜಾಸ್ತಿ ಜೊಲ್ಲು ಸುರಿವ ಸಂಭವ ಇದೆ. ಹಲ್ಲು ಬರುವ ಜಾಗದಲ್ಲಿ ಮಗುವಿಗೆ ನೋವು, ತುರಿಕೆ ಉಂಟಾದಾಗ ಕೈಗೆ ಸಿಕ್ಕಿದ್ದನ್ನೆಲ್ಲ ಕಚ್ಚಲಾರಂಭಿಸುತ್ತದೆ. ಆಗ ಜಾಸ್ತಿ ಉತ್ಪತ್ತಿಯಾಗಿ ನೋವಿಗೆ ಕೊಂಚ ಉಪಶಮನ ಸಿಕ್ಕಂತಾಗುತ್ತದೆ. ಜಾಸ್ತಿ ಜೊಲ್ಲು ಸುರಿಸುತ್ತದೆ ಎಂದ ಮಾತ್ರಕ್ಕೆ 'ಹಲ್ಲು ಬರಲು' ಎಂದೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನುಂಗಲು ಸಹಕರಿಸುವ ಸ್ನಾಯುಗಳು ಸರಿಯಾಗಿ ಬೆಳವಣಿಗೆ ಆಗದಿರುವುದೂ ಇದಕ್ಕೆ ಕಾರಣವಾಗಿರಬಹುದು. ಬಾಯಿಯಲ್ಲಿ ತುಂಬಿದ ಲಾಲಾರಸವನ್ನು ನುಂಗದೇ ಇದ್ದಾಗ, ಅದು ಬಾಯಿಯಿಂದ ಹೊರಗೆ ಸುರಿಯಲಾರಂಭಿಸುತ್ತದೆ. ಕೆಲವು ಮಕ್ಕಳು ಎರಡು ವರ್ಷದವರೆಗೂ ಜೊಲ್ಲುಸುರಿಸುವುದುಂಟು. ಜೊಲ್ಲು ಹೊರಹೋಗದಂತೆ ಹಲ್ಲುಗಳು ತಡೆಯುತ್ತವೆ. ನಿಮ್ಮ ಮಗುವಿನ ನಾಲ್ಕು ಹಾಲು ಹಲ್ಲುಗಳು ಮುರಿು ಹೋಗಿರೂ ಜೊಲ್ಲು ಸುರಿಯುವ ಸಾಧ್ಯತೆ ಇದೆ.

ಜೊಲ್ಲು ಸುರಿಸಲಿ ಕಂದ 

ಮಗುವು ಗಟ್ಟಿ ಆಹಾರವನ್ನು ತಿನ್ನಲಾರಂಭಿಸಿದಾಗ, ಲಾಲಾರಸವು ಬ್ಯಾಕ್ಟೀರಿಯಾ ಮತ್ತು ಆಹಾರದ ಕಣಗಳನ್ನು ತೊಳೆದುಬಿಡುತ್ತದೆ. ಇದರಿಂದ ಹಲ್ಲು ಹುಳುಕಾಗುವುದು ತಪ್ಪುತ್ತೆ. ಮಗು ತಿನ್ನುವ  ಕಾರ್ಬೋಹೈಡ್ರೇಟ್ ಅನ್ನು ಜೊಲ್ಲು ಕರಗಿಸಿಬಿಡುತ್ತದೆ.  ಜೊಲ್ಲನ್ನು ಮಗು ನುಂಗಿದಾಗ ಕರುಳಿನ ಕ್ರಿಯಾಶೀಲತೆಯೂ ಹೆಚ್ಚುತ್ತದೆ.  ಮಗು ಸೇವಿಸಿದ ದ್ರವಾಹಾರವು ಹಿಮ್ಮುಖ ಹರಿವಿನಿಂದ ಪುನಾ ಬಾಯಿಗೆ ಬಾರದಂತೆ ಜೊಲ್ಲು ತಡೆಯುತ್ತದೆ. ಲಾಲಾರಸದಿಂದ ಅನ್ನನಾಳದಲ್ಲಿ ಆಹಾರವು ಸರಾಗವಾಗಿ ಸಾಗಿ ಮಗುವಿಗಾಗುವ ಕಿರಿಕಿರಿ, ತೊಡಕನ್ನು ತಪ್ಪಿಸುತ್ತದೆ.

ವಿಪರೀತ ಜೊಲ್ಲು ಒಳ್ಳೆಯದಲ್ಲ

ವಿಪರೀತ ಜೊಲ್ಲು ಸುರಿಯಲಾರಂಭಿಸಿದರೆ ವೈದ್ಯರನ್ನು ಕಾಣುವುದು ಒಳಿತು. ಜೊಲ್ಲಿನಿಂದ ನಿಮ್ಮ ಮಗುವಿನ ಗಲ್ಲ, ಕತ್ತು, ಎದೆ ಭಾಗದ ಚರ್ಮವು ಕೆಂಪಗಾಗಿ ನೋವು ಕಾಣಿಸಿ ಕೊಳ್ಳಬಹುದು. ಅದಕ್ಕೆ ಕಿರಿಕಿರಿಯಾಗಬಹುದು. ಇದನ್ನು ತಡೆಯಲು ಆ ಭಾಗವನ್ನು ಚೆನ್ನಾಗಿ ಒರೆಸಿ, ವೈದ್ಯರ ಸೂಚನೆಯನ್ನು ಅನುಸರಿಸಿ ಮುಲಾಮು ಹಚ್ಚಬೇಕು. 

ದೊಡ್ಡವರೂ ಜೊಲ್ಲು ಸುರಿಸುತ್ತಾರೆ!

ದೊಡ್ಡವರೂ ರಾತ್ರಿ ನಿದ್ದೆಯಲ್ಲಿದ್ದಾಗ ಜೊಲ್ಲು ಸುರಿಸುವುದುಂಟು. ಮಲಗಿದ್ದಾಗ ನಿಮ್ಮ ಮುಖದ ಸ್ನಾಯುಗಳು ವಿಶ್ರಾಂತಿಯಲ್ಲಿರುತ್ತವೆ. ಲಾಲಾರಸ ಗ್ರಂಥಿಯಿಂದ ಉತ್ಪನ್ನವಾದ ಲಾಲಾರಸವು ನಿಮ್ಮ ಬಾಯಿಯಲ್ಲಿ ತುಂಬಿಕೊಳ್ಳುತ್ತದೆ. ನಿದ್ದೆಯಲ್ಲಿದ್ದಾಗ ನೀವು ಅದನ್ನು ನುಂಗದಿದ್ದ ಕಾರಣ ಆ ಜೊಲ್ಲು ಹೊರಗೆ ಹರಿದುಬಿಡುತ್ತದೆ!

loader