ಗೋಧಿ ಕಾಳಿನಲ್ಲಿ ಫೈಬರ್, ವಿಟಮಿನ್ಸ್, ಐರನ್, ಮೆಗ್ನೀಶಿಯಂ, ಫಾಸ್ಪರಸ್, ಮ್ಯಾಂಗನೀಸ್ ಹಾಗೂ ಸೆಲೆನಿಯಂ ಪೋಷಕಾಂಶಗಳು ಹೇರಳವಾಗಿವೆ. ಆದರೆ ಅದನ್ನು ಪಾಲಿಶ್ ಮಾಡುವ ಹಂತದಲ್ಲಿ ಎಲ್ಲ ನ್ಯೂಟ್ರಿಯೆಂಟ್ಸ್ ಗಳೂ ನಷ್ಟವಾಗಿ ಕೇವಲ ಒಂದು ಪೌಡರ್ ಆಗಿ ಹೊರಬರುವುದು ಮೈದಾಹಿಟ್ಟು. ನ್ಯೂಟ್ರಿಶನ್ ಜೀರೋ ಆದರೂ ಕ್ಯಾಲೋರಿ ಮಾತ್ರ ಹೇರಳವಾಗಿರುವ ಮೈದಾದ ದುಷ್ಪರಿಣಾಮಗಳೇನು ಗೊತ್ತಾ?

  • ಮೈದಾ ಪದಾರ್ಥಗಳು ಆ ಕ್ಷಣಕ್ಕೆ ಹೊಟ್ಟೆ ತುಂಬಿಸಿದರೂ ಬೇಗ ಹಸಿವಾಗುತ್ತದೆ. ಹೀಗಾಗಿ ನೀವು ಪದೇ ಪದೆ ತಿನ್ನುತ್ತಲೇ ಇರುವಿರಿ. ಅಲ್ಲದೆ, ಇದು ಇನ್ಸುಲಿನ್ ಸೆಕ್ರಿಶನ್ ಹೆಚ್ಚಿಸಿ ತೂಕ ಹೆಚ್ಚಳ ಹಾಗೂ ಬೊಜ್ಜಿಗೆ ಕಾರಣವಾಗುತ್ತದೆ. 

ನಿಮ್ಮದು ಡ್ರೈಸ್ಕಿನ್ ಆಗಿದ್ದಲ್ಲಿ ಈ ಆಹಾರಗಳಿಂದ ದೂರವಿರಿ..

  • ಮೈದಾದಿಂದ ತಯಾರಿಸಿದ ಪದಾರ್ಥಗಳಲ್ಲಿ ಸೋಡಿಯಂ ಮೆಟಾ ಬೈಸಲ್ಫೇಟ್ ಹಾಗೂ ಬೆಂಜೋಯಿಕ್ ಆ್ಯಸಿಡ್ ಕಂಡುಬರುತ್ತದೆ. ಇದು ಗರ್ಭಿಣಿಯರು ಹಾಗೂ ಮಕ್ಕಳಿಗೆ ಅಪಾಯಕಾರಿ.
  • ಮೈದಾದಲ್ಲಿ ಅಲ್ಲೋಕ್ಸಾನ್ ಎಂಬ ಪದಾರ್ಥ ಹೆಚ್ಚಿದ್ದು, ಅದು ಡಯಾಬಿಟೀಸ್ ಗೆ ಹಾದಿಯಾಗುತ್ತದೆ. ಡಯಾಬಿಟೀಸ್ ಪೇಶೆಂಟ್ ಗಳು ಪದೇ ಪದೆ ಮೈದಾ ಬಳಸಿದಲ್ಲಿ ಕಾಯಿಲೆ ಗಂಭೀರ ಸ್ವರೂಪ ಪಡೆಯಬಹುದು.
  • ಮೈದಾದಲ್ಲಿ ಫೈಬರ್ ಇಲ್ಲದಿರುವುದರಿಂದ ಮಲಬದ್ಧತೆಗೆ ಕಾರಣವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆ ವ್ಯವಸ್ಥೆ ಮೇಲೆಯೇ ಕೆಟ್ಟ ಪರಿಣಾಮ ಬೀರಿ ಬೊಜ್ಜು, ಒತ್ತಡಗಳಿಗೆ ಕಾರಣವಾಗುತ್ತದೆ.

ಚುಯಿಂಗ್ ಗಮ್‌ನಿಂದ ಕಾಡಬಹುದು ಅಜೀರ್ಣ!

  • ಅತಿಯಾದ ಮೈದಾ ಬಳಕೆ ಲಿವರ್ ಹಾಗೂ ಕಿಡ್ನಿಯನ್ನು ಹಾನಿಗೀಡು ಮಾಡುತ್ತದೆ.