Interesting Facts: ಇದು ನಮ್ಮ ಶರೀರದ ಬಹು ದೊಡ್ಡ ಅಂಗ

ನಮ್ಮ ದೇಹದ ಬಗ್ಗೆ ನಾವು ತಿಳಿದುಕೊಳ್ಳುವುದು ಸಾಕಷ್ಟಿದೆ. ನಮ್ಮ ದೇಹದ ಮುಖ್ಯ ಅಂಗ ಯಾವುದು ಅಂತಾ ಪ್ರಶ್ನೆ ಮಾಡಿದಾಗ ಉತ್ತರ ನೀಡೋದು ಕಷ್ಟ. ಹಾಗೆಯೇ ಯಾವುದು ದೊಡ್ಡ ಅಂಗ ಎಂದಾಗ್ಲೂ ನಾವು ತಬ್ಬಿಬ್ಬಾಗ್ತೇವೆ.
 

Which Is The Largest Human Organ

ನಮ್ಮ ಶರೀರದಲ್ಲಿ ಎಲ್ಲ ಅಂಗವೂ ಮುಖ್ಯವೇ. ಎಲ್ಲ ಅಂಗಗಳೂ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದಾಗಲೇ ಸ್ವಸ್ಥ ಶರೀರ ನಮ್ಮದಾಗಲು ಸಾಧ್ಯ. ಯಾವುದೇ ಒಂದು ಚಿಕ್ಕ ಅಂಗಕ್ಕೆ ಘಾಸಿಯಾದರೂ ಅಥವಾ ಅದು ಕೆಲಸ ನಿರ್ವಹಿಸದೇ ಇದ್ದರೂ ಆರೋಗ್ಯದಲ್ಲಿ ಏರುಪೇರಾಗುತ್ತದೆ. ನಮ್ಮ ಅಂಗಗಳ ಪೈಕಿ ಅತಿ ದೊಡ್ಡ ಅಂಗ ಯಾವುದೆಂದು ಕೇಳಿದರೆ ಬಹುಶಃ ಉತ್ತರ ಹೇಳುವುದು ಕಷ್ಟವಾಗಬಹುದು.

ನಮ್ಮ ಶರೀರ (Body) ದ ದೊಡ್ಡ ಅಂಗ ಕೈ, ಕಾಲು, ಕೂದಲು ಅಥವಾ ನರ ಇದ್ಯಾವುದೂ ಅಲ್ಲ. ಇದು ನಮ್ಮ ಶರೀರದ ತುಂಬ ಹರಡಿದೆ. ಕೂದಲು, ಉಗುರು, ನರ, ರಕ್ತನಾಳ ಹಾಗೂ ಎಲ್ಲಾ ಗ್ರಂಥಿಗಳಿಗೆ ಸಂಪರ್ಕ ಹೊಂದಿದ ಏಕೈಕ ಅಂಗ ಎಂದರೆ ಅದು ಚರ್ಮ (Skin). ದೇಹದ ಪ್ರತಿಯೊಂದು ಭಾಗವನ್ನು ಆವರಿಸುವ ಏಕೈಕ ಅಂಗವೆಂದರೆ ಅದು ಚರ್ಮ. ಚರ್ಮದ ಮೂಲಕವೇ ನಮಗೆ ಸಂವೇದನೆ ದೊರೆಯುತ್ತದೆ. ಇದರ ಮೂಲಕವೇ ಉರಿ, ನೋವು (Pain) ಅಥವಾ ಪ್ರೀತಿ, ಮಮತೆಯ ಅನುಭವವಾಗುತ್ತದೆ. ಒಬ್ಬ ವ್ಯಕ್ತಿ ಸುಂದರವಾಗಿ ಅಥವಾ ಕುರೂಪವಾಗಿ ಕಾಣುವುದು ಕೂಡ ಈ ಚರ್ಮದಿಂದ. ಹೊರಗಿನ ವಾತಾವರಣ ಹಾಗೂ ಶರೀರದ ಒಳಗಿನ ಅಂಗಗಳನ್ನು ರಕ್ಷಿಸುವ ಸೈನಿಕ ಈ ಚರ್ಮವಾಗಿದೆ. ಶಾಖ, ಬೆಳಕು, ಗಾಯ, ಸೋಂಕು ಎಲ್ಲವನ್ನೂ ಸಹಿಸಿಕೊಂಡು ದೇಹದ ಉಷ್ಣತೆಯನ್ನು ಇದು ಕಾಪಾಡಿಕೊಳ್ಳುತ್ತದೆ. ದೇಹಕ್ಕೆ ನೀರಿನ ಕೊರತೆಯನ್ನು ಪೂರೈಸಿ ವಿಟಮಿನ್ ಡಿ ಮತ್ತು ಸಂವೇದನೆಯನ್ನು ಹುಟ್ಟುಹಾಕುತ್ತದೆ.

ನಿಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಹಣ್ಣು ಈಗ ಮಾರುಕಟ್ಟೆಯಲ್ಲಿದೆ!

ಒಬ್ಬ ವಯಸ್ಕ ವ್ಯಕ್ತಿಯ ದೇಹದ ಚರ್ಮವು ಆತನ ದೇಹ ತೂಕದ ಪ್ರತಿಶತ 15ರಷ್ಟನ್ನು ಹೊಂದಿರುತ್ತದೆ. ಮಾನವನ ಶರೀರದ ಚರ್ಮವನ್ನು ನೆಲದ ಮೇಲೆ ಹರಡಿದರೆ ಅದು ಸುಮಾರು 22 ಚದರ ಅಡಿ ವಿಸ್ತೀರ್ಣಕ್ಕೆ ವ್ಯಾಪಿಸುತ್ತದೆ. ಚರ್ಮವು ದೇಹದ ಒಂದು ಭಾಗದಲ್ಲಿ ದಪ್ಪವಾಗಿದ್ದರೆ ಇನ್ನೊಂದು ಭಾಗದಲ್ಲಿ ತೆಳುವಾಗಿ, ನಯವಾಗಿರುತ್ತದೆ. ಇನ್ನೊಂದು ಕಡೆ ದಪ್ಪವಾಗಿ ಒರಟಾಗಿರುತ್ತದೆ. ಕೆಲವು ಕಡೆ ಚರ್ಮದ ಮೇಲೆ ಕೂದಲು ಇರುತ್ತದೆ. ಕೆಲವು ಕಡೆ ಇರುವುದಿಲ್ಲ. ಮಾನವ ದೇಹದ ಚರ್ಮವು ಎಪಿಡರ್ಮಿಸ್, ಡರ್ಮಿಸ್ ಮತ್ತು ಹೈಪೋಡರ್ಮಿಸ್ ಎಂಬ ಮೂರು ಪದರಗಳಿಂದ ಕೂಡಿದೆ. ಈ ಮೂರು ಪದರಗಳ ದಪ್ಪ ಮತ್ತು ಕಾರ್ಯಕ್ಷಮತೆಯು ವಯಸ್ಸು, ಲಿಂಗ ಮತ್ತು ಜೀನ್ ಗಳನ್ನು ಅವಲಂಬಿಸಿರುತ್ತದೆ. 

ಎಪಿಡರ್ಮಿಸ್ ಚರ್ಮದ ಹೊರ ಪದರವಾಗಿದೆ. ಇದನ್ನು ಕೂಡ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಸ್ಟ್ರಾಟಮ್ ಬೇಸೇಲ್, ಸ್ಟ್ರಾಟಮ್ ಸ್ಪಿನೋಸಮ್, ಸ್ಟ್ರಾಟಮ್ ಗ್ರ್ಯಾನುಲೋಸಮ್ ಮತ್ತು ಸ್ಟ್ರಾಟಮ್ ಕಾರ್ನಿಯಮ್. ಕೈ ಮತ್ತು ಕಾಲಿನ ಕೆಳಗಿನ ಭಾಗವು ಎಕ್ಸಟ್ರಾ ಪದರವನ್ನು ಹೊಂದಿರುತ್ತದೆ. ಇದನ್ನು ಸ್ಟ್ರೇಟಮ್ ಲೂಸಿಡಮ್ ಎನ್ನುತ್ತಾರೆ. ಇದರಲ್ಲಿ ಕೆರಾಟಿನ್ ಎಂಬ ಪ್ರೊಟೀನ್ ನಿಂದ ಇದು ಗಟ್ಟಿ ಮತ್ತು ಕಠೋರವಾಗುತ್ತದೆ. ಡರ್ಮಿಸ್ ನಲ್ಲಿ ಪ್ಯಾಪಿಲ್ಲರಿ ಡರ್ಮಿಸ್ ಮತ್ತು ರೆಟಿಕ್ಯುಲರ್ ಡರ್ಮಿಸ್ ಎಂಬ ಎರಡು ವಿಧವಿದೆ. ಹೈಪೋಡರ್ಮಿಸ್ ಚರ್ಮದ ಆಳದ ಪದರವಾಗಿದೆ. ಇದನ್ನು ಸಬ್ ಕ್ಯುಟೇನಿಯಸ್ ಫ್ಯಾಟ್ ಎಂದು ಕೂಡ ಕರೆಯುತ್ತಾರೆ. ಇದರೊಳಗೆ ಹೆಚ್ಚು ಕೊಬ್ಬಿನ ಅಂಗಾಂಶಗಳಿವೆ. ಇದು ದೇಹವನ್ನು ಇನ್ಸುಲೇಟ್ ಮಾಡುತ್ತದೆ.

ರೆಸ್ಟೋರೆಂಟಲ್ಲಿ ಯಾವಾಗ್ಲೂ ತಂದೂರಿ ರೋಟಿನೇ ತಿಂತೀರಾ? ಹುಷಾರು!

ಚರ್ಮದ ಕೇವಲ ಸೌಂದರ್ಯ ಮಾತ್ರವಲ್ಲ ಅದು ಮೈಕ್ರೋಬ್ಸ್, ಗಾಯ, ಸೆಕೆ ಹಾಗೂ ಅಪಾಯಕಾರಿ ಅಂಶಗಳಿಂದ ನಮ್ಮನ್ನು ರಕ್ಷಿಸುತ್ತದೆ. ಚರ್ಮ ಇಲ್ಲದಿದ್ದರೆ ನಮ್ಮ ಶರೀರದ ಒಳಗಿನ ಅಂಗಗಳು ಘಾಸಿಯಾಗುತ್ತವೆ. ಚರ್ಮವು ಅಂಗಾಂಶಗಳಲ್ಲಿ ದ್ರವದ ಹರಿವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಅನೇಕ ಸಾಂಕ್ರಾಮಿಕ ವೈರಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಇದರಲ್ಲಿನ ಕೆರೊಟೀನ್ ಚರ್ಮವನ್ನು ವಾಟರ್ ಪ್ರೂಫ್ ಆಗಿಸಿದೆ. ಹೀಗೆ ನಮ್ಮ ಶರೀರದ ಸುತ್ತ ಆವರಿಸಿರುವ ಚರ್ಮ ನಮ್ಮ ಶರೀರದ ಮುಖ್ಯ ಅಂಗ ಹಾಗೂ ರಕ್ಷಾಕವಚವಾಗಿದೆ.
 

Latest Videos
Follow Us:
Download App:
  • android
  • ios