ಹುಟ್ಟಿದ ತಿಂಗಳು ಬಿಚ್ಚಿಟ್ತು ಸೆಕ್ಸ್ ಲೈಫ್ ಸಿಕ್ರೇಟ್!

First Published 19, Nov 2018, 4:27 PM IST
What your birth month say about  sexual life
Highlights

ಸಂಗಾತಿಯಲ್ಲೊಬ್ಬರು ರೊಮ್ಯಾಂಟಿಕ್ ಆದರೆ, ಇನ್ನೊಬ್ಬರು ಅರಸಿಕರಾಗಿರುತ್ತಾರೆ. ಅಫ್‌ಕೋರ್ಸ್ ಜಾತಕ, ರಾಶಿ ಫಲಗಳನ್ನು ನೋಡಿ ಮದ್ವೆಯಾದರೂ, ಹೀಗಾಗುತ್ತೆ. ಏಕೆ?

ಒಂದೊಂದು ತಿಂಗಳಲ್ಲಿ ಹುಟ್ಟಿದವರ ಆಸಕ್ತಿ, ಆಶಯಗಳು ವಿಭಿನ್ನವಾಗಿರುತ್ತೆ. ಲೈಂಗಿಕಾಸಕ್ತಿಯೂ! ಹುಟ್ಟಿದ ಸಮಯ, ದಿನ, ತಿಥಿ...ಎಲ್ಲವೂ ಮನುಷ್ಯನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಹಾಗೆಯೇ ಲೈಂಗಿಕಾಸಕ್ತಿಗೂ, ಹುಟ್ಟಿದ ಮಾಸಕ್ಕೂ ಸಂಬಂಧವಿದೆ ಎನ್ನೋ ವಿಷ್ಯ ಗೊತ್ತಾ? ಇಲ್ಲಿದೆ ನೋಡಿ ಯಾವ ತಿಂಗಳಲ್ಲಿ ಹುಟ್ಟಿದವರ ಲೈಂಗಿಕಾಸಕ್ತಿ ಹೇಗಿರುತ್ತೆ ಎಂದು..

ಜನವರಿ: ವರ್ಷದ ಮೊದಲ ತಿಂಗಳು ಹುಟ್ಟಿದವರು ಲೈಂಗಿಕ ಕ್ರಿಯೆಯಲ್ಲಿ ಅಸಾಮಾನ್ಯರಂತೆ ವರ್ತಿಸುತ್ತಾರೆ. ಲೈಂಗಿಕತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದವರೊಂದಿಗೆ ಮಾತ್ರ ಸುದೀರ್ಘ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ. 

ಫೆಬ್ರವರಿ: ಇವರು ಸಂಗಾತಿಯೊಂದಿಗೆ ಸಮಾನ ಲೈಂಗಿಕಾಸಕ್ತಿ ಹೊಂದಿರುತ್ತಾರೆ. ಮೊದ-ಮೊದಲು ಈ ತಿಂಗಳಲ್ಲಿ ಹುಟ್ಟಿದವರಿಗೆ ಮಾನಸಿಕ ಬಾಂಧವ್ಯ ಗಟ್ಟಿಗೊಳಿಸಿಕೊಳ್ಳಲು ಹೆಣಗಾಡುತ್ತಾರೆ. 

ಮಾರ್ಚ್: ಈ ಮಾಸದಲ್ಲಿ ಹುಟ್ಟಿದವರು ಸಂಗಾತಿಯೊಂದಿಗೆ  ಹಾಸಿಗೆಯಲ್ಲಿ ಹೆಚ್ಚು ಕಾಲ ಕಳೆಯಲು ಭಯಸುತ್ತಾರೆ. ಸಂಗಾತಿ ಹೇಳುವುದನ್ನು ಕೇಳುವುದಕ್ಕಿಂತ ಹೆಚ್ಚು ಸಮಯವನ್ನು ಫೋರ್ ಪ್ಲೇಯಲ್ಲಿ ಕಳೆಯಲು ಆಸಕ್ತಿ ತೋರುತ್ತಾರೆ. ಪ್ರೀತಿಯನ್ನು ಮೊಗೆ ಮೊಗೆದು ಕೊಡಬಲ್ಲರು. ಲೈಂಗಿಕ ಕ್ರಿಯೆಯನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುವ ಸಾಮಾರ್ಥ್ಯವೂ ಇವರಲ್ಲಿರುತ್ತದೆ. 

ಏಪ್ರಿಲ್: ಸ್ವತಂತ್ರ ವ್ಯಕ್ತಿತ್ವದವರಾದ ಇವರಿಗೆ ಮೂಡ್ ಬಂತೆಂದರೆ ಗೋವಿಂದ. ಯಾರೂ ಇವರನ್ನೂ ತಡೆಯೋಕೆ ಸಾಧ್ಯವಿಲ್ಲ. ಅಕಸ್ಮಾತ್ ಒಬ್ಬರ ಮೇಲೆ ಆಸಕ್ತಿ ಕಳೆದಕೊಂಡರೆಂದರೆ ಮತ್ತೆ ಅವರ ಕಡೆ ಮುಖ ಸಹ ಮಾಡುವುದಿಲ್ಲ. 

ಮೇ:  ಇವರು ಸೆಕ್ಸ್‌ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳದ ಬಗ್ಗೆ ಹೆಚ್ಚು ಪರ್ಟಿಕ್ಯುಲರ್ ಆಗಿರುತ್ತಾರೆ. ತಾವಿರೋ ಜಾಗ ಹೆಚ್ಚು ಅಲಂಕೃತವಾಗಿದ್ದು, ಅದ್ಧೂರಿಯಾಗಿದ್ದರೆ ಇವರಿಗೆ ಮೂಡ್ ಬರುವುದು ಸುಲಭ. ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಅ್ಯಕ್ಟಿವ್ ಆಗಿರುತ್ತಾರೆ. ಸಂಗಾತಿ ಬೇಡವೆಂದರೂ  ಸುಮ್ಮನಾಗುವ ಜಾಯಮಾನ ಇವರದ್ದಲ್ಲ. 

ಜೂನ್: ಸೆಕ್ಸ್‌ನಲ್ಲಿಯೂ ವಿಭಿನ್ನತೆ ಬಯಸೋ ಇವರು ಬೇರೆ ಬೇರೆ ಭಂಗಿಗಳನ್ನು ಟ್ರೈ ಮಾಡುತ್ತಾರೆ. ಸೆಕ್ಸ್ ಚಾಟ್ ಮಾಡೋದನ್ನು ಇವರು ಎಂಜಾಯ್ ಮಾಡುತ್ತಾರೆ. 

ಜುಲೈ: ಇವರಿಗೆ ಸೆಕ್ಸ್ ಎಂದರೆ ಮಾನಸಿಕ ಸಂಬಂಧ ಹೊಂದುವುದು. ಒಬ್ಬರೊಂದಿಗೆ ಹೊಂದಿಕೊಂಡರೆಂದರೆ ಅವರೊಂದಿಗೆ ಮಾತ್ರ ಜೀವನವಿಡೀ ಕಳೆಯುತ್ತಾರೆ. ಯಾವ ರೀತಿಯ ಅಕ್ರಮ ಸಂಬಂಧಕ್ಕೂ ಬೀಳುವವರು ಇವರದ್ದಲ್ಲ. 

ಆಗಸ್ಟ್ : ಇವರದ್ದು ದ್ವಂದ್ವ ವ್ಯಕ್ತಿತ್ವ. ಪ್ರೀತಿಸುವುದಾದರೆ ಮೊಗೆ ಮೊಗೆದು ಪ್ರೀತಿ ಕೊಡುತ್ತಾರೆ. ಇಲ್ಲವೋ ಫುಲ್ ಸ್ವಾರ್ತಿ.  ಹಾಸಿಗೆ ಮೇಲೆ ಏನು ಮಾಡಬೇಕೆಂದು ಇವರಿಗೆ ಯಾರೂ ಏನೂ ಹೇಳಬಾರದು. ಸ್ವಲ್ಪ ಸೊಕ್ಕು ಹೆಚ್ಚು. ಆದರೂ, ಅದು ಹೆಚ್ಚು ಕಾಲ ಉಳಿಯುವುದಿಲ್ಲ.

ಸೆಪ್ಟೆಂಬರ್:  ಇವರು ಅಂತರ್ಮುಖಿಗಳು. ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದರಲ್ಲಿ ಎತ್ತಿದ ಕೈ. ಹೊಸ ಹೊಸ ಪ್ರಯತ್ನ ಮಾಡಲು ಇವರಿಗಿಷ್ಟ. ರೊಮ್ಯಾಂಟಿಕ್ ಮೂಡ್‌ನಲ್ಲಿದ್ದರೂ ಅದನ್ನು ಹೇಳಿ ಕೊಳ್ಳುವುದಿಲ್ಲ. 

ಅಕ್ಟೋಬರ್: ನಿಧಾನವೇ ಪ್ರಧಾನ ಎಂದು ಪಾಲಿಸುವುದರಲ್ಲಿ ಇವರು ನಿಸ್ಸೀಮರು.  ರೊಮ್ಯಾನ್ಸ್ ಶುರು ಮಾಡುವುದರಲ್ಲಿಯೂ ವಿಭಿನ್ನತೆ ಮೆರೆಯುತ್ತಾರೆ.  ಸೆಕ್ಸ್ ವಿಷಯದಲ್ಲಿ ಸಂಗಾತಿಯ ದಾರಿ ತಪ್ಪಿಸಲೂ ಇವರು ಹಿಂದು ಮುಂದು ನೋಡುವುದಿಲ್ಲ.

ನವೆಂಬರ್: ಇವರು ತುಸು ಪೊಸೆಸಿವ್.  ಅವರ ಸಂಗಾತಿಯೂ ಪೊಸೆಸಿವ್ ಇರಬೇಕೆಂದುಕೊಳ್ಳುತ್ತಾರೆ. ಎಲ್ಲ ರೀತಿಯ ಭಂಗಿಗಳನ್ನೂ ಟ್ರೈ ಮಾಡಲು ಇಚ್ಛಿಸದಿದ್ದರೂ, ತಾವು ಮಹಾನುಭವರೆಂದು ಹೇಳಿಕೊಳ್ಳುತ್ತಾರೆ. 

ಡಿಸೆಂಬರ್: ಬೇರೆ ತಿಂಗಳಲ್ಲಿ ಹುಟ್ಟಿದವರು, ವರ್ಷದ ಕೊನೆ ತಿಂಗಳಲ್ಲಿ ಹುಟ್ಟಿದವರ ಮುಂದೆ ಏನೇನೂ ಅಲ್ಲ. ಸಂಗಾತಿಯೊಂದಿಗೆ ಹಾಸಿಗೆ ಮೇಲೆ ಯಾವ ರೀತಿ ಇರಬೇಕು ಎನ್ನುವುದರಲ್ಲಿ ಇವರು ಕ್ರಿಯೇಟಿವ್.  ರೊಮ್ಯಾಂಟಿಕ್ ಮೂಡ್‌ನಲ್ಲಿದ್ದಾಗ ಇವರು ಡಾಮಿನೇಟ್ ಮಾಡುತ್ತಾರೆ. ಆದರೆ ಮಾನಸಿಕವಾಗಿ ಹೆಚ್ಚು ಕಾಲ ಇವರೊಂದಿಗೆ ಸಂಬಂಧ ಹೊಂದುವುದು ಕಷ್ಟ. ಬೇಗ ಮೂಡ್ ಆಫ್ ಆಗುತ್ತಾರೆ.

loader