ಏನಿದು '75 ಹಾರ್ಡ್ ಚಾಲೆಂಜ್' ಟ್ರೆಂಡ್; ಇದ್ರಲ್ಲಿ 99% ಜನರು ಫೇಲ್ ಆಗೋದು ಯಾಕೆ..?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ’75 ಹಾರ್ಡ್ ಚಾಲೆಂಜ್’ ಟ್ರೆಂಡ್ ಸದ್ದು ಮಾಡುತ್ತಿದೆ. ಇದರಲ್ಲಿ 99% ಜನರು ಫೇಲ್ ಆಗ್ತಿದ್ದಾರೆ. ಈ ಸವಾಲನ್ನು ಕೆಲವರು ಸ್ವೀಕರಿಸಬೇಡಿ ಅಂತಿದ್ದಾರೆ. 

What is 75 hard challenge? All you need to know about the viral TikTok trend suh

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ’75 ಹಾರ್ಡ್ ಚಾಲೆಂಜ್’ ಟ್ರೆಂಡ್ ಸದ್ದು ಮಾಡುತ್ತಿದೆ. ಇದರಲ್ಲಿ 99% ಜನರು ಫೇಲ್ ಆಗ್ತಿದ್ದಾರೆ. ಈ ಸವಾಲನ್ನು ಕೆಲವರು ಸ್ವೀಕರಿಸಬೇಡಿ ಅಂತಿದ್ದಾರೆ. 

75 ಹಾರ್ಡ್ ಚಾಲೆಂಜ್ ಒಂದು ಮೆಂಟಲ್ ಹಾಗೂ ಫಿಸಿಕಲ್ ಫಿಟ್‌ನೆಸ್ ಮಾಡುವ ಟ್ರೆಂಡ್ ಆಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇದರದ್ದೇ ಸದ್ದು. ಇದರಲ್ಲಿ ಭಾಗವಹಿಸುವವರು 75 ದಿನಗಳವರೆಗೆ ಕಟ್ಟುನಿಟ್ಟಾದ ಕಟ್ಟುಪಾಡುಗಳನ್ನು ಅನುಸರಿಸುವ ಅಗತ್ಯವಿದೆ. ಇದರಿಂದ ನಮ್ಮ ಇಡೀ ಜೀವನವೇ ಬದಲಾಗುತ್ತೆ ಅಂತ ಹೇಳ್ತಿದ್ದಾರೆ. ಬಹಳ ಜನ ಇದ್ರಲ್ಲಿ ಸೋಲುತ್ತಿದ್ದಾರೆ. ಹಾಗಾದರೆ ಏನಿದು ’75 ಹಾರ್ಡ್ ಚಾಲೆಂಜ್? ಇಲ್ಲಿದೆ ಮಾಹಿತಿ.

ಈ ಚಾಲೆಂಜ್ ಸ್ವೀಕಾರ ಮಾಡುವವರು 75 ದಿನ ತಪ್ಪದೇ ಈ ನಿಯಮ ಪಾಲಿಸಬೇಕು. ಒಂದು ವೇಳೆ ಮಿಸ್ ಆದರೆ ಮತ್ತೆ ಪುನಃ ಆರಂಭಿಸಬೇಕು. ಇದೇ ಈ ಚಾಲೆಂಜಿಂಗ್ ಟಾಸ್ಕ್ ಆಗಿದ್ದು, ಬಹಳ ಜನರು ಸೋಲುತ್ತಿದ್ದಾರೆ. ಹಾಗೂ ಇದು ಶಿಸ್ತು ಹುಟ್ಟುಹಾಕುವ ಚಾಲೆಂಜ್ ಆಗಿದ್ದರೂ, ಇದು ಹಾರ್ಡ್ ಇರುವ ಕಾರಣ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಕೆಲವು ಮಂದಿ.

ಪ್ರದೋಷ ವ್ರತದಿಂದ ಸಂತಾನ ಭಾಗ್ಯ; ಇಲ್ಲಿದೆ ಪೂಜೆಯ ಮಹತ್ವ ಮತ್ತು ವಿಧಾನ..!

 

ಆಹಾರ

ಇದರಲ್ಲಿ ಭಾಗವಹಿಸುವವರು ಶುದ್ಧ, ಸಮತೋಲಿತ ಆಹಾರವನ್ನು ಅನುಸರಿಸಬೇಕು, ಜಂಕ್ ಫುಡ್, ಆಲ್ಕೋಹಾಲ್ ಸೇವಿಸಬಾರದು. ಅದಷ್ಟು ಮನೆಯ ಆಹಾರವನ್ನು

ನೀರು

75 ಹಾರ್ಡ್ ಚಾಲೆಂಜ್ ಸ್ವೀಕಾರ ಮಾಡಿದವರು ಪ್ರತಿದಿನ ನಾಲ್ಕು ಲೀಟರ್ ನೀರು ಕುಡಿಯಬೇಕು. ಇದನ್ನು ಬೆಳಗ್ಗೆಯಿಂದ ಆರಂಭಿಸಬಹುದು. 

ವ್ಯಾಯಾಮ

ಪ್ರತಿದಿನ ಕನಿಷ್ಠ 45 ನಿಮಿಷಗಳ ಎರಡು ದೈನಂದಿನ ವ್ಯಾಯಾಮ ಕಡ್ಡಾಯ. ಇದರಲ್ಲಿ ಯೋಗ, ಧ್ಯಾನ ರನ್ನಿಂಗ್ ಕೂಡ ಮಾಡಬಹುದು. ಯಾವುದೇ ದೈಹಿಕ ಚಟುವಟಿಕೆ ಕೂಡ ಮಾಡಬಹುದು.

ಪುಸ್ತಕ ಓದುವುದು

ಇದರಲ್ಲಿ ಭಾಗವಹಿಸುವವರು ಪ್ರತಿದಿನ ಕನಿಷ್ಠ ಹತ್ತು ಪುಟಗಳ ಸಾಹಿತ್ಯವನ್ನು ಓದಬೇಕು, ಇದು ಮಾನಸಿಕ ಬೆಳವಣಿಗೆ ಮತ್ತು ಕಲಿಕೆಯನ್ನು ಉತ್ತೇಜಿಸುತ್ತದೆ.

ದಿನ ಒಂದು ಸೆಲ್ಫಿ

75 ಹಾರ್ಡ್ ಚಾಲೆಂಜ್ ಸ್ವೀಕಾರ ಮಾಡಿದವರು ಪ್ರತಿದಿನ ಒಂದು ಸೆಲ್ಫಿ ತೆಗೆದುಕೊಳ್ಳಬೇಕು. ಇದು ಕೊನೆ ದಿನದವರೆಗೆ ದೈಹಿಕ ಬದಲಾವಣೆ ಪತ್ತೆಹಚ್ಚಲು ಸಹಾಯ ಮಾಡುತ್ತದೆ.

Latest Videos
Follow Us:
Download App:
  • android
  • ios