ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಲೈಂಗಿಕ ಜೀವನ ಸುಖಮಯವಾಗಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿರುತ್ತೆ. ಸೆಕ್ಸ್ ಲೈಫ್ ಚೆನ್ನಾಗಿರಲು ಹಿಂದಿನ ಕಾಲದಿಂದಲೂ ಜನರು ಬೇರೆ ಬೇರೆ ರೀತಿಯ ಆರೋಗ್ಯಕರ ಆಯುರ್ವೇದ ಔಷಧಿಗಳನ್ನು ಬಳಸುತ್ತಿದ್ದರು. ಇವತ್ತಿಗೂ ಈ ಔಷಧಿಗಳು ಪ್ರಸ್ತುತ. ಏನವು...?

ಅಶ್ವಗಂಧ: ಸೆಕ್ಸುಯಲ್‌ ಸಮಸ್ಯೆ ನಿವಾರಿಸಲು ಅಶ್ವಗಂಧ ಬೆಸ್ಟ್‌ ಔಷಧಿ. ಇದರ ರಸವನ್ನು ಪುರುಷರಿಗೆ ನೀಡಿದರೆ ದೇಹದ ನೈಟ್ರಿಕ್‌ ಆಕ್ಸೈಡ್‌ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಇದರಿಂದ ರಕ್ತನಾಳಗಳು ತೆರೆದುಕೊಂಡು ರಕ್ತ ಎಲ್ಲಾ ಭಾಗಗಳಿಗೂ ಸರಿಯಾಗಿ ಪರಿಚಲನೆಯಾಗುತ್ತದೆ. ಇದರಿಂದ ಸೆಕ್ಸ್‌‌ ಪವರ್‌ ಹೆಚ್ಚುತ್ತದೆ.  

ಶತಾವರಿ: ಶತಾವರಿ ಇದು ಸೆಕ್ಸ್ ಪವರ್ ಹೆಚ್ಚಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದೊಂದು ಉತ್ತಮ ಕಾಮೋತ್ತೇಜಕವಾಗಿದೆ. ಇದನ್ನು ಹೆಚ್ಚಾಗಿ ಮಹಿಳೆಯರು ಸೇವಿಸುತ್ತಾರೆ. ಇದು ಫಿಮೇಲ್‌ ಹಾರ್ಮೋನ್‌ ಲೆವೆಲ್ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ. ಪುರುಷರ ಸ್ಪರ್ಮ್ ಕೌಂಟ್ ಹೆಚ್ಚಲೂ ಸಹಕರಿಸುತ್ತದೆ. 

ತಾಲ್‌ಮಖಾನ: ಇದು ಪುರುಷರಿಗೆ ಉತ್ತಮ. ಪುರುಷರು ಇದನ್ನು ಸೇವಿಸುವುದರೆ ವೀರ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಗುಪ್ತಾಂಗದ ಕಡೆಗೆ ಹೆಚ್ಚಿನ ರಕ್ತ ಪರಿಚಲನೆಯಾಗುವಂತೆ ಮಾಡುತ್ತದೆ. ಸರಿಯಾಗಿ ರಕ್ತ ಪರಿಚಲನೆಯಾದರೆ ಲೈಂಗಿಕ ಜೀವನವೂ ಉತ್ತಮವಾಗಿರುತ್ತದೆ.