Asianet Suvarna News Asianet Suvarna News

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ..?

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ..?

Weekly Horoscope May

ಈ ವಾರವು ನಿಮ್ಮ ಪಾಲಿಗೆ ಹೇಗಿರಲಿದೆ..?

ಮೇಷ
ಔದ್ಯೋಗಿಕವಾಗಿ ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ
ಗಮನಹರಿಸುವಿರಿ. ಆರೋಗ್ಯದಲ್ಲಿ ಸ್ಥಿರತೆ. ಶುಭ
ಕಾರ್ಯಗಳು ಸನ್ನಿಹಿತವಾಗಲಿವೆ. ಬಂಧು ಬಳಗ
ದಿಂದ ನಿಮ್ಮ ಬೆಳವಣಿಗೆಗೆ ಪ್ರೋತ್ಸಾಹ ದೊರೆಯಲಿದೆ. ಸೂಕ್ತ
ನಿರ್ಧಾರಗಳಿಂದ ಮುಂದುವರೆಯಿರಿ. ಗಣೇಶನನ್ನು ಸ್ತುತಿಸಿ.

ವೃಷಭ
ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ
ವಾಗಿ ಯಾವುದೇ ವಿಚಾರಗಳಲ್ಲಿ ಸಕ್ರಿಯವಾಗು
ವುದು ಬೇಡ. ಮನೆಯಲ್ಲಿ ಶುಭಕಾರ್ಯಗಳು
ನೆರವೇರಲಿವೆ. ತಂದೆ-ತಾಯಿಗಳ ಬೆಂಬಲದಿಂದ ನೂತನ
ಉದ್ಯಮವನ್ನು ಆರಂಭಮಾಡುವಿರಿ. ಸ್ನೇಹಿತರೊಂದಿಗೆ ಆರ್ಥಿಕ
ವ್ಯವಹಾರ ಬೇಡ. ಅಳೆದು ತೂಗಿ ನಿರ್ಧಾರ ಕೈಗೊಳ್ಳಿ.

ಮಿಥುನ
ನಿಮ್ಮ ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು
ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಹುಷಾರಾಗಿರಿ.
ಗೆಳೆಯರ ಮಾತಿಗೆ ಹೆಚ್ಚು ಬೆಲೆ ನೀಡುವಿರಿ.
ಆರೋಗ್ಯದ ಕಡೆ ಗಮನವಿರಲಿ. ಹತ್ತಿರದ ಬಂಧುಗಳಿಗೆ ಆರ್ಥಿಕ
ಸಹಾಯ ಮಾಡುವಿರಿ. ಸಂಬಂಧದಲ್ಲಿ ಸಣ್ಣ ಕೋಲಾಹಲ
ವಾಗಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಪ್ರಗತಿ.

ಕಟಕ
ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ
ಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದ
ಕೆಲಸ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ ಕೆಲಸಕ್ಕೆ
ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು ಪೂರ್ವ
ತಯಾರಿಯನ್ನು ಮಾಡಿಕೊಳ್ಳಿ. ಮಿತವ್ಯಯಕ್ಕೆ ಹೆಚ್ಚು
ಪ್ರಾಮುಖ್ಯತೆ ನೀಡಿ. ಮನೆಯವರೊಂದಿಗೆ ಸಂತಸವಾಗಿರಿ.

ಸಿಂಹ
ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ
ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಅತಿ ಭಾವುಕತೆ ಒಳ್ಳೆಯದಲ್ಲ. ತಂದೆ ತಾಯಿ
ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ
ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ
ಪ್ರಗತಿಯಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನಗಳಿವು.

ಕನ್ಯಾ
ಮದುವೆ ಮೊದಲಾದ ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ
ತೊಡಗಿಕೊಳ್ಳುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ
ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು ಎದುರಾಗಲಿವೆ.
ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ ಫಲ
ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಹಾಗೂ
ಶೀಘ್ರ ನಿರ್ಧಾರ ಬೇಡ. ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ.

ತುಲಾ
ಕೆಲಸದ ಒತ್ತಡ ನಿಭಾಯಿಸುವ ಶಕ್ತಿಯನ್ನು ಒಟ್ಟು
ಮಾಡಿಟ್ಟುಕೊಳ್ಳಿ. ಅಗತ್ಯವಾದ ವಿಚಾರಗಳ ಕಡೆಗೆ
ಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ
ಮಾಡಿಕೊಳ್ಳಿ. ಕೋರ್ಟ್ ವ್ಯಾಜ್ಯಗಳಲ್ಲಿ ಮುನ್ನಡೆ ಸಿಗಲಿದೆ.
ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ ಹೆಚ್ಚು
ಉಪಯೋಗವಾಗಲಿದೆ. ಸ್ನೇಹಿತರಿಗೆ ಸಹಾಯ ಮಾಡಿ.

ವೃಶ್ಚಿಕ
ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು
ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವರೊಂದಿಗೆ
ಮೃದುವಾಗಿ ವರ್ತಿಸಿ, ಆರ್ಥಿಕವಾಗಿ ಲಾಭವಾಗಲಿದೆ.
ಕೋಪ ಬಂದಾಗ ಹೆಚ್ಚು ಮಾತನಾಡದೇ ಇರುವುದು ಸೂಕ್ತ.
ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ಮದುವೆ ವಿಚಾರದಲ್ಲಿ
ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿಗೆ ಬೆಲೆ ನೀಡಿ.

ಧನಸ್ಸು
ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ
ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ ಬರಲಿದೆ.

ಮಕರ
ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕು ಬೇಡ.
ಮನೆಯಲ್ಲಿ ಮುನಿಸು ಬೇಡ. ಮಕ್ಕಳ ಪ್ರೀತಿಯಿಂದ
ಹೆಚ್ಚು ಸಂತೋಷಪಡುವಿರಿ. ಅಂದುಕೊಂಡಂತೆ
ಮಹತ್ವದ ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ
ಇಡಿ. ಒಂದೇ ದಿನದಲ್ಲಿ ಹೆಚ್ಚು ಓಡಾಟ ಮಾಡಬೇಕಾದ
ಅನಿವಾರ್ಯತೆ ಸೃಷ್ಟಿಯಾಗಲಿದೆ. ಆರೋಗ್ಯದಲ್ಲಿ ಏರುಪೇರು.

ಕುಂಭ
ಸ್ವಲ್ಪ ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ವಾರ
ಪೂರ್ತಿ ಸಂತಸದಿಂದ ಇರುವಿರಿ. ನಿಧಾನವಾಗಿ
ಯೋಚಿಸಿ ಸಂಬಂಧ ಬೆಸೆಯಲು ಮುಂದಾಗಿ.
ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನುವುದರಲ್ಲಿ ನಂಬಿಕೆ ಇರಲಿ.
ಮನೆಗೆ ಹೊಸ ವಸ್ತುಗಳು ಬರಲಿವೆ. ಧನ ಲಾಭ.

ಮೀನ
ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ
ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಕೈಹಾಕಿದ
ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ ಸಿಗಲಿದೆ. ಹೆಚ್ಚು
ಮೊಬೈಲ್ ಬಳಕೆ ಒಳ್ಳೆಯದಲ್ಲ. ಕೆಲಸದ ಸ್ಥಳದಲ್ಲಿ ಅನಾವಶ್ಯಕ
ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. 

Follow Us:
Download App:
  • android
  • ios