Asianet Suvarna News Asianet Suvarna News

ಈ ವಾರ ನಿಮ್ಮ ಪಾಲಿಗೆ ಹೇಗಿದೆ ಗೊತ್ತೆ..?

ಈ ವಾರ ನಿಮ್ಮ  ಪಾಲಿಗೆ ಹೇಗಿದೆ ಗೊತ್ತೆ..?

Weekly Horoscope April

ಮೇಷ
ಏನೋ ಅಂದುಕೊಂಡಿದ್ದರೂ ಆ ಕಡೆಗೆ ಗಮನ
ಹರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ದುಗುಡ.
ನಿಮ್ಮ ಹತ್ತಿರದವರೊಂದಿಗೆ ಮೃದುವಾಗಿ ವರ್ತಿಸಿ,
ಆರ್ಥಿಕವಾಗಿ ಲಾಭವಾಗಲಿದೆ. ಕೋಪ ಬಂದಾಗ ಹೆಚ್ಚು
ಮಾತನಾಡಲು ಹೋಗಬೇಡಿ. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ
ಮುಖ್ಯ, ನಿಗದಿತವಾಗಿ ಎಲ್ಲಾ ಕೆಲಸ ಮಾಡುವಿರಿ.

ವೃಷಭ
ದೊಡ್ಡ ದೊಡ್ಡ ನಿರ್ಧಾರಗಳನ್ನು ಹೆಚ್ಚು ಸಮಯ
ಮುಂದೂಡಬೇಡಿ. ಮದುವೆ ಮೊದಲಾದ ಶುಭ
ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸ
ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು ಈ
ತಿಂಗಳು ಹೆಚ್ಚಾಗಿ ಬಂದೆರಗಲಿವೆ. ಎಲ್ಲವನ್ನೂ ಶಾಂತ ಚಿತ್ತದಿಂದ
ಎದುರಿಸಿದರೆ ಒಳ್ಳೆಯ ಫಲ ದೊರಕಲಿದೆ.

ಮಿಥುನ
ಮೌನವಾಗಿದ್ದಷ್ಟೂ ಒಳ್ಳೆಯದು. ವ್ಯಾಪಾರಕ್ಕೆ
ಸಂಬಂಧಿಸಿದಂತೆ ಯಾವ ಕಾರಣಕ್ಕೂ ದುಡುಕ
ಕೂಡದು. ಮನೆಯಲ್ಲಿ ಮುನಿಸು ಬೇಡ. ಮಕ್ಕಳ
ಪ್ರೀತಿಯಿಂದ ಹೆಚ್ಚು ಸಂತೋಷಪಡುವಿರಿ. ಕಲಾ
ಚಟುವಟಿಗೆಗಳು ಹೆಚ್ಚಾಗಲಿವೆ. ಅಂದುಕೊಂಡಂತೆ ಮಹತ್ವದ
ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ ಇಡಿ.

ಕಟಕ
ಒತ್ತಡದಿಂದ ಹೊರಗೆ ಬರುವಿರಿ. ನೆಮ್ಮದಿಯ
ನಾಳೆಗಾಗಿ ಇಂದಿನಿಂದಲೇ ತಯಾರಿ ಮಾಡಿಕೊಳ್ಳಿ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಳ್ಳಿ. ಹತ್ತಿರದ ಬಂಧುಗಳಿಗೆ ಆರ್ಥಿಕ
ಸಹಾಯ ಮಾಡುವಿರಿ. ಆರೋಗ್ಯದಲ್ಲಿ ಕೊಂಚ ಏರುಪೇರು

ಸಿಂಹ
ಅತಿ ಭಾವುಕತೆ ಒಳ್ಳೆಯದಲ್ಲ. ಜಗತ್ತು
ನೀವಂದುಕೊಂಡ ಹಾಗೆ ಇಲ್ಲ. ಎಲ್ಲರೊಂದಿಗೂ
ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣ
ದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ತಂದೆ ತಾಯಿ
ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ
ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ಪ್ರಗತಿ.

ಕನ್ಯಾ
ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ
ಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದ
ಕೆಲಸ ಆಯ್ಕೆ ಮಾಡಿಕೊಳ್ಳಿ. ಹೆಚ್ಚಿನ ಭಾರವನ್ನು
ಹೊತ್ತು ಒದ್ದಾಡುವುದು ತರವಲ್ಲ. ತುಂಬಾ ಹಿಂದೆ ಮಾಡಿದ
ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು
ಪೂರ್ವ ತಯಾರಿಯನ್ನು ಮಾಡಿಕೊಳ್ಳಿ. ಶುಭವಾರ್ತೆ ಕೇಳುವಿರಿ.

ತುಲಾ
ಲಕ್ಷ್ಮೀ ಮನೆಗೆ ಬರುತ್ತಾಳೆ. ಖುಷಿಯ ವಿಷಯ
ವಾದರೂ ಜಾಸ್ತಿ ಸಂಭ್ರಮ ಬೇಡ. ಆರೋಗ್ಯದ
ಮೇಲೆ ಜಾಸ್ತಿ ನಿಗಾ ಇರಲಿ. ಕೆಲಸದ ಒತ್ತಡ
ನಿಭಾಯಿಸುವ ಶಕ್ತಿಯನ್ನು ಒಟ್ಟು ಮಾಡಿಟ್ಟುಕೊಳ್ಳಿ. ಅಗತ್ಯವಾದ
ವಿಚಾರಗಳ ಕಡೆಗೆ ಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ
ಮಾಡಿಕೊಳ್ಳಿ. ವಾಸಸ್ಥಳವನ್ನು ಬದಲಾಯಿಸಬೇಕಾಗುತ್ತದೆ.

ವೃಶ್ಚಿಕ
ನೀವು ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ
ಸಿಗಲಿದೆ. ಹೆಚ್ಚು ಮೊಬೈಲ್ ಬಳಕೆ ಒಳ್ಳೆಯದಲ್ಲ.
ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ
ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಕೆಲಸದ ಸ್ಥಳದಲ್ಲಿ
ಅನಾವಶ್ಯಕ ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. ನಿಮ್ಮ
ಕೆಲಸಗಳಿಂದ ಹೆತ್ತವರು ಹೆಮ್ಮೆ ಪಡಲಿದ್ದಾರೆ

ಧನಸ್ಸು
ಮೊದಲು ನಿಮ್ಮ ಕೆಲಸಗಳ ಕಡೆಗೆ ಗಮನವಿಡಿ.
ತದನಂತರ ಸ್ನೇಹಿತರಿಗೆ ನೆರವಾಗಿ. ಔದ್ಯೋಗಿಕವಾಗಿ
ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ.
ಸುಂದರವಾದ ಕ್ಷೇತ್ರಗಳಿಗೆ ಗೆಳೆಯರೊಂದಿಗೆ ಪ್ರವಾಸ ಮಾಡುವ
ಯೋಗ ಬರಲಿದೆ. ಹೊಸ ವಸ್ತು ಕೊಳ್ಳುವ ಯೋಗವಿದೆ.

ಮಕರ
ಸಂಬಂಧದಲ್ಲಿ ಸಣ್ಣ ಕೋಲಾಹಲ. ನಿಮ್ಮ
ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು
ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಅಗತ್ಯಕ್ಕಿಂತ
ಜಾಸ್ತಿಯೇ ಹುಷಾರಾಗಿರಿ. ಅಮ್ಮನ ಮಾತಿಗೆ ಹೆಚ್ಚು ಬೆಲೆ
ನೀಡುವಿರಿ. ಆರೋಗ್ಯದ ಕಡೆ ಗಮನವಿರಲಿ

ಕುಂಭ
ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ. ಹೊಸ
ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ
ಎಚ್ಚರದಿಂದಿರಿ. ಮನೆಯ ವಾಸ್ತು ದೋಷ
ನಿವಾರಣೆಗಾಗಿ ಸರಿಯಾದ ಮಾರ್ಗ ಕಂಡುಕೊಳ್ಳಿ. ಅತಿಯಾದ
ದುಂದು ವೆಚ್ಚ ಬೇಡ. ಹೊಸ ವಾಹನ ಕೊಳ್ಳುವ ಯೋಜನೆಯನ್ನು
ಕೊಂಚ ಮುಂದಕ್ಕೆ ಹಾಕಿ. ದಾಯಾದಿಗಳೊಂದಿಗೆ ಕಲಹ ಬೇಡ.

ಮೀನ
ವಾರ ಪೂರ್ತಿ ಸಂತಸದಿಂದ ಇರುವಿರಿ. ಜಾಣತನದ
ಮಾತು ಲಾಭ ತಂದುಕೊಡಲಿದೆ. ಸ್ವಲ್ಪ ಯೋಚಿಸಿ
ಮುಂದಡಿಯಿಟ್ಟರೆ ಧನಲಾಭ. ಮನಸ್ಸು ಮಾಡಿ
ಸಂಬಂಧ ಬೆಸೆಯಲು ಮುಂದಾಗಿ. ಆಗುವುದೆಲ್ಲಾ ಒಳ್ಳೆಯದಕ್ಕೆ
ಅನ್ನುವುದರಲ್ಲಿ ನಂಬಿಕೆ ಇರಲಿ. ಮದುವೆಯ ಯೋಗವಿದೆ.

Follow Us:
Download App:
  • android
  • ios