Asianet Suvarna News Asianet Suvarna News

(ವಿಡಿಯೋ)ಸ್ನಾನಕ್ಕೆ ಹೊರಟವಳ ಬಳಿ ಸೆಲ್ಫೀ ಕಳುಹಿಸೆಂದ ಪ್ರಿಯಕರ: ಮುಂದೇನಾಯ್ತು ಗೊತ್ತಾ?

ಇಂಟರ್'ನೆಟ್ ಮಹಿಮೆ ಅದೆಷ್ಟಿದೆ ಎಂದರೆ ದಿನಕ್ಕೆ ಕನಿಷ್ಟ ಪಕ್ಷ ಎರಡು ಫೋಟೋಗಳನ್ನು ಶೇರ್ ಮಾಡಿಲ್ಲವೆಂದಾದರೆ ದಿನವೇ ಪೂರ್ಣಗೊಳ್ಳುವುದಿಲ್ಲ. ಇನ್ನು ಸೆಲ್ಫೀ ಕ್ರೇಜ್ ಹುಟ್ಟಿದ ಬಳಿಕವಂತೂ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಫೋಟೋ ಕಳಿಸು ಎಂದ ಮರುಕ್ಷಣವೇ ಕಳಿಸಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಜಗಳವಾಡುತ್ತಾರೆ. ರಿಲೇಷ್ಶಿಪ್ ಆರಂಭವಾದಾಗ ಸೆಲ್ಫೀ ಕಳುಹಿಸಲು ಹಿಂದೇಟು ಹಾಕಿದರೂ ದಿನಗಳೆದಂತೆ ಫೋಟೋ ಕಳುಹಿಸವುದು ಸಾಮಾನ್ಯವಾಗುತ್ತದೆ. ಹುಡುಗಿಯರಂತೂ ಮುಂದೇನಾಗಬಹುದು ಎಂಬುವುದನ್ನು ಯೋಚಿಸದೆ ಕೇಳಿದ ಫೋಟೋಗಳನ್ನು ಕಳುಹಿಸುತ್ತಿರುತ್ತಾರೆ.

Watch This Video Before Sending Nude photos

'ಸಂಬಂಧಗಳಲ್ಲಿ ಪ್ರೀತಿ ಇರುತ್ತೋ ಇಲ್ಲವೋ ಆದರೆ ರೊಮ್ಯಾನ್ಸ್ ಮಾತ್ರ ಇದ್ದೇ ಇರುತ್ತದೆ' ಇಂತಹುದೇ ಮನಸ್ಥಿತಿ ಇತ್ತೀಚಿನ ಸಂಬಂಧಗಳಲ್ಲಿ ಕಂಡು ಬರುತ್ತದೆ. ಕಾಲ ಬದಲಾಗಿದೆ ಜನರು ಪತ್ರಗಳನ್ನು ಬಿಟ್ಟು ಮೊಬೈಲ್ ಹಾಗೂ ಮೊಬೈಲ್ ತೊರೆದು ಇಂಟರ್'ನೆಟ್ ಮೂಲಕ ಮಾತುಕತೆ ನಡೆಸುತ್ತಿದ್ದಾರೆ. ಇದರೊಂದಿಗೆ ಜನರಲ್ಲಿ ಪ್ರೀತಿಯ ಕುರಿತಾದ ಕಲ್ಪನೆಯೂ ಬದಲಾಗಿದೆ.

ಇನ್ನು ಇಂಟರ್'ನೆಟ್ ಮಹಿಮೆ ಅದೆಷ್ಟಿದೆ ಎಂದರೆ ದಿನಕ್ಕೆ ಕನಿಷ್ಟ ಪಕ್ಷ ಎರಡು ಫೋಟೋಗಳನ್ನು ಶೇರ್ ಮಾಡಿಲ್ಲವೆಂದಾದರೆ ದಿನವೇ ಪೂರ್ಣಗೊಳ್ಳುವುದಿಲ್ಲ. ಇನ್ನು ಸೆಲ್ಫೀ ಕ್ರೇಜ್ ಹುಟ್ಟಿದ ಬಳಿಕವಂತೂ ಬಾಯ್ ಫ್ರೆಂಡ್/ ಗರ್ಲ್ ಫ್ರೆಂಡ್ ಫೋಟೋ ಕಳಿಸು ಎಂದ ಮರುಕ್ಷಣವೇ ಕಳಿಸಬೇಕಾಗುತ್ತದೆ. ಇಲ್ಲವೆಂದಾದಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಜಗಳವಾಡುತ್ತಾರೆ. ರಿಲೇಷ್ಶಿಪ್ ಆರಂಭವಾದಾಗ ಸೆಲ್ಫೀ ಕಳುಹಿಸಲು ಹಿಂದೇಟು ಹಾಕಿದರೂ ದಿನಗಳೆದಂತೆ ಫೋಟೋ ಕಳುಹಿಸವುದು ಸಾಮಾನ್ಯವಾಗುತ್ತದೆ. ಹುಡುಗಿಯರಂತೂ ಮುಂದೇನಾಗಬಹುದು ಎಂಬುವುದನ್ನು ಯೋಚಿಸದೆ ಕೇಳಿದ ಫೋಟೋಗಳನ್ನು ಕಳುಹಿಸುತ್ತಿರುತ್ತಾರೆ.

ಆದರೆ ಹೀಗೆ ಮುಂದಾಲೋಚನೆ ಮಾಡದೆ ಫೋಟೋ ಕಳುಹಿಸುವವರಲ್ಲಿ ಜಾಗೃತಿ ಮೂಡಿಸಲೆಂದೇ ವಿಡಿಯೋವೊಂದನ್ನು ಬಿಡುಗಡೆಗೊಳಿಸಲಾಗಿದ್ದು, ಬಹುಶಃ ಇದನ್ನು ನೋಡಿದ ಬಳಿಕವಾದರೂ ಫೋಟೋ ಕಳುಹಿಸುವ ಮೊದಲು ಕೊಂಚ ಯೋಚಿಸುವ ಸಾಧ್ಯತೆಗಳಿವೆ.

 

 

 

 

 

 

 

 

 

 

 

ಯುವತಿಯೊಬ್ಬಳು ಸ್ನಾನಕ್ಕೆ ಹೊರಟಾಗ ಪ್ರಿಯಕರ ಫೋಟೋ ಕಳುಹಿಸಲು ಕೇಳಿಕೊಂಡಿದ್ದಾನೆ. ಮೊದಲು ವಿರೋಧಿಸಿದರೂ ಬಳಿಕ ಆಕೆ ಒಪ್ಪಿಕೊಂಡು ತನ್ನ ಅರೆಬೆತ್ತಲೆ ಸೆಂಡ್ ಮಾಡುತ್ತಾಳೆ. ಆದರೆ ಅವಸರದಿಂದ ಪ್ರಿಯಕರನಿಗೆ ಕಳುಹಿಸುವ ಬದಲು ತನ್ನ ತಂದೆಗೆ ಕಳುಇಸುತ್ತಾಳೆ. ಇದನ್ನು ಕಂಡ ತಂದೆ ಮಗಳ ಕ್ಲಾಸ್ ತೆಗೆದುಕೊಳ್ಳುವುದರೊಂದಿಗೆ, ತಾಯಿಗೆ ಈ ಕುರಿತಾಗಿ ತಿಳಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸುತ್ತಾರೆ. ಮಗಳ ಬುದ್ಧಿ ನೆಟ್ಟಗಾಗಲಿ ಎಂದು ಹೆಂಡತಿಗೆ ದೂರು ನೀಡುವ ಭರದಲ್ಲಿ, ಆ ಫೋಟೋ ಹೆಂಡತಿಗೆ ಸೆಂಡ್ ಮಾಡುವ ಬದಲು ತನ್ನ ಕಚೇರಿಯ ಗ್ರೂಪ್'ಗೆ ಕಳುಹಿಸುಚವುದೇ?. ಅರೆಬೆತ್ತಲೆ ಫೋಟೋ ಕಂಡ ಸದಸ್ಯರು ಮಾತ್ರ ಅಶ್ಲೀಲವಾಗಿ ಮೆಸೇಜ್ ಕಳುಹಿಸಲಾರಂಭಿಸುತ್ತಾರೆ. ಹೀಗೆ ಮಗಳಿಗೆ ಪಾಠ ಕಲಿಸುವ ಭರದಲ್ಲಿ ತಂದೆಯೇ ದೊಡ್ಡ ತಪ್ಪು ಮಾಡುತ್ತಾರೆ.

ಸಾಮಾಜಿಕ ಕಳಕಳಿ ಹುಟ್ಟಿಸುವ ಸಲುವಾಗಿ ಈ ವಿಡಿಯೋವನ್ನು ಮಾಡಿದ್ದು, ಡಿಜಿಟಲೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ ನಾವೆಷ್ಟು ಜಾಗೃತರಾಗಿರಬೇಕೆಂಬುವುದನ್ನು ತೋರಿಸಿಕೊಡುತ್ತದೆ. ನಿಮಗೂ ಸೆಲ್ಫೀ ಕ್ರೇಜ್ ಇದ್ದರೆ ಸ್ವಲ್ಪ ಜಾಗರೂಕರಾಗಿರಿ.

 

Follow Us:
Download App:
  • android
  • ios