Asianet Suvarna News Asianet Suvarna News

ವಿಶೇಷ ಚೇತನ ಗೆಳೆಯನಿಗೆ ಕೈತುತ್ತು ತಿನ್ನಿಸಿದ ಬಾಲಕ: ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ

ಇತಿ-ಮಿತಿಗಳಿಲ್ಲದ ಸಂಬಂಧವೇ ಗೆಳೆತನ| ವಿಶೇಷ ಚೇತನ ಗೆಳೆಯನಿಗೆ ತಾನೇ ಕೈತುತ್ತು ತಿನ್ನಿಸುತ್ತಿರುವ ಬಾಲಕ| ನೆಟ್ಟಿಗರ ಮನಗೆದ್ದ  ಸೆಕೆಂಡ್‌ನ ಈ ವಿಡಿಯೋ

Video of a school boy feeding his differently abled friend goes viral wins hearts
Author
Bangalore, First Published Jun 20, 2019, 3:32 PM IST

ನವದೆಹಲಿ[ಜೂ.20]: ಜಗತ್ತಿನಲ್ಲಿ ಗೆಳೆತನವನ್ನು ಮೀರಿಸುವಂತಹುದ್ದು ಮತ್ತೊಂದಿಲ್ಲ. ಈ ಸಂಬಂಧ ಅದೆಷ್ಟು ಪವಿತ್ರವೆಂದರೆ ಇಲ್ಲಿ ಮೇಲು-ಕೀಳು, ಒಳ್ಳೆಯದು-ಕೆಟ್ಟದ್ದು, ಸರಿ-ತಪ್ಪು ಇಂತಹ ಯಾವುದೇ ನಿಯಮಗಳು ಇಲ್ಲಿ ಅನ್ವಯಿತಿಸುವುದಿಲ್ಲ. ಹೌದು ಎಲ್ಲಾ ಖುಷಿ ಸಂಭ್ರಮಗಳಲ್ಲಿ ನಮ್ಮೊಂದಿಗಿರುವ ಗೆಳೆಯರು, ಕಷ್ಟ ಕಾಲದಲ್ಲಿಯೂ ನಮ್ಮೊಂದಿಗಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಇಂತಹುದೇ ಗೆಳೆತನದ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಗೆಳೆಯರ ಈ ಬಂಧ ಎಲ್ಲರನ್ನೂ ಭಾವುಕರನ್ನಾಗಿಸಿದೆ. 

ಟ್ವಿಟರ್ ನಲ್ಲಿ ವೈರಲ್ ಆದ ಕೇವಲ 30 ಸೆಕೆಂಡ್ ನ ಈ ವಿಡಿಯೋದಲ್ಲಿ ಶಾಲಾ ಮಕ್ಕಳು ಕುಳಿತು ಊಟ ಮಾಡುತ್ತಿದ್ದಾರೆ. ಈ ಮಕ್ಕಳ ನಡುವೆ ಓರ್ವ ಬಾಲಕ ತನ್ನ ಹತ್ತಿರ ಕುಳಿತಿದ್ದ ತನ್ನ ಗೆಳೆಯನಿಗೆ ತಾನೇ ಕೈಯ್ಯಾರೆ ಊಟ ತಿನ್ನಿಸುತ್ತಿದ್ದಾನೆ. ವಿಶೇಷ ಚೇತನ ಗೆಳೆಯ ಊಟ ಮಾಡಲಾಗದೆ ಕುಳಿತಿದ್ದಾಗ, ಈ ಬಾಲಕನೇ ಆತನಿಗೆ ಕೈ ತುತ್ತು ನೀಡುತ್ತಿರುವ ದೃಶ್ಯ ನಿಜವಾದ ಗೆಳೆತನವೆಂದರೆ ಏನು ಎಂಬುವುದಕ್ಕೆ ಸಾಕ್ಷಿ ಎಂಬಂತಿದೆ. ಒಂದು ತುತ್ತು ಗೆಳೆಯನಿಗೆ ತಿನ್ನಿಸಿ, ಮತ್ತೊಂದು ತುತ್ತು ತಾನೇ ತಿನ್ನುವ ಪರಿಶುದ್ಧ ಗೆಳೆತನದ ವಿಡಿಯೋಗೆ ಹಲವರ ಹೃದಯ ಗೆದ್ದಿದೆ.

Follow Us:
Download App:
  • android
  • ios