ಇದ್ರಲ್ಲಿ ಯಾವ ವಾಹನ ಫಸ್ಟ್ ಹೋಗ್ಬೇಕು? ನೀವು ಉತ್ತರ ನೀಡಬಲ್ಲಿರಾ?

ಯುಪಿಎಸ್ಸಿ ಪರೀಕ್ಷೆಯಲ್ಲಿ ಕೆಲವೊಂದು ಟ್ರಿಕ್ಕಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಭ್ಯರ್ಥಿಗಳು ತಲೆಗೆ ಹುಳಬಿಟ್ಟುಕೊಂಡು ಉತ್ತರ ನೀಡ್ಬೇಕಾಗುತ್ತದೆ. ಕೆಲ ಪ್ರಶ್ನೆಗಳು ಬಹಳ ಕನ್ಫೂಸ್ ಮಾಡುತ್ವೆ. ಮೇಲಿಂದ ಉತ್ತರ ಸರಿ ಎನ್ನಿಸಿದ್ರೂ ಒಳಹೊಕ್ಕು ನೋಡ್ದಾಗ ಅರ್ಥವೇ ಬೇರೆ ಇರುತ್ತೆ. 
 

Upsc Ethics Question Viral as which car go first among four roo

ಪ್ರತಿ ವರ್ಷ ಲಕ್ಷಾಂತರ ಜನರು  ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಪರೀಕ್ಷೆ ಬರೆಯುತ್ತಾರೆ.  ಆದರೆ ಕೆಲವೇ ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಪಾಸ್ ಆಗಿ ಹುದ್ದೆ ಅಲಂಕರಿಸುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಎದುರಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೆಲವು ಪ್ರಶ್ನೆಗಳು ಅಭ್ಯರ್ಥಿಗಳನ್ನು ಗೊಂದಲಕ್ಕೆ ನೂಕುತ್ತದೆ. ಪ್ರಶ್ನೆ ಒಂದೇ ಇದ್ರೂ ಅದನ್ನು ನೀವು ಸರಿಯಾಗಿ ಅರ್ಥೈಸಿಕೊಂಡು ಉತ್ತರ ನೀಡಬೇಕಾಗುತ್ತದೆ. ಅನೇಕ ಬಾರಿ ನಿಮಗೆ ಸರಿ ಎನ್ನಿಸಿದ ಉತ್ತರ ತಪ್ಪಾಗಿಯೂ ಇರಬಹುದು. ಯುಪಿಎಸ್ಸಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಈಗ ಮತ್ತೊಂದು ಪ್ರಶ್ನೆ ವೈರಲ್ ಆಗಿದೆ.  

ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್' (IAS) ಅಧಿಕಾರಿ  ಜಿತಿನ್ ಯಾದವ್ ಅವರು ಒಂದು ಫೋಟೋವನ್ನು ಟ್ವಿಟರ್ (Twitter) ಮಾಡಿದ್ದಾರೆ.  @Jitin_IAS ಹೆಸರಿನ ಟ್ವಿಟರ್ ಖಾತೆಯಲ್ಲಿ ಅವರು ಫೋಟೋ (Photo) ವನ್ನು ಟ್ವೀಟ್ ಮಾಡಿದ್ದಾರೆ. ಅವರು ಹಾಕಿರುವ ಫೋಟೋದಲ್ಲಿ ನಾವು ನಾಲ್ಕು ವಾಹನಗಳನ್ನು ನೋಡಬಹುದು. ಒಂದು ದೊಡ್ಡ ಸರ್ಕಲ್ ಇದ್ದು, ಅದ್ರ ನಾಲ್ಕೂ ಕಡೆ ರಸ್ತೆಗಳಿವೆ. ಎಲ್ಲ ರಸ್ತೆಯಲ್ಲಿ ಒಂದೊಂದು ವಾಹನವಿದೆ. ಒಂದು ಪೊಲೀಸ್ ವಾಹನ ಇನ್ನೊಂದು ಪ್ರೆಸಿಡೆಂಟ್ ವಾಹನ ಮತ್ತೊಂದು ಅಂಬ್ಯುಲೆನ್ಸ್ ಹಾಗೂ ಇನ್ನೊಂದು ಅಗ್ನಿಶಾಮಕ ದಳದ ವಾಹನವಾಗಿದೆ. ಯುಪಿಎಸ್ಸಿ (UPSC) ಎಥಿಕ್ಸ್ ಪ್ರಶ್ನೆ. ಯಾವ ವಾಹನ ಮೊದಲು ಹೋಗಬೇಕು? ನೀತಿಶಾಸ್ತ್ರದ ಪಠ್ಯಕ್ರಮದ ಪ್ರಕಾರ ವಿವರಣೆಯೊಂದಿಗೆ ಮೊದಲಿನಿಂದ ಕೊನೆಯವರೆಗೆ ಎಲ್ಲಾ 4 ವಾಹನಗಳನ್ನು ಜೋಡಿಸಿ ಎಂದು ಅವರು ಶೀರ್ಷಿಕೆ ಹಾಕಿದ್ದಾರೆ.

ನೀವು ಜೀನಿಯಸ್ಸಾ? ಹಾಗಿದ್ರೆ ಹತ್ತೇ ಸೆಕೆಂಡಲ್ಲಿ ಫೋಟೋದಲ್ಲಿ ನಿಮಗೆಷ್ಟು M ಕಾಣಿಸ್ತಿದೆ ಹೇಳಿ

ಸಾಮಾಜಿಕ ಜಾಲತಾಣದಲ್ಲಿ (Social Media) ಜಿತಿನ್ ಯಾದವ್ ಪೋಸ್ಟ್ ಮಾಡಿರುವ ಟ್ವಿಟರ್ (Twitter) ವೈರಲ್ ಆಗಿದೆ. ಜನರು ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಈ ವರೆಗೆ ಈ ಟ್ವೀಟನ್ನು ಎರಡು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕ ಬಳಕೆದಾರರು ಪ್ರಶ್ನೆಯನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಮೊದಲ ಅಂಬ್ಯುಲೆನ್ಸ್, ಎರಡನೇ ಅಗ್ನಿಶಾಮಕ ಎಂಜಿನ್, ಮೂರನೇಯದು ಪೊಲೀಸ್ ಕಾರು ಮತ್ತು ಕೊನೆಯದಾಗಿ ಅಧ್ಯಕ್ಷೀಯ ಕಾರು ಹೋಗ್ಬೇಕು ಎಂದು ಹೆಚ್ಚಿನ ಬಳಕೆದಾರರು ಹೇಳಿದ್ದಾರೆ. ಮತ್ತೆ ಕೆಲವರು ಅಗ್ನಿಶಾಮಕ ವಾಹನಕ್ಕೆ ಮೊದಲ ಅವಕಾಶ ನೀಡಬೇಕು ಎಂದಿದ್ದಾರೆ. ಎರಡನೇಯ ಸ್ಥಾನವನ್ನು ಪೊಲೀಸ್ ವಾಹನಕ್ಕೆ, ಮೂರನೇ ಸ್ಥಾನವನ್ನು ಅಂಬ್ಯುಲೆನ್ಸ್ ಗೆ ಮತ್ತು ಕೊನೆಯದಾಗಿ ಪ್ರೆಸಿಡೆಂಟ್ ವಾಹನಕ್ಕೆ ಅವಕಾಶ ನೀಡ್ಬೇಕು ಎಂದಿದ್ದಾರೆ.  

ಭಾರತದಲ್ಲಿ ಅಧ್ಯಕ್ಷರ ಕಾರು ಹೋಗುವ ವೇಳೆ ಟ್ರಾಫಿಕ್ (Traffic) ಇರೋದಿಲ್ಲ. ಯಾವುದೇ ವಾಹನ ಸಂಚರಿಸೋದಿಲ್ಲ. ಅದ್ಮೇಲೆ ಈ ಪ್ರಶ್ನೆ ಹುಟ್ಟಿಕೊಳ್ಳೋದಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಯಾವ ಕಾರಿನ ಲೈಟ್ ಆನ್ ಆಗಿದೆ ಎಂಬುದನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಇನ್ನೊಬ್ಬರು ಬಹಳ ಭಿನ್ನವಾಗಿ ಬರೆದಿದ್ದಾರೆ. ಮೊದಲು ಪೊಲೀಸರು ನಂತ್ರ ಅಧ್ಯಕ್ಷರು ಆನಂತ್ರ ಅಂಬ್ಯುಲೆನ್ಸ್ ಮತ್ತೆ ಫೈರ್ ವಾಹನಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ. 

ಸಮಂತಾಗೆ ಕಾಯೋ ಟೈಮಲ್ಲಿ ಇಡ್ಲಿ ಹೊಟೇಲ್ ತೆಗೀಬೇಕು ಅಂದುಕೊಂಡಿದ್ರಂತೆ ವಿಜಯ ದೇವರಕೊಂಡ!

ಮತ್ತೆ ಕೆಲವರು ಕೇಳಿರುವ ಪ್ರಶ್ನೆಯೇ ತಪ್ಪು ಎಂದಿದ್ದಾರೆ. ಸರ್ಕಲ್ ನಲ್ಲಿ ವಾಹನಗಳು ಎದುರು ಬದುರು ನಿಂತಿರುವ ಕಾರಣ, ಒಂದು ವಾಹನ ಇನ್ನೊಂದು ವಾಹನದ ಪಕ್ಕದಲ್ಲಿ ಹೋಗ್ಬಹುದು. ನಾಲ್ಕೂ ವಾಹನಗಳು ಒಂದರ ಹಿಂದೆ ಒಂದು ನಿಂತಿದ್ದರೆ ಯಾರು ಮೊದಲು ಹೋಗ್ಬೇಕಿತ್ತು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios