ಉಪ್ಪು ಕಮ್ಮಿ ಎಂದು ಕೆಲವರು ಅಡುಗೆಗೆ ಮೇಲುಪ್ಪು ಹಾಕಿ ಕೊಳ್ತಾರೆ. ಇದು ರಕ್ತದೊತ್ತಡ, ಹೊಟ್ಟೆ ಕ್ಯಾನ್ಸರ್, ತೂಕದಲ್ಲಿ ಏರು-ಪೇರು ಮತ್ತು ಆಸ್ತಮಾದಂಥ ರೋಗಗಳಿಗೂ ಕಾರಣವಾಗಬಹುದು. ಅಲ್ಲದೇ ಮೇಲುಪ್ಪು ಹೆಚ್ಚಾಗಿ ಬಳಸುವವರಿಗೆ ಹೃದಯಾಘಾತ , ಮೂತ್ರಪಿಂಡ ಸಮಸ್ಯೆಯಲ್ಲದೇ, ರಕ್ತದ ಸುಗಮ ಸಂಚಾರಕ್ಕೆ ಕುತ್ತು ಹಾಗೂ ನರ ವ್ಯವಸ್ಥೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ, ಎನ್ನುತ್ತಾರೆ ಡಯಟಿಷಿಯನ್ಸ್.

ಅಡುಗೆ ಮಾಡುವಾಗಲೇ ಹಾಕಿರುವ ಉಪ್ಪು, ಸರಿಯಾಗಿ ಕರಗುವುದರಿಂದ, ದೇಹದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ. ಅದರೆ, ಮೇಲುಪ್ಪು ಹಾಕಿಕೊಳ್ಳುವುದರಿಂದ ಅದು ಆಹಾರದೊಡನೆ ಸರಿಯಾಗಿ ಬೆರೆಯದೇ ಅನಾರೋಗ್ಯ ಕಾಡುವಂತೆ ಮಾಡುತ್ತದೆ. ಇದರಿಂದಲೇ ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಂಥ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

ಹಾಗಂತ ಕಡಿಮೆ ಉಪ್ಪು ಸೇವಿಸುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಲೂ ಕಡಿಮೆ ರಕ್ತದೊತ್ತಡದಂಥ ಸಮಸ್ಯೆಗಳು ಕಾಡೋ ಸಾಧ್ಯತೆ ಇರುತ್ತದೆ. ದಿನಕ್ಕೆ ಸುಮಾರು ಎರಡು ಸ್ಪೂನ್ ಉಪ್ಪು ಬಳಸಿದರೆೊಳಿತು, ಎನ್ನುವುದು ತಜ್ಞರ ಅಭಿಪ್ರಾಯ.