ಮನೆಯಲ್ಲಿರುವ ಹಳೆಯ, ಬಣ್ಣಬಣ್ಣದ ಛತ್ರಿಗಳನ್ನು ಗುಜರಿಗೆ ಎಸೆಯುವ ಬದಲು, ಅವುಗಳಿಂದ ಮನೆಯನ್ನು ಅಲಂಕಾರ ಮಾಡಬಹುದು. ವಾಲ್ ಡೆಕೋರೇಷನ್, ಬ್ಯಾಗ್ ತಯಾರಿಕೆ, ಪ್ಲಾಂಟರ್ ಹೀಗೆ ಹಲವು ವಿಧಗಳಲ್ಲಿ ಮರುಬಳಕೆ ಮಾಡುವುದು ಹೇಗೆಂದು ತಿಳಿಯಿರಿ.

ಕಳೆದ ವರ್ಷ ಮಳೆಗಾಲದಲ್ಲಿ ಖರೀದಿಸಿದ ಕಲರ್ ಕಲರ್ ಛತ್ರಿಗಳು ಬಳಿಕ ಉಪಯೋಗಿಸದೆ ಹಳೆಯದಾಗಿದ್ರೆ ಅವುಗಳನ್ನು ಗುಜರಿಗೆ ಹಾಕಲು ಯೋಚಿಸಿದ್ದೀರಾ? ಬೇಡ. ಛತ್ರಿಗಳು ಹಳೇದಾಗಿದ್ರೆ, ಅದನ್ನ ಗುಜರಿಗೆ ಹಾಕೋ ಯೋಚನೆ ಬಿಟ್ಟುಬಿಡಿ. ಯಾಕಂದ್ರೆ, ಈ ಹಳೆ ಛತ್ರಿಗಳನ್ನು ಬಳಸಿ ನೀವು ಹಲವು ರೀತಿಯಲ್ಲಿ ಕ್ರಿಯೆಟಿವ್ ಆಗಿ ಆಲಂಕರಿಸುವ ಮೂಲಕ ಮನೆಗೆ ಹೊಸ ಲುಕ್ ನೀಡಬಹುದು. ಛತ್ರಿಯ ಬಟ್ಟೆ ಚೆನ್ನಾಗಿದ್ದು, ಅದರ ಕಡ್ಡಿಗಳು ಮುರಿದು ಹೋಗಿದ್ರೂ ಚಿಂತೆ ಇಲ್ಲ. ವಾಲ್ ಡೆಕೋರೇಷನ್‌ನಿಂದ ಹಿಡಿದು ಬಾಲ್ಕನಿ ಅಲಂಕಾರದವರೆಗೆ, ಸಣ್ಣ ಅಥವಾ ದೊಡ್ಡ ಛತ್ರಿಗಳನ್ನು ನೀವು ಕ್ರಿಯೇಟಿವ್ ಆಗಿ ಬಳಸಬಹುದು. ಹಾಗಾದ್ರೆ, ಹಳೆ ಛತ್ರಿಗಳನ್ನು ಮತ್ತೆ ಬಳಸುವುದು ಹೇಗೆ ಅಂತ ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಛತ್ರಿಯಿಂದ ಮಾಡಿ ವಾಲ್ ಡೆಕೋರೇಷನ್

ಹಳೆ ಛತ್ರಿಗಳನ್ನು ಬಳಸಿ ನೀವು ಮನೆಯ ಒಳಾಂಗಣ ಗೋಡೆಯನ್ನು ಅಲಂಕಾರ ಮಾಡಬಹುದು. ದೊಡ್ಡ ಛತ್ರಿ ಜೊತೆಗೆ ಸಣ್ಣ ಛತ್ರಿಗಳನ್ನೂ ನೇತು ಹಾಕಿದರೆ, ನೋಡಲು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ. ನೀವು ಛತ್ರಿಯ ಬಟ್ಟೆಯನ್ನು ಅರ್ಧಕ್ಕೆ ಕತ್ತರಿಸಿ, ಅದರಿಂದಲೂ ಗೋಡೆಗೆ ಒಂದು ಹೊಸ ಬಗೆಯ ಲುಕ್ ಕೊಡಬಹುದು.

ಛತ್ರಿಯ ಬಟ್ಟೆಯಿಂದ ಫ್ಲೋರಲ್ ಬ್ಯಾಗ್ ಮಾಡಿ!

ಛತ್ರಿಗೆ ಬಳಕೆಯಾಗುವ ವಾಟರ್ ರೆಸಿಸ್ಟೆಂಟ್ ಬಟ್ಟೆ ಉತ್ತಮ ಗುಣಮಟ್ಟದ್ದು. ಹೀಗಾಗಿ ನಿಮ್ಮ ಛತ್ರಿಯ ಕಡ್ಡಿಗಳು ಅಥವಾ ಹ್ಯಾಂಡಲ್ ಮುರಿದಿದ್ದರೂ ಬಟ್ಟೆ ಹಾಳಾಗದೆ, ಉತ್ತಮ ಸ್ಥಿತಿಯಲ್ಲಿದ್ದರೆ ಸ್ಥಿತಿಯಲ್ಲಿದ್ದರೆ ಅದರಿಂದ ನೀವು ಒಂದು ಸುಂದರ ಮತ್ತು ಸ್ಟೈಲಿಶ್ ಬ್ಯಾಗ್ ತಯಾರಿಸಬಹುದು. ಛತ್ರಿಯ ಬಣ್ಣಬಣ್ಣದ ಪ್ರಿಂಟ್ ಇರುವ ಬಟ್ಟೆಯಿಂದ ಶಾಪಿಂಗ್ ಬ್ಯಾಗ್ ಅಥವಾ ಕ್ಯಾರಿ ಬ್ಯಾಗ್ ರೆಡಿ ಮಾಡಿಕೊಳ್ಳಿ. ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲು, ಈ ರೀತಿ ಛತ್ರಿ ಬಟ್ಟೆಯನ್ನು ಮರುಬಳಕೆ ಮಾಡುವುದು ಪರಿಸರಕ್ಕೂ ಒಳ್ಳೆಯದು. ಮಳೆಗಾಲದಲ್ಲಿ ವಸ್ತುಗಳು ಮಳೆದ ನೆನೆದು ಹಾಳಾಗಲ್ಲ.

ಛತ್ರಿಯಿಂದ ಪ್ಲಾಂಟರ್ ತಯಾರಿಸಿ

ಹಳೆಯ ದೊಡ್ಡ ಛತ್ರಿಯನ್ನು ಓಪನ್ ಮಾಡಿ. ಅದನ್ನು ಉಲ್ಟಾ ಇಟ್ಟು ಅದರಲ್ಲಿ ಮಣ್ಣು ತುಂಬಿಸಿ. ನಂತರ ಅದರಲ್ಲಿ ಸಕ್ಯುಲೆಂಟ್ (succulent) ಗಿಡಗಳನ್ನು ನೆಡಿ. ಸಣ್ಣ ಛತ್ರಿಗಳಲ್ಲಿ ಪುಟ್ಟ ಗಿಡಗಳನ್ನು ನೆಟ್ಟು, ಚಿತ್ರದಲ್ಲಿ ತೋರಿಸಿರುವಂತೆ ನೀವು ಸುಂದರವಾದ ಹ್ಯಾಂಗಿಂಗ್ ಪ್ಲಾಂಟರ್ ಕೂಡ ಮಾಡಬಹುದು. ಇದರಲ್ಲಿ ಬಣ್ಣಬಣ್ಣದ ಹೂವುಗಳು ಅಥವಾ ಅಲಂಕಾರಿಕ ಗಿಡಗಳನ್ನು ನೆಟ್ಟು ಗಾರ್ಡನ್ ಅಥವಾ ಬಾಲ್ಕನಿಯನ್ನು ಇನ್ನಷ್ಟು ಅಂದವಾಗಿಸಬಹುದು. ಗೊಬ್ಬರ ಮಿಶ್ರಿತ ಮಣ್ಣನ್ನು ಛತ್ರಿಯಲ್ಲಿ ತುಂಬಿ, ಬೀಜಗಳನ್ನು ಬಿತ್ತಿದರೆ, ಸ್ವಲ್ಪ ದಿನಗಳಲ್ಲೇ ಗಿಡಗಳು ಬೆಳೆಯಲು ಶುರುವಾಗುತ್ತವೆ.

ಫೇರಿ ಲೈಟ್ಸ್ ಮತ್ತು ಛತ್ರಿಯಿಂದ ಬಾಲ್ಕನಿ ಅಲಂಕಾರ

ಬಣ್ಣಬಣ್ಣದ ಛತ್ರಿಗಳನ್ನು ಉಲ್ಟಾ ನೇತುಹಾಕಿ, ಅದರೊಳಗೆ ಫೇರಿ ಲೈಟ್ಸ್‌ಗಳನ್ನು ಹಾಕಿ. ಇದನ್ನು ನೀವು ಬಾಲ್ಕನಿ ಅಥವಾ ಮನೆಯ ಟೆರೇಸ್ ಮೇಲೆ ಅಲಂಕಾರಕ್ಕಾಗಿ ಬಳಸಬಹುದು. ಇದು ನೋಡಲು ತುಂಬಾನೇ ಫ್ಯಾನ್ಸಿ ಲುಕ್ ಕೊಡುತ್ತದೆ. ಹಾಗಾಗಿ, ಹಳೆ ಛತ್ರಿಯನ್ನು ಗುಜರಿಗೆ ಮಾರುವ ತಪ್ಪು ಮಾಡಲೇಬೇಡಿ.