ಕ್ರಿಕೆಟ್’ನ ಪ್ರತಿ ಪಂದ್ಯದ ಮಾಹಿತಿ ಬೇಕೇ? ಇವರು ಕೊಡುತ್ತಾರೆ!

life | Tuesday, May 1st, 2018
Suvarna Web Desk
Highlights

ಇಲ್ಲೊಬ್ಬರು ಅಪರೂಪದಲ್ಲಿ ಅಪರೂಪವೆನಿಸುವ  ಕ್ರೀಡಾಪ್ರೇಮಿ ಇದ್ದಾರೆ. ಇವರು ಸುಮಾರು 52 ವರ್ಷಗಳಿಂದ ಭಾರತ ಹಾಕಿ ತಂಡ ಮತ್ತು ೩೯ ವರ್ಷಗಳಿಂದ ಭಾರತದ ಕ್ರಿಕೆಟ್ ತಂಡ ಆಡಿದ ಎಲ್ಲ ಟೂರ್ನಿಯ ಪ್ರತಿ ಪಂದ್ಯದ ಅಂಕಿಅಂಶಗಳನ್ನು ಬರೆದಿಟ್ಟಿದ್ದಾರೆ. ಇದು ಕೊಂಚ ವಿಚಿತ್ರವೆನಿಸಿದರೂ ಸತ್ಯ.

ಇಲ್ಲೊಬ್ಬರು ಅಪರೂಪದಲ್ಲಿ ಅಪರೂಪವೆನಿಸುವ  ಕ್ರೀಡಾಪ್ರೇಮಿ ಇದ್ದಾರೆ. ಇವರು ಸುಮಾರು 52 ವರ್ಷಗಳಿಂದ ಭಾರತ ಹಾಕಿ ತಂಡ ಮತ್ತು ೩೯ ವರ್ಷಗಳಿಂದ ಭಾರತದ ಕ್ರಿಕೆಟ್ ತಂಡ ಆಡಿದ ಎಲ್ಲ ಟೂರ್ನಿಯ ಪ್ರತಿ ಪಂದ್ಯದ ಅಂಕಿಅಂಶಗಳನ್ನು ಬರೆದಿಟ್ಟಿದ್ದಾರೆ. ಇದು ಕೊಂಚ ವಿಚಿತ್ರವೆನಿಸಿದರೂ ಸತ್ಯ.

ಈ ಅಪರೂಪದ ಕ್ರೀಡಾಪ್ರೇಮಿ ಬೇರಾರೂ ಅಲ್ಲ, ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಇದೀಗ ನಿವೃತ್ತ ಜೀವನ ನಡೆಸುತ್ತಿರುವ ಆಲ್ಬರ್ಟ್‌ ಡಿ’ಸೋಜಾ.  ಇವರು ಅಪ್ಪಟ್ಟ ಕ್ರೀಡಾಪ್ರೇಮಿಯಾಗಿದ್ದು, ಕಳೆದ 40, 50 ವರ್ಷಗಳಿಂದ ಪುಸ್ತಕದಲ್ಲಿ ಪಂದ್ಯಗಳ ವಿವರಗಳನ್ನು ದಾಖಲಿಸುತ್ತಿದ್ದಾರೆ.  ಹಾಕಿ ಪಂದ್ಯಗಳ ಮಾಹಿತಿಯನ್ನು 1966 ರಿಂದ ಸತತವಾಗಿ ಬರೆಯಲಾರಂಭಿಸಿದ್ದರೂ 1928 ರಿಂದ ನಡೆದ ಪ್ರಮುಖ ಪಂದ್ಯಗಳ ವಿವರಗಳೂ ಅವರಲ್ಲಿ  ಲಭ್ಯ. ಪ್ರತಿ ಪಂದ್ಯ ನಡೆದ ಸ್ಥಳ ಸೇರಿದಂತೆ  ತಂಡಗಳು ಗಳಿಸಿದ ಗೋಲುಗಳನ್ನು ಅವರು ಪುಸ್ತಕದಲ್ಲಿ ದಾಖಲಿಸಿದ್ದಾರೆ. 1979 ರಲ್ಲಿ ಮದ್ರಾಸ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ  ನಡುವಿನ ಟೆಸ್ಟ್ ಪಂದ್ಯದಿಂದ ಕ್ರಿಕೆಟ್ ಕುರಿತ ಮಾಹಿತಿಯನ್ನು ದಾಖಲಿಸಿದ್ದಾರೆ. 

ಪ್ರತಿ ಪಂದ್ಯದಲ್ಲಿ ತಂಡಗಳು ಹಾಗೂ ಆಟಗಾರರು ಗಳಿಸಿದ ಸ್ಕೋರ್, ವಿಕೆಟ್, ಸ್ಥಳ ಸೇರಿದಂತೆ ಪ್ರಮುಖ ಅಂಶಗಳನ್ನು ಅವರು ದಾಖಲಿಸಿದ್ದಾರೆ. ಭಾರತ ತಂಡ ಪಂದ್ಯ ಗೆದ್ದಿದ್ದರೆ ಫಲಿತಾಂಶವನ್ನು  ಹಸಿರು ಬಣ್ಣದಲ್ಲಿ, ಸೋತಿದ್ದರೆ ಕೆಂಪು ಬಣ್ಣದಲ್ಲಿ ದಾಖಲಿಸಿದ್ದಾರೆ. ಈವರೆಗೂ ನಡೆದ ಎಲ್ಲ ಹಾಕಿ ಹಾಗೂ ಕ್ರಿಕೆಟ್ ಪಂದ್ಯಗಳ ಮಾಹಿತಿಯನ್ನು ದಾಖಲಿಸಿದ್ದಾರೆ.  ‘ಕಾಲೇಜು ದಿನಗಳಲ್ಲಿ ತಾನು ಹಾಕಿ ಆಟಗಾರನಾಗಿದ್ದೆ, ಆದರೆ  ಕ್ರಿಕೆಟ್ ಆಡುತ್ತಿರಲಿಲ್ಲ. ಕ್ರೀಡೆಯ ಕುರಿತು ತನಗೆ ಹಿಂದಿನಿಂದಲೂ ಅತೀವ ಆಸಕ್ತಿ. ಈಗಲೂ ಭಾರತ ತಂಡ ಭಾಗವಹಿಸುವ ಪ್ರತಿ  ಪಂದ್ಯಗಳನ್ನು ನೋಡುತ್ತೇನೆ. ಹಾಕಿಯಲ್ಲಿ ಧನರಾಜ್ ಪಿಳ್ಳೆ, ಪರಗತ್‌ಸಿಂಗ್, ಕ್ರಿಕೆಟ್‌ನಲ್ಲಿ ಗವಾಸ್ಕರ್, ಬಾರ್ಡರ್ ಹಾಗೂ ಸಚಿನ್ ತನ್ನ ಅಚ್ಚುಮೆಚ್ಚಿನ ಆಟಗಾರರು’ ಎಂದು ಹೇಳುತ್ತಾರೆ  ಆಲ್ಬರ್ಟ್ ಡಿ’ಸೋಜಾ.

ಕ್ರೀಡೆಯನ್ನು ನೋಡಿ ಆನಂದಿಸುವವರ ಪೈಕಿ ಈ ರೀತಿಯಾಗಿ ದಾಖಲೆಗಳನ್ನು ಬರೆದಿಡುವ ಪರಿಪಾಟ ಉತ್ತಮವಾದದ್ದೇ. ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ದೊಡ್ಡ ಕೊಡುಗೆ  ಎಂದರೆ ಅದು ಈ ದಾಖಲೆ. ಅದನ್ನು ಮಾಡುತ್ತಿರುವ ಆಲ್ಬರ್ ಡಿ’ಸೋಜಾ ಅವರ ಕೆಲಸ ಅನನ್ಯವೇ ಸರಿ. 

Comments 0
Add Comment

  Related Posts

  Sudeep Shivanna Cricket pratice

  video | Saturday, April 7th, 2018

  Gossip About Virushka

  video | Thursday, February 8th, 2018

  All Time ODI All Round XI

  video | Saturday, January 20th, 2018

  Sudeep Shivanna Cricket pratice

  video | Saturday, April 7th, 2018
  Suvarna Web Desk