ಮಗಳ ಅಮ್ಮನಾದ ಮೇಲೂ ರಾಣಿ ಫಿಟ್‌ನೆಸ್ ಮೆಂಟೈನ್ ಮಾಡುತ್ತಿರುವುದು ಹೇಗೆ?

This is how rani mukherjee maintains her fitness
Highlights

ಹಿಚ್ಕಿ ಬೆಡಗಿ ರಾಣಿ ಮುಖರ್ಜಿ ತೆರೆಯ ಮೇಲೆ ತನ್ನ ದೇಹಸಿರಿ ಪ್ರದರ್ಶನಕ್ಕಿಂತಲೂ ಅಭಿನಯದ ಮೂಲಕ ಮಿಂಚಿದ್ದು ಹೆಚ್ಚು. ಮುದ್ದು ಮಗಳ ಅಮ್ಮನಾಗಿ ಕಳೆ ಹೆಚ್ಚಿಸಿಕೊಂಡ ರಾಣಿ ಡಯೆಟ್, ಫಿಟ್‌ನೆಸ್ ವಿವರ ಇಲ್ಲಿದೆ.

ಹಿಚ್ಕಿ ಬೆಡಗಿ ರಾಣಿ ಮುಖರ್ಜಿ ತೆರೆಯ ಮೇಲೆ ತನ್ನ ದೇಹಸಿರಿ ಪ್ರದರ್ಶನಕ್ಕಿಂತಲೂ ಅಭಿನಯದ ಮೂಲಕ ಮಿಂಚಿದ್ದು ಹೆಚ್ಚು. ಮುದ್ದು ಮಗಳ ಅಮ್ಮನಾಗಿ ಕಳೆ ಹೆಚ್ಚಿಸಿಕೊಂಡ ರಾಣಿ ಡಯೆಟ್, ಫಿಟ್‌ನೆಸ್ ವಿವರ ಇಲ್ಲಿದೆ.

ಸಣ್ಣಗಾಗೋದೆ ಎಲ್ಲಾ ಅಲ್ಲ!
ಕೆಜಿಗಟ್ಟಲೆ ತೂಕ ಇಳಿಸಿ ಜೀರೋ ಫಿಗರ್ ಮಾಡಿಕೊಂಡ ಕರೀನಾ ಇವರಿಗೆ ಆದರ್ಶ ಅಲ್ಲ. ಅನ್ನ, ನೀರು ಬಿಟ್ಟು ಹಸಿದುಕೊಂಡು ಡಯೆಟ್ ಮಾಡೋದ್ರಲ್ಲಿ ಅರ್ಥ ಇಲ್ಲ ಅಂತಾರೆ ರಾಣಿ. ಬೆಂಗಾಲಿ ಸಾಂಪ್ರದಾಯಿಕ ಊಟವನ್ನು ಬಹುವಾಗಿ ಮೆಚ್ಚುವ 40ರ ಬೆಡಗಿ, ಬೆಳಗಿನ ಉಪಹಾರಕ್ಕೆ ಅಧಿಕ ಪೌಷ್ಠಿಕಾಂಶದ ಆಹಾರ ಸೇವಿಸುತ್ತಾರೆ. ಊಟದಲ್ಲಿ ಸೂಪ್, ಸಲಾಡ್, ತರಕಾರಿಗಳನ್ನೇ ಹೆಚ್ಚು ತಿನ್ನುತ್ತಾರೆ. ಇಡೀ ದಿನ ಎಳನೀರು, ಲೆಮನ್ ಜ್ಯೂಸ್ ಕುಡ್ಕೊಂಡು, ಇದ್ರಿಂದ ಸೌಂದರ್ಯ ಹೆಚ್ಚುತ್ತೆ ಅನ್ನೋ ಥಿಯರಿಯನ್ನು ನಂಬುತ್ತಾರೆ. ಪ್ಲೇಟ್‌ನ ತುಂಬ ಖಿಚಡಿ ಹಾಕ್ಕೊಂಡು ತಿನ್ನೋದು ಇವರಿಗಿಷ್ಟ

ಯೋಗ, ಡಾನ್ಸ್ ಮತ್ತು ಫಿಟ್‌ನೆಸ್
ನಿತ್ಯ ಒಂದು ಗಂಟೆ ಯೋಗ ಮಾಡೋದನ್ನು ಮೊದಲಿಂದಲೂ ಪಾಲಿಸಿಕೊಂಡು ಬಂದಿದ್ದಾರೆ ರಾಣಿ. ಸೂರ್ಯ ನಮಸ್ಕಾರ ಸೇರಿದಂತೆ ಹಲವು ಆಸನಗಳನ್ನು ಕರೆಕ್ಟಾಗಿ ಮಾಡ್ತಾರೆ ಅಂತ ಅವರ ಟ್ರೈನರ್ ಹೇಳ್ತಾರೆ. ಅವರ ಅದ್ಭುತ ಬಾಡಿ ಲ್ಯಾಂಗ್ವೇಜ್ ಹಿಂದೆ ಒಡಿಸ್ಸಿ ನೃತ್ಯದ ಕೈವಾಡವೂ ಇದೆಯಂತೆ. ಆಗಾಗ ನೃತ್ಯ ಪ್ರಾಕ್ಟೀಸ್ ಮಾಡೋದು ಅವರ ಹುಮ್ಮಸ್ಸು ಹೆಚ್ಚಿಸುತ್ತಂತೆ.
 

loader