ಅಸಭ್ಯವೆನಿಸಿದರೂ ಇದು ಹೊಸ ಟ್ರಾವೆಲ್ ಟ್ರೆಂಡ್‌ ಅಂತೆ!!!

life | Thursday, March 22nd, 2018
Suvarna Web Desk
Highlights
 • ನಿತಂಬ ಪ್ರದರ್ಶಿಸುವುದು ಹೊಸ‌ ಟ್ರಾವೆಲ್ ಟ್ರೆಂಡ್ ಅಂತೆ!
 • ಈ ಟ್ರೆಂಡ್ ಬಾಡಿ ಪಾಸಿಟಿವಿಟಿಯನ್ನು ಸೂಚಿಸುತ್ತದೆ ಅಂತೆ!

ಜಗತ್ತಿನಲ್ಲಿ ಏನೇನೋ ಚಿತ್ರವಿಚಿತ್ರವಾದ ಟ್ರೆಂಡ್ ಗಳು‌ ಹುಟ್ಟಿಕೊಳ್ಳುತ್ತವೆ. ಅದಕ್ಕೊಂದು ಹೊಸ ಸೇರ್ಪಡೆಯಾಗಿದೆ. ಅದು ಹೊಸ ಟ್ರಾವೆಲ್ ಟ್ರೆಂಡ್ ಅಂತೆ...

ಚೀಕಿ ಎಕ್ಸ್'ಪ್ಲಾಯಿಟ್ಸ್ ಹೆಸರಿನ ಈ ಟ್ರೆಂಡ್'ನಲ್ಲಿ ಪ್ರವಾಸಿಗರು ತಮ್ಮ ಪ್ಯಾಂಟ್'ಗಳನ್ನು ಕಳಚಿ ನಿತಂಬಗಳನ್ನು ಪ್ರದರ್ಶಿಸುತ್ತಾರೆ. ಬಳಿಕ ತಮ್ಮ ಇನ್ಸ್ಟಾಗ್ರಾಂನಂತಹ ಸೋಶಿಯಲ್ ‌ಮೀಡಿಯಾ ಖಾತೆಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ.

ದಿ ಇಂಡಿಪೆಂಡೆಂಟ್'ನಲ್ಲಿ ವರದಿಯಾಗಿರುವಂತೆ ಈ ಟ್ರೆಂಡ್ ಆರಂಭವಾಗಿರುವುದು ಅಮೆರಿಕಾದಲ್ಲಿ.‌ ಅಮೆರಿಕನ್ ಪ್ರವಾಸಿಗರು ಇದನ್ನು ಹೆಚ್ಚಾಗಿ ಮಾಡುತ್ತಾರೆ ಎಂದು ಹೇಳಲಾಗಿದೆ.

ಈ ಟ್ರೆಂಡ್ ಬಾಡಿ ಪಾಸಿಟಿವಿಟಿಯನ್ನು ಸೂಚಿಸುತ್ತದೆ.‌ ನಮ್ಮ ಶರೀರದ ಅಂಗಗಳ ಬಗ್ಗೆ ಹೆಮ್ಮೆಯನಿಸುತ್ತದೆ ಎಂದು ಈ ಟ್ರೆಂಡ್'ನ‌ ಫಾಲೋ ಮಾಡುವವರ ಅಂಬೋಣ.

ಆದರೆ ಈ ಟ್ರೆಂಡ್ ಎಲ್ಲಾ ಕಡೆ ಸ್ವೀಕಾರಾರ್ಹವಲ್ಲ ಎಂಬುವುದನ್ನು ಕೂಡಾ ಗಮನಿಸಬೇಕು. ಆ ಪ್ರದೇಶದ ಜನರ ಭಾವನೆಗಳಿಗೆ ಧಕ್ಕೆಯುಂಟಾಗುವ ಸಾಧ್ಯತೆಗಳಿವೆ. ಅಲ್ಲದೇ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದರೆಂಬ ಆರೋಪಕ್ಕೆ  ಗುರಿಯಾಗುವ ಸಾಧ್ಯತೆಗಳು ಹೆಚ್ಚಿವೆ.

 

Comments 0
Add Comment

  Related Posts

  Summer Tips

  video | Friday, April 13th, 2018

  Periods Pain Relief Tips

  video | Friday, April 6th, 2018

  Periods Pain Relief Tips

  video | Friday, April 6th, 2018

  Summer Tips

  video | Monday, April 2nd, 2018

  Summer Tips

  video | Friday, April 13th, 2018
  Suvarna Web Desk