ಅಮೆರಿಕ ಉತ್ತರಭಾಗದ ತುತ್ತತುದಿಯಲ್ಲಿರುವ ನಗರದಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಅಸ್ತಮಿಸಿದ ಸೂರ್ಯ ಮತ್ತೆ ಹುಟ್ಟಿಕೊಂಡಿಲ್ಲ. ಆಶ್ಚರ್ಯ ಆಗ್ತಿದೆಯಾ..? ಆದರೆ ಇದು ನಿಜ. ಇನ್ನು ಇಲ್ಲಿ ಗುಡ್ ಮಾರ್ನಿಂಗ್ ಆಗೋದು ಮುಂದಿನ ವರ್ಷವೇ..

2020ರಲ್ಲಿ ನವೆಂಬರ್ ತಿಂಗಳ 18ರಂದು ಮಧ್ಯಾಹ್ನವೇ ಸೂರ್ಯ ಅಸ್ತಮಿಸಿಯಾಗಿದೆ. ಇನ್ನು ಸುಮಾರು 65 ದಿನಗಳ ಕಾಲ ಇಲ್ಲಿ ಸೂರ್ಯ ಉದಯಿಸೋದಿಲ್ಲ. ಇಲ್ಲಿನ ಜನ 2021ರ ಜನವರಿ 22ರ ತನಕ ಕತ್ತಲಿನಲ್ಲಿಯೇ ಬದುಕಬೇಕು.

ಕೆನಡ ಸೇರಿದ್ದ 18ನೇ ಶತಮಾನದ ಅನ್ನಪೂರ್ಣ ವಿಗ್ರಹ ಭಾರತಕ್ಕೆ ಹಸ್ತಾಂತರ!

ಅಲಸ್ಕಾದ ಉಟ್ಕಿಯಾವಿಕ್‌ನಲ್ಲಿ ಪೋಲಾರ್ ಲೈಟ್ ಸಾಮಾನ್ಯ ಸಂಗತಿ. ಪ್ರತಿವರ್ಷವೂ ಇದು ಸಂಭವಿಸುತ್ತದೆ. ಇಲ್ಲಿ ಸಿವಿಲ್ ಟ್ವಿಲೈಟ್ ಎಂಬ ಮೈದಾನದಲ್ಲಿ ಸೂರ್ಯನ ಕಿರಣಗಳು ಒಂದಷ್ಟು ಕಾಣಿಸಿಕೊಳ್ಳುತ್ತೆ, ಆದ್ರೆ ಸೂರ್ಯ ಉದಯಿಸೋದಿಲ್ಲ. ಮುಂದಿನ 2 ತಿಂಗಳು ಈ ಊರಿನ ಪಾಲಿಗೆ ಸೂರ್ಯ ಅಸ್ತಮಿಸಿಯೇ ಇರುತ್ತಾನೆ.

ನೋಡಲು ಸಾಕಷ್ಟು ಬೆಳಕು ಸಿಗುವ ಕೆಲವು ಸಮಯವಿದೆ. ಆದರೆ ಇಲ್ಲಿ ವಾಸಿಸುವ ಜನರು ತಮ್ಮ ಕೊನೆಯ ಸೂರ್ಯಾಸ್ತವನ್ನು 2021 ರವರೆಗೆ ನೋಡುವುದಿಲ್ಲ"ಎಂದು ಹವಾಮಾನ ಚಾನೆಲ್‌ನ ಹವಾಮಾನಶಾಸ್ತ್ರಜ್ಞ ಡೇನಿಯಲ್ ಬ್ಯಾಂಕ್ಸ್ ಹೇಳಿದ್ದಾರೆ.

ಬೈಡನ್ ಪತ್ನಿ ಪ್ರೊಫೆಸರ್ ಕೆಲಸ ಮುಂದುವರಿಸುತ್ತಾರೆ? ಬಿಡದ ಟ್ರಂಪ್ ಹಠ

ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೋ ಶೇರ್ ಮಾಡಿ, ಸೂರ್ಯನಿಲ್ಲದ, ಮೋಡ ತುಂಬಿದ ಒಂದಷ್ಟು ದಿನದ ನಂತರ, ನಾವು ಸೂರ್ಯ ಅಸ್ತಮಾನ ನೋಡಿದೆವು. ಇನ್ನು 2021 ಜನವರು 22ರಂದು 1.16ಕ್ಕೆ ನಾವು ಸೂರ್ಯನನ್ನುಕಾಣಲಿದ್ದೇವೆ ಎಂದು ಬರೆದಿದ್ದಾರೆ.

ಆರ್ಟಿಕ್ ಸರ್ಕಲ್‌ನಿಂದ 320 ಮೈಲು ದೂರವಿರುವ ಆರ್ಟಿಕ್ ಸರ್ಕಲ್‌ನಲ್ಲಿ ಎಲ್ಲಾ ಅಕ್ಷಾಂಶಗಳು ಸ್ವಲ್ಪ ದೀರ್ಘ ಧ್ರುವೀಯ ಬೆಳಕು ಅನುಭವಿಸುತ್ತವೆ. ಟೈಮಂಡ್ ಡೇಟ್.ಕಾಮ್ ಪ್ರಕಾರ, ಭೂಮಿಯ ಅಕ್ಷದ ಓರೆಯಿಂದಾಗಿ ಪ್ರತಿ ಚಳಿಗಾಲದಲ್ಲೂ ಧ್ರುವ ರಾತ್ರಿ ಸಂಭವಿಸುತ್ತದೆ ಮತ್ತು "ಸೂರ್ಯನ ಡಿಸ್ಕ್ ಯಾವುದೂ ದಿಗಂತದ ಮೇಲೆ ಗೋಚರಿಸುವುದಿಲ್ಲ. ಇದು ಧ್ರುವ ವಲಯಗಳಲ್ಲಿ ಮಾತ್ರ ಸಂಭವಿಸುತ್ತದೆ ಎನ್ನಲಾಗಿದೆ. ಇದು ಪೋಲಾರ್ ಸರ್ಕಲ್‌ನಲ್ಲಿ ಮಾತ್ರ ಸಂಭವಿಸುತ್ತದೆ.