Asianet Suvarna News Asianet Suvarna News

ಫೇಸ್‌ಬುಕ್ ಸ್ಟೇಟಸ್‌ನಲ್ಲೇ ತಿಳಿಯುತ್ತೆ ಆರೋಗ್ಯ!

ಕನಿಷ್ಠ 200 ಕೋಟಿ ಜನರು ಪ್ರತಿನಿತ್ಯ ತಮ್ಮ ಭಾವನೆ, ವರ್ತನೆ, ವ್ಯಕ್ತಿತ್ವಕ್ಕೆ ಸಂಬಂಧಪಟ್ಟವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್‌ ಹಾಕಿಕೊಳ್ಳುತ್ತಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ. 

Study finds your Facebook profile can indicate medical condition
Author
Bengaluru, First Published Jun 23, 2019, 3:43 PM IST

ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ಗಳು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿದ ನಂತರ ಜನರೂ ಅದಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿದ್ದಾರೆ. ಈಗಂತೂ ಫೇಸ್‌ಬುಕ್‌ ಪೋಸ್ಟ್‌ಗಿಂತ ಸ್ಟೇಟಸ್‌ನದ್ದೇ ಹವಾ.

ನೆಟ್ಟಿಗರು ತಾವು ಎಲ್ಲೇ ಪ್ರವಾಸ ಹೋಗಲಿ, ವಿಶೇಷ ಕಾರ‍್ಯಕ್ರಮದಲ್ಲಿ ಭಾಗಿಯಾಗಲಿ ಎಲ್ಲವನ್ನೂ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುತ್ತಾರೆ. ಹಾಗಾಗಿ ಜನರು ಆರೋಗ್ಯವಾಗಿದ್ದಾರಾ, ಸಂತೋಷವಾಗಿದ್ದಾರಾ, ಬೇಸರಲ್ಲಿದ್ದಾರಾ ಎಲ್ಲವೂ ಫೇಸ್‌ಬುಕ್‌ ಸ್ಟೇಟಸ್‌ ನೋಡಿಯೇ ತಿಳಿಯಬಹುದು. ಆದರೆ ಜನರು ಯಾವುದಾದರಾ ಅನಾರೋಗ್ಯಕ್ಕೆ ತುತ್ತಾಗಿದ್ದಾ ಎನ್ನುವುದನ್ನೂ ಫೇಸ್‌ಬುಕ್‌ ಸ್ಟೇಟಸ್‌ ಮೂಲಕವೇ ನಿರ್ಧರಿಸಬಹುದೆಂದು ಸಮೀಕ್ಷೆಯೊಂದು ಹೇಳಿದೆ.

ಯೂನಿವರ್ಸಿಟಿ ಆಫ್‌ ಪೆನ್ಸಿಲ್‌ವೇನಿಯಾದ ಸಂಶೋಧಕರು 999 ವ್ಯಕ್ತಿಗಳ ಸ್ಟೇಟಸ್‌ಗಳನ್ನು ಅಧ್ಯಯನ ಮಾಡಿದಾಗ ಇಂಥದ್ದೊಂದು ಫಲಿತಾಂಶ ವ್ಯಕ್ತವಾಗಿದೆ. ಕನಿಷ್ಠ 200 ಕೋಟಿ ಜನರು ಪ್ರತಿನಿತ್ಯ ತಮ್ಮ ಭಾವನೆ, ವರ್ತನೆ, ವ್ಯಕ್ತಿತ್ವಕ್ಕೆ ಸಂಬಂಧಪಟ್ಟವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್‌ ಹಾಕಿಕೊಳ್ಳುತ್ತಾರೆ ಎಂದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಮಾರ್ಚ್ 2009ರಿಂದ 2015 ಅಕ್ಟೋಬರ್‌ ವರೆಗೆ 9,50000 ಫೇಸ್‌ಬುಕ್‌ ಪೋಸ್ಟ್‌ (200 ಕೋಟಿ ಪದಗಳು) ಜನರು ಮಧುಮೇಹ, ಖಿನ್ನತೆ, ಬುದ್ಧಿವಿಕಲ್ಪತೆ ಅಥವಾ ಆತಂಕಕ್ಕೆ ಒಳಗಾಗಿದ್ದಾರೋ ಇಲ್ಲವೇ ಎಂಬುದನ್ನು ಊಹಿಸಲು ಸಂಶೋಧಕರಿಗೆ ನೆರವು ನೀಡಿದ್ದವು.

ಅಂದರೆ ಮದ್ಯಪಾನಕ್ಕೆ ಸಂಬಂಧಪಟ್ಟಪದಗಳಿದ್ದರೆ ಮದ್ಯವ್ಯಸನಿಗಳೆಂದೂ, ದುಃಖ, ನೋವು ಮುಂತಾದ ಪದಗಳಿದ್ದರೆ ಖಿನ್ನತೆಗೆ ಒಳಗಾಗಿದ್ದಾರೆಂದೂ ಸಂಶೋಧಕರು ಊಹಿಸಿದ್ದಾರೆ. ಹಾಗಂತ ಈ ಪದಗಳನ್ನು ಸ್ಟೇಟಸ್‌ಗಳಲ್ಲಿ ಉಪಯೋಗಿಸಿದವರೆಲ್ಲಾ ಇಂಥ ತೊಂದರೆಗೆ ಸಿಲುಕಿದ್ದಾರೆ ಎಂದಲ್ಲ.

Follow Us:
Download App:
  • android
  • ios