ರಾಮಸೇತು ನಿರ್ಮಿಸಿದ ಅಳಿಲು ಗೊತ್ತು, ಈ ಮಾಡರ್ನ್ ಅಳಿಲು ಮಾಡಿದ್ದೇನು? ನೀವೇ ನೋಡಿ

First Published 12, Jun 2018, 2:12 PM IST
Squirrel steals chocolate in grocery store
Highlights

ಮಕ್ಕಳು ತುಂಟಾಟ ಮಾಡಿದರೆ ಅವರಿಗೆ ಬೈದು, ಹಾಗೆ ಮಾಡಬಾರದೆಂದು ಬುದ್ಧಿ ಹೇಳುತ್ತಾರೆ. ಆದರೆ, ಇಂಥ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದರೂ ಬಯ್ಯದೇ , ಹೊಡಯೆದೇ ಮುದ್ದು ಮಾಡಬೇಕೆಂದೆನಿಸಿದೆ. 

ಅಷ್ಟಕ್ಕೂ ಇಂಥದ್ದೊಂದು ಕಳ್ಳತನಕ್ಕೆ ಮುಂದಾಗಿದ್ದು ಅಳಿಲು. ರಾಮಾಯಣದಲ್ಲಿ ತನ್ನ ವಿಶಿಷ್ಟ ಸೇವೆಯಿಂದಲೇ ಲಂಕೆಗೆ ಸೇತು ನಿರ್ಮಿಸಲು ಸಹಾಯ ಮಾಡಿದ ಅಳಿಲಿನ ಕಥೆ ಗೊತ್ತು. ಆದರಿದು ಮಾಡರ್ನ್ ಅಳಿಲು. ಅಂಗಡಿಗೆ ನುಗ್ಗಿ, ತನ್ನಿಷ್ಟದ ಚಾಕೋಲೇಟ್ ಕದಿಯಲು ಹವಣಿಸುತ್ತಿತ್ತು. ಹಾಗಂಥ ಇದು ಮಾಲೀಕನಿಗೆ ರೆಡ್ ಹ್ಯಾಂಡ್‌ ಆಗಿಯೇ ಸಿಕ್ಕಿ ಬಿದ್ದಿದೆ. ಸಿಕ್ಕಿ ಬಿದ್ದ ಮೇಲೂ ಚಾಕೋಲೇಟ್ ಅನ್ನು ಬಿಡದೇ, ಹಿಡಿದುಕೊಂಡೇ ಅಳಿಲು ಅಲ್ಲಿಂದ ಕಾಲ್ಕಿತ್ತಿತು. ಅಂಗಡಿಯವ ಸಹ ಚಾಕೋಲೇಟ್ ಕಸಿಯಲಿಲ್ಲ. 

ನೀವೂ ಈ ಅಳಿಲಿನ ಆಟ ನೋಡಿ ಮಜಾ ಮಾಡಿ.

 

loader