ಇನ್ನೊಬ್ಬರನ್ನು ನೋಯಿಸದಂತೆ ನಡೆದುಕೊಳ್ಳುವುದು ಹೇಗೆ?

life | Monday, February 12th, 2018
Suvarna Web Desk
Highlights

ಕ್ಷಮೆ’ ನಿಮಗೆ ಆಧ್ಯಾತ್ಮದಲ್ಲಿ ಮನಸ್ಸಿರಲಿ, ಇಲ್ಲದೇ ಇರಲಿ. ಆದರೆ ಮನುಷ್ಯರಾಗಲು ಇದೆಲ್ಲ ಬೇಕು. ಆಧ್ಯಾತ್ಮದಲ್ಲಿ ಮುಂದುವರಿಯಬೇಕಾದವರು ಮೊದಲು ರೂಢಿಸಿಕೊಳ್ಳಬೇಕಾದ್ದು ಏಕಾಗ್ರತೆ  ಅಂತ ಕೆಲವರು ಹೇಳ್ತಾರೆ. ಆಎದರೆ ಆ ಏಕಾಗ್ರತೆ ಬರಬೇಕಾದರೆ ಕ್ಷಮಾಗುಣ ನಿಮ್ಮಲ್ಲಿರಬೇಕು.

ಬೆಂಗಳೂರು (ಫೆ.12): ಕ್ಷಮೆ’ ನಿಮಗೆ ಆಧ್ಯಾತ್ಮದಲ್ಲಿ ಮನಸ್ಸಿರಲಿ, ಇಲ್ಲದೇ ಇರಲಿ. ಆದರೆ ಮನುಷ್ಯರಾಗಲು ಇದೆಲ್ಲ ಬೇಕು. ಆಧ್ಯಾತ್ಮದಲ್ಲಿ ಮುಂದುವರಿಯಬೇಕಾದವರು ಮೊದಲು ರೂಢಿಸಿಕೊಳ್ಳಬೇಕಾದ್ದು ಏಕಾಗ್ರತೆ  ಅಂತ ಕೆಲವರು ಹೇಳ್ತಾರೆ. ಆದರೆ ಆ ಏಕಾಗ್ರತೆ ಬರಬೇಕಾದರೆ ಕ್ಷಮಾಗುಣ ನಿಮ್ಮಲ್ಲಿರಬೇಕು.
ನಿಮಗ್ಯಾರೋ ನೋವು ಕೊಡುತ್ತಾರೆ. ಆ ಕ್ಷಣಕ್ಕೆ ಅದು ನೋವು. ಅದಕ್ಕೊಂದು ಕೊನೆ ಅಂತಿರುತ್ತೆ. ನೋವಿನ ಕೊನೆಗಾಲ ಸಮೀಪಿಸುತ್ತಿರುವಾದ ಅದಕ್ಕೆ ಮತ್ತೆ ನೀರೆರೆದು ಬದುಕಿಸುವ ಪ್ರಯತ್ನ ಮಾಡಬೇಡಿ. ಒಂದು ವೇಳೆ ಹಾಗೆ ಮಾಡಿದರೆ ಆ ನೋವಿನ ಜೊತೆಗೆ ಕೋಪ ಸೇರಿಕೊಳ್ಳುತ್ತದೆ. ದ್ವೇಷ ಬೆಳೆಯುತ್ತದೆ. ನಿಧಾನಕ್ಕೆ ನಿಮ್ಮ ದೈಹಿಕ ಮಾನಸಿಕ ಶಕ್ತಿ ಎಲ್ಲ ಇವುಗಳನ್ನು ಪೋಷಿಸಲೇ ಬೇಕಾಗುತ್ತದೆ. ಹೀಗಾದಾಗ ನಿಮ್ಮ ತಲೆಯೊಳಗೆ ಬರೀ ಇಂಥ ಯೋಚನೆಗಳೇ ತುಂಬಿ ಬೇರೆ ಆರೋಗ್ಯಕರ ಯೋಚನೆಗಳಿಗೆ ಅವಕಾಶವೇ ಇರಲ್ಲ. ಕ್ಷಮೆಯನ್ನು ರೂಢಿಸಿಕೊಳ್ಳೋ ಈ ಐದು ಹಂತಗಳು.

ಬೇರೆ ಕೆಲಸದಲ್ಲಿ ತೊಡಗಿಸಿಕೊಳ್ಳಿ 

ನೋವಾದ ಮತ್ತೊಂದು ಕ್ಷಣದಲ್ಲಿ ಹೆಚ್ಚಿನ ಶ್ರಮ ಬೇಡುವ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಬದುಕಿನ ರಂಗಭೂಮಿಯಲ್ಲಿ ಹಲವು ಪಾತ್ರಗಳು ಬಂದು ಹೋಗುತ್ತವೆ. ಕೆಲವೊಂದು ಬಹಳ ಚಿಕ್ಕ ಪಾತ್ರಗಳು. ರಂಗದ ಮೇಲೆ ಅವುಗಳ ಅವಶ್ಯಕತೆ ಎಷ್ಟೋ ಅಷ್ಟೋ ಬಳಸಿಕೊಳ್ಳಬೇಕು. ನಾಟಕದಲ್ಲಿ ವಿಲನ್‌ಗಳಿಗೆ ಬಹಳ ಹೊತ್ತು ರಂಗದ ಮೇಲೆ ಕುಣಿಯುವ ಹುಮ್ಮಸ್ಸು ಇರಬಹುದು. ಆ  ಪಾತ್ರಗಳೇ ನಿಮ್ಮನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆಯಬಹುದು. ಆದರೆ ಅವುಗಳನ್ನು ಸಂಪೂರ್ಣ ನಿರ್ಲಕ್ಷಿಸಿ, ನೀವೂ ಗೆದ್ದು ಹೀರೋ ಆಗಿಬಿಡಿ

ಆತ್ಮ ಸಂವಾದ ಬೆಸ್ಟ್

ನಿಮ್ಮೊಳಗೇ ಒಂದು ಸಣ್ಣ ಅಗ್ರಿಮೆಂಟ್  ಮಾಡ್ಕೊಳ್ಳಿ. ಎಂಥ ನೋವಾದರೂ ನಾನು ನನ್ನೊಳಗೆ, ಆತ್ಮ ಸಂವಾದ ಮಾಡಿಕೊಳ್ಳುತ್ತೇನೆ ಅಂತ. ಯಾವತ್ತೂ ಮೇಲು ಮೇಲಿನ ಮಾತು, ನಡೆ ಅರ್ಥವಿಲ್ಲದ್ದು. ಆದರೆ ನಮ್ಮೊಳಗಿನ ಧ್ವನಿ ಇರುತ್ತಲ್ಲ, ಅದು ಆತ್ಮದ ಧ್ವನಿ. ಅದು ಸುಳ್ಳಾಡಲು, ವಂಚನೆ ಮಾಡಲು ಬಿಡಲ್ಲ. ಹಾಗೇ ನಮ್ಮನ್ನು ನಮ್ಮ ಮೂಲ ಮಾನವೀಯ ನೆಲೆಯತ್ತ ಕೊಂಡೊಯ್ಯು  ಶಕ್ತಿ ಅದಕ್ಕಿದೆ. ನೋವು, ಆಘಾತವಾದ ಹೊತ್ತಿಗೆ ಅದು ಕಷ್ಟ. ಆದರೆ ನಮ್ಮ ನೋವಿಗೆ ಮದ್ದು ಸವರಿ ಗಾಯ ಮಾಯಿಸುವ ಅದ್ಭುತ  ಶಕ್ತಿ ಅದಕ್ಕಿದೆ. 

ಸಿಟ್ಟಲ್ಲಿ ಮಲಗಬೇಡಿ

ಇದಕ್ಕೂ ಕ್ಷಮೆಗೂ ಏನು ಸಂಬಂಧ ಅಂತ  ನೀವು ಕೇಳಬಹುದು, ಆದರೆ ಅವಮಾನ, ನೋವಾದ ಸಿಟ್ಟಲ್ಲಿ ನೀವು ನಿದ್ದೆ ಹೋದರೆ ಅದು ಮನಸ್ಸಿನಲ್ಲಿ ದೀರ್ಘ ಕಾಲ ಉಳಿಯಬಲ್ಲದು. ನಿದ್ದೆಗೆ ಜಾರುವ ಮುನ್ನ ನಮ್ಮ ಸಬ್‌ಕಾನ್ಶಿಯಸ್ ಮೈಂಡ್‌ಅನ್ನು ಶುದ್ಧವಾಗಿಟ್ಟುಕೊಳ್ಳೋದು ಮುಖ್ಯ. ಬೆಳಗ್ಗೆದ್ದಾಗ ಮನಸ್ಸು ಮತ್ತೆ ಹೊಸತಾಗಿರಬೇಕು. ಇದನ್ನೇ ಬೇಂದ್ರೆ ಹೇಳೋದು, ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’ ಅಂತ. ನಿದ್ದೆಯಲ್ಲಿ ಹಿಂದಿನ ದಿನ ಕೊಳೆಯೆಲ್ಲ ಕಳೆದು ಹೋಗಬೇಕು. ಎದ್ದಾಗ ನಾವು ಹೊಸ ವ್ಯಕ್ತಿಯೇ ಆಗಿರಬೇಕು.

ಇನ್ನೊಬ್ಬರ ನಡತೆ ಬಗ್ಗೆ ನೋವುಪಟ್ಟು ಆಕ್ಷೇಪಿಸುವ ಮೊದಲು ನಮ್ಮನ್ನು ನಾವೇ  ನೋಡಿಕೊಳ್ಳೋಣ. ನಮ್ಮ ಮನೆ ಕಿಟಕಿ ಗಾಜಿನಲ್ಲಿ ಧೂಳಿದ್ದಾಗ ಪಕ್ಕದ ಮನೆ ಟೆರೇಸ್‌ನಲ್ಲಿ ಒಣ ಹಾಕಿದ ಬಟ್ಟೆಯಲ್ಲೂ  ಕೊಳೆ ಕಾಣಬಹುದು. ನಮ್ಮನೆ ಗಾಜನ್ನು ಸ್ವಚ್ಛಪಡಿಸದೇ ಅವರ ಬಟ್ಟೆ ಕೊಳೆಯಾಗಿದೆ ಅಂದುಕೊಳ್ಳೋದು ತಪ್ಪಲ್ವಾ? ಸಂತನೊಬ್ಬ ತನ್ನ ಕನ್ನಡಿಯನ್ನು ತಿಕ್ಕಿ ತಿಕ್ಕಿ ಸ್ವಚ್ಛ  ಮಾಡುತ್ತಿದ್ದನಂತೆ. ಆದರೆ ನಿಜಕ್ಕೂ ಅವನ ಕೈಯಲ್ಲೇ ಧೂಳಿತ್ತಂತೆ!

ಇನ್ನೊಬ್ಬರನ್ನು ಬೈಯುವ ಮುನ್ನ ತಡೆಯಿರಿ 

ಮಕ್ಕಳಿಗೆ ಬುದ್ಧಿವಾದ ಹೇಳುವ ಚಪಲ ನಮಗೆ ಹೆಚ್ಚು. ಹೀಗೆ ಬುದ್ಧಿ ಹೇಳುವ ಹೊತ್ತಿಗೆ  ನಮ್ಮಲ್ಲಿ ಅವರ ತಪ್ಪನ್ನು ಕ್ಷಮಿಸುವ ಒಳ್ಳೆಯ ಬುದ್ಧಿ ಇರುವುದು ಕಡಿಮೆ. ನನ್ನಿಂದಾಗಿ, ನನ್ನ ಮಾತು ಕೇಳಿ ಅವರು ಉದ್ಧಾರವಾಗಬೇಕು ಅನ್ನುವ ಅಹಂ ನಮ್ಮನ್ನಾಳುತ್ತಿರುತ್ತದೆ. ಅದಕ್ಕೆ ಜ್ಞಾನಿಗಳು ಯಾವತ್ತೂ ಬುದ್ಧಿವಾದ ಹೇಳುವುದಿಲ್ಲ. ಹಾಗೆ ಹೇಳಬೇಕೆಂದರೆ ತಾನು ತಿಳಿದವನು ಎಂಬ ಭಾವ ಬರುತ್ತದೆ. ಇದು ಉಳಿದೆಲ್ಲ ವಿಚಾರಗಳನ್ನೂ ತನ್ನೊಳಗೆ ಬಿಟ್ಟುಕೊಡುವುದಿಲ್ಲ. ಕ್ಷಮೆಯಂಥ ಉದಾರತೆಯನ್ನು ಅಷ್ಟು ದೂರದಿಂದಲೇ ಓಡಿಸಿ ಬಿಡುತ್ತದೆ. 

ಇನ್ನೊಬ್ಬರಿಗೆ ಬುದ್ಧಿ ಹೇಳುವಷ್ಟು ಬುದ್ಧಿವಂತರಾಗೋದು ಬೇಡ

 ನಮ್ಮ ಮಕ್ಕಳಿಗೆ ಬುದ್ಧಿವಾದ ಹೇಳುವ ಚಪಲ ನಮಗೆ ಹೆಚ್ಚು. ಹೀಗೆ ಬುದ್ಧಿ ಹೇಳುವ ಹೊತ್ತಿಗೆ ನಮ್ಮಲ್ಲಿ ಅವರ ತಪ್ಪನ್ನು ಕ್ಷಮಿಸುವ ಒಳ್ಳೆಯ ಬುದ್ಧಿ ಇರುವುದು ಕಡಿಮೆ. ನನ್ನಿಂದಾಗಿ, ನನ್ನ ಮಾತು ಕೇಳಿ ಅವರು ಉದ್ಧಾರವಾಗಬೇಕು ಅನ್ನುವ ಅಹಂ ನಮ್ಮನ್ನಾಳುತ್ತಿರುತ್ತದೆ. ಅದಕ್ಕೆ ಜ್ಞಾನಿಗಳು ಯಾವತ್ತೂ ಬುದ್ಧಿವಾದ ಹೇಳುವುದಿಲ್ಲ. ಹಾಗೆ ಹೇಳಬೇಕೆಂದರೆ ತಾನು ತಿಳಿದವನು ಎಂಬ ಭಾವ ಬರುತ್ತದೆ. ಇದು ಉಳಿದೆಲ್ಲ ವಿಚಾರಗಳನ್ನೂ ತನ್ನೊಳಗೆ ಬಿಟ್ಟುಕೊಡುವುದಿಲ್ಲ. ಕ್ಷಮೆಯಂಥ ಉದಾರತೆಯನ್ನು ಅಷ್ಟು ದೂರದಿಂದಲೇ ಓಡಿಸಿ ಬಿಡುತ್ತದೆ. 

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk