ಅನಾರೋಗ್ಯದಿಂದ ಬಚಾವಾಗಲು ಹಲವಾರು ಟಿಪ್ಸ್ ಇವೆ. ಆದರೆ ಎಲ್ಲವೂ ರೋಗಗಳನ್ನು ನಿವಾರಿಸುವಲ್ಲಿ ಸಹಕರಿಸುವುದಿಲ್ಲ. ಪದೇ ಪದೇ ಅನಾರೋಗ್ಯಕ್ಕೀಡಾದರೆ ನಿಮ್ಮ ಜೀವನಶೈಲಿ ಮತ್ತು ಆಹಾರ ಕ್ರಮದ ಮೇಲೆ ಗಮನಿಸಬೇಕು. ಆದರೂ ನೀವು ಅನಾರೋಗ್ಯಕ್ಕೆ ಈಡಾಗುತ್ತಿದ್ದರೆ ಈ ಬದಲಾವಣೆಗಳನ್ನು ನೀವು ಜೀವನದಲ್ಲಿ ತರಬೇಕು. 

ನೀರು ಕುಡಿಯಿರಿ: ಇದು ಪ್ರಾಕೃತಿಕ ಔಷಧಿ. ಕುದಿಸಿ ಆರಿಸಿದ ಶುದ್ಧ ನೀರು ಸೇವಿಸುತ್ತಿದ್ದರೆ ದೇಹದಲ್ಲಿನ ಟಾಕ್ಸಿನ್ ಹೊರ ಬರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. 

ಹಣ್ಣು ತಿನ್ನಿ: ಕಿತ್ತಳೆ, ಮೂಸಂಬಿ, ಮೊದಲಾದ ರಸಭರಿತ ಆಹಾರವನ್ನು ಸೇವಿಸಿ. ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಹಣ್ಣುಗಳ ರಸ ತೆಗೆದು ಸೇವಿಸಬೇಕು. 

ಡ್ರೈ ಫ್ರೂಟ್ಸ್ : ಚಳಿಗಾಲದಲ್ಲಿ ಡ್ರೈ ಫ್ರೂಟ್ಸ್ ಸೇವಿಸುವುದು ಉತ್ತಮ. ರಾತ್ರಿ ನೀರಲ್ಲಿ ಇವುಗಳನ್ನು ನೆನೆಸಿ ಬೆಳಗ್ಗೆ ಹಾಲಿನೊಂದಿಗೆ ಸೇವಿಸಿ. ಆದರೆ ತಿಂಡಿ ತಿನ್ನುವ ಅರ್ಧ ಗಂಟೆ ಮೊದಲು ಸೇವಿಸಿದರೆ ಒಳಿತು. 

ಮೊಳಕೆ ಕಾಳು: ಮೊಳಕೆ ಬಂದ ಹೆಸರು, ಕಡ್ಲೆ ಕಾಳನ್ನು ಪ್ರತಿದಿನ ಒಂದು ಕಪ್ ಸೇವಿಸಿ. ಇವುಗಳ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುತ್ತವೆ. 

ಸಲಾಡ್: ಸೌತೆಕಾಯಿ, ಟೊಮ್ಯಾಟೋ, ಮೂಲಂಗಿ, ಕ್ಯಾರೇಟ್, ಎಲೆಕೋಸು, ಈರುಳ್ಳಿ, ಬೀಟ್ ರೂಟ್ ಎಲ್ಲವನ್ನೂ ಸೇರಿಸಿ ಸಲಾಡ್ ಮಾಡಿ ಸೇವಿಸಿ. 

ತುಳಸಿ: ತುಳಸಿಗೆ ಧಾರ್ಮಿಕ ಮಹತ್ವ ಇದೆ. ಪ್ರತಿದಿನ ಬೆಳಗ್ಗೆ ಎರಡು ಮೂರು ತುಳಸಿ ಸೇವಿಸುತ್ತಿದ್ದರೆ ನೋವು ನಿವಾರಣೆಯಾಗಿ ರೋಗ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. 

ಯೋಗ: ಯೋಗ ಅಥವಾ ಪ್ರಾಣಾಯಾಮದಿಂದ ಶರೀರ ಅರೋಗ್ಯವಾಗಿರುತ್ತದೆ. ಪ್ರತಿದಿನ ಮುಂಜಾನೆ ಅಥವಾ ಸಂಜೆ ಯೋಗ ಮಾಡಿ.