ಪ್ರೀತಿ ಎನ್ನುವುದು ವಿಚಿತ್ರ ಅನುಭೂತಿ. ಯಾರ ಮೇಲೂ ಯಾವಾಗ ಹುಟ್ಟುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇದ್ದಕ್ಕಿದ್ದಂತೆ ಯಾರೋ ಇಷ್ಟ ಆಗಿಬಿಡುತ್ತಾರೆ. ಬಹುವಾಗಿ ಆಕರ್ಷಿಸಿಬಿಡುತ್ತಾರೆ. ಪ್ರೀತಿ ಹುಟ್ಟುತ್ತದೆ. ಮನಸ್ಸು ಜೋಕುಯ್ಯಾಲೆಯಾಗುತ್ತದೆ.
ಪ್ರೀತಿ ಎನ್ನುವುದು ವಿಚಿತ್ರ ಅನುಭೂತಿ. ಯಾರ ಮೇಲೂ ಯಾವಾಗ ಹುಟ್ಟುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಇದ್ದಕ್ಕಿದ್ದಂತೆ ಯಾರೋ ಇಷ್ಟ ಆಗಿಬಿಡುತ್ತಾರೆ. ಬಹುವಾಗಿ ಆಕರ್ಷಿಸಿಬಿಡುತ್ತಾರೆ. ಪ್ರೀತಿ ಹುಟ್ಟುತ್ತದೆ. ಮನಸ್ಸು ಜೋಕುಯ್ಯಾಲೆಯಾಗುತ್ತದೆ. ಮೈಮನ ಪೂರ್ತಿ ಅವನೇ/ಅವಳೇ ಆವರಿಸಿಕೊಂಡು ಬಿಡುತ್ತಾರೆ. ಪರಸ್ಪರ ಮಾತು, ನಗು, ತಮಾಷೆ, ಜಗಳ, ಮುನಿಸು, ಮೌನ ಎಲ್ಲವೂ ಅಪ್ಯಾಯಮಾನ. ಜಗತ್ತನ್ನೇ ಗೆಲ್ಲುವಷ್ಟು ಆತ್ಮವಿಶ್ವಾಸ. ಅವನೇ/ ಅವಳೇ ಜಗತ್ತಾಗಿರುತ್ತಾರೆ. ಆ ಅನುಭೂತಿಯನ್ನು ಅನುಭವಿಸಿದವರಿಗೇ ಗೊತ್ತು. ಹೀಗಿರುವಾಗ, ಇದ್ದಕ್ಕಿದ್ದಂತೆ ಸಂಬಂಧವೊಂದು ಸುಳಿವನ್ನೂ ನೀಡದೇ ಮುರಿದು ಬಿದ್ದರೆ ಅದನ್ನು ನಿಭಾಯಿಸುವುದು ಹೇಳಿದಷ್ಟು ಸುಲಭವಲ್ಲ. ಆ ಹ್ಯಾಂಗೋವರ್’ನಿಂದ ಹೊರಬರಲು ಸಾಕಷ್ಟು ಸಮಯಗಳೇ ಬೇಕಾಗುತ್ತದೆ. ಕೆಲವೊಮ್ಮೆ ಡಿಪ್ರೆಶನ್’ಗೆ ಹೋಗುವ ಅಪಾಯವಿರುತ್ತದೆ. ಅದರಿಂದ ಹೊರಬರಲು ಸಮಯ ಬೇಕಾದರೂ ಸಮಾಧಾನದಿಂದಿರಲು ಕೆಲವು ಸಂಗತಿಗಳನ್ನು ಫಾಲೋ ಮಾಡಬಹುದು.
ಆಗಿ ಹೋಗಿರುವುದನ್ನೇ ನೆನೆದು ಮನಸ್ಸನ್ನು ರಾಡಿ ಮಾಡಿಕೊಳ್ಳಬೇಡಿ. ಅದನ್ನು ಒಪ್ಪಿಕೊಳ್ಳಿ. ಪ್ರೀತಿಯೇ ಎಲ್ಲವೂ ಅಲ್ಲ. ಅದಕ್ಕಿಂತ ಜೀವನ ದೊಡ್ಡದಿದೆ ಎಂದು ಭಾವಿಸಿ
ಸ್ನೇಹಿತರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ. ಪಿಕ್’ನಿಕ್, ಟ್ರಿಪ್’ಗೆ ಹೋಗಿ. ಹೊಸ ಜಾಗ, ಸ್ನೇಹಿತರೊಂದಿಗಿನ ಮಸ್ತಿ ನಿಮ್ಮ ನೋವನ್ನು ಮರೆಸಲು ಸಹಾಯ ಮಾಡುತ್ತದೆ.
ಒಳ್ಳೆಯ ಸಂಗೀತ ಕೇಳಿ. ಸಿನಿಮಾ ನೋಡಿ. ಒಳ್ಳೆಯ ಪುಸ್ತಕ ಓದಿ
ಮರೆತು ಹೋಗಿರುವ ಹವ್ಯಾಸಗಳನ್ನು ಮತ್ತೆ ಶುರು ಮಾಡಿ
ಎಲ್ಲರ ಬಳಿಯು ನಿಮ್ಮ ಬ್ರೇಕ್ ಅಪ್ ಕಥೆಯನ್ನು ಹೇಳಿಕೊಳ್ಳಬೇಡಿ. ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಸಾಧ್ಯತೆ ಇರುತ್ತದೆ.
ಬ್ರೇಕ್ ಅಪ್ ಆದ ಕೂಡಲೇ ಇನ್ನೊಂದು ಪ್ರೀತಿಯಲ್ಲಿ ಬೀಳಬೇಡಿ. ಸ್ವಲ್ಪ ಸಮಯ ಸುಮ್ಮನಿದ್ದು ಬಿಡಿ
ನಿಮ್ಮ ತಪ್ಪಿಲ್ಲದಿದ್ದರೆ ಕೊರಗಬೇಡಿ. ಕಾಲ ಎಲ್ಲವನ್ನು ಸರಿ ಮಾಡುತ್ತದೆ.
ಮನಸ್ಸಿನ ಭಾವನೆಗಳನ್ನು ಅದುಮಬೇಡಿ. ಎಲ್ಲವನ್ನೂ ಹೊರಹಾಕಿ ಹಗುರಾಗಿ ಬಿಡಿ
ನಕಾರಾತ್ಮಕ ಜನರಿಂದ ದೂರವಿರಿ. ಆದಷ್ಟು ಪ್ರೋತ್ಸಾಹ ನೀಡುವವರ ಜೊತೆ ಇರಿ
ನಿಮಗಿಷ್ಟವಾದ ಕೆಲಸದಲ್ಲಿ, ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಒಂದಷ್ಟು ದಿನ ಭಾವನೆಗಳ ತೀವ್ರತೆ ಇರುತ್ತದೆ. ಕ್ರಮೇಣ ಕಡಿಮೆಯಾಗುತ್ತದೆ.
ಅಗತ್ಯವೆನಿಸಿದರೆ ಆಪ್ತಸಮಾಲೋಚಕರನ್ನು ಸಂಪರ್ಕಿಸಿ
