ಕೆಲವರು ಮೂರಂಕಿ ಸೆಕೆಂಡ್‌ಗಳ ಸಿಗ್ನಲ್‌ಗಳಲ್ಲೂ ಸಹ ತಮ್ಮ ವಾಹನಗಳನ್ನು ಚಾಲು ಸ್ಥಿತಿಯಲ್ಲೇ ಬಿಟ್ಟಿರುತ್ತಾರೆ. ಇದರಿಂದಾಗಿ ಸಾಕಷ್ಟು ಪೆಟ್ರೋಲ್ ಹಾಗೂ ಹಣ ವ್ಯಯವಾಗುತ್ತದೆ
ಪೆಟ್ರೋಲ್ ದರ ದಿನೇ ದಿನೇ ಏರಿಕೆಯಾಗುತ್ತಿದೆ. ಕೆಲವರು ಮೂರಂಕಿ ಸೆಕೆಂಡ್ಗಳ ಸಿಗ್ನಲ್ಗಳಲ್ಲೂ ಸಹ ತಮ್ಮ ವಾಹನಗಳನ್ನು ಚಾಲು ಸ್ಥಿತಿಯಲ್ಲೇ ಬಿಟ್ಟಿರುತ್ತಾರೆ. ಇದರಿಂದಾಗಿ ಸಾಕಷ್ಟು ಪೆಟ್ರೋಲ್ ಹಾಗೂ ಹಣ ವ್ಯಯವಾಗುತ್ತದೆ. ಹಾಗಾಗಿ ವಾಹನ ಚಾಲಕರು ಹೆಚ್ಚು ಅವಯ ಸಿಗ್ನಲ್ಗಳಲ್ಲಿ ತಮ್ಮ ವಾಹನವನ್ನು ಆನ್ ಮಾಡಿ ಹಳದಿ ಸಿಗ್ನಲ್ ತೋರಿಸಿದ ಕೂಡಲೇ ವಾಹನವನ್ನು ಚಾಲೂ ಮಾಡಿ ಹೊರಡಲು ಸಿದ್ಧರಾಗುವುದು ಉತ್ತಮ. ಇದರಿಂದ ಪೆಟ್ರೋಲ್ ಹಾಗೂ ಹಣ ಎರಡನ್ನೂ ಉಳಿಸಬಹದು. ಸರಿಯಾದ ಸಮಯಕ್ಕೆ ವಾಹನಗಳನ್ನು ಸರ್ವೀಸ್ ಮಾಡಿಸಿದರೆ ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಹೆಚ್ಚು ಪೆಟ್ರೋಲ್ ಕುಡಿಯುವುದನ್ನು ತಪ್ಪಿಸಬಹುದು.
