ದೃಷ್ಟಿ ದೋಷ, ದೇಹದಲ್ಲಿ ಕೆಲವು ತೊಂದರೆ ಎಂದಾಕ್ಷಣ ಕೇಳುವ ಮಾತು ಕ್ಯಾರೇಟ್ ತಿನ್ನೋಲ್ವಾ? ತೊಳೆದು ದಿನಾ ಅದನ್ನೇ ತಿನ್ನೋ ಬದಲು ನಿತ್ಯವೂ ವೆರೈಟಿ ತಿನಿಸು ಮಾಡಿಕೊಂಡು ತಿನ್ನಬೇಕು. ಇವತ್ತು ಕ್ಯಾರೇಟ್ ರೈಸ್  ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

ಬೇಕಾಗುವ ಪದಾರ್ಥಗಳು:

  • 2 ಕಪ್ ಅನ್ನ
  • 4-5ಕ್ಯಾರೆಟ್ 
  • 2 ಈರುಳ್ಳಿ 
  • 1 ಕ್ಯಾಪ್ಸಿಕಮ್ 
  • ಹಸಿಮೆಣಸು 
  • ಬೆಳ್ಳುಳ್ಳಿ 
  • ಶುಂಠಿ 
  • ಇಂಚು 
  • ಅರಿಶಿಣ ಪುಡಿ 
  • ಖಾರದ ಪುಡಿ 
  • ಪಲಾವ್ ಮಸಾಲ 
  • ಕರಿ ಮೆಣಸು 
  • ಜೀರಿಗೆ 
  • ಉಪ್ಪು
  • ಎಣ್ಣೆ 
  • ಕೊತ್ತಂಬರಿಸೊಪ್ಪು

ಮಾಡುವ ವಿಧಾನ: 
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಜೀರಿಗೆ ಹಾಕಿ. ನಂತರ ಈರುಳ್ಳಿ ಹಾಕಿ, ಒಂದು ನಿಮಿಷ ಹುರಿಯಿರಿ. ಇದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಕ್ಯಾರೆಟ್ ಮತ್ತು ದಪ್ಪ ಮೆಣಸಿನ ಕಾಯಿಯನ್ನು ಹಾಕಿ. ಉಪ್ಪು, ಅರಿಶಿನಪುಡಿ ಚಿಮುಕಿಸಿ. ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು 4-5 ನಿಮಿಷ ಕಲೆಸುತ್ತಿರಿ. ತರಕಾರಿಗಳು ಸ್ವಲ್ಪ ಮೃದುವಾಗುವವರೆಗೂ ಮುಂದುವರಿಸಿ. ಈಗ ಕರಿಮೆಣಸು, ಖಾರದ ಪುಡಿ, ಪುಲಾವ್ ಮಸಾಲೆ ಹಸಿಮೆಣಸಿನ ಕಾಯಿಗಳನ್ನು ಬೆರೆಸಿ ಚೆನ್ನಾಗಿ ಕಲೆಸಿ. ಇದಕ್ಕೆ ನಿಧಾನವಾಗಿ ಅನ್ನವನ್ನು ಬೆರೆಸಿ, ಮಧ್ಯಮ ಗಾತ್ರದ ಉರಿಯ ಮೇಲೆ ಸ್ವಲ್ಪ ಹೊತ್ತು ಇಡಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ರಾಯಿತ ಅಥವಾ ಸಲಾಡ್ ಜತೆ ಕ್ಯಾರೆಟ್ ರೈಸ್ ಈಗ ಬಡಿಸಲು ಸಿದಟಛಿವಾಗಿದೆ.