Asianet Suvarna News Asianet Suvarna News

ಬಿಸಿಲ ಬೇಗೆ ತಣಿಸೋ ಕಲ್ಲಂಗಡಿ ಹಣ್ಣಿನ ಬೀಜವೂ ಆರೋಗ್ಯಕಾರಿ...

ಇನ್ನೇನು ಬಿಸಿಲಿನ ಧಗೆ ಆರಂಭವಾಗಲಿದೆ. ಸುಡು ಬಿಸಿಲಿನಲ್ಲಿ ಹಣ್ಣು ತಿನ್ನೋದು ಮನಕ್ಕೆ, ದೇಹಕ್ಕೆ ಮುದ ನೀಡುತ್ತೆ.  ಅದರಲ್ಲಿಯೂ ಕಲ್ಲಂಗಡಿ ಹಣ್ಣು ಬೇಸಿಗೆಯ ಸಂಜೀವಿನಿ. ಇದರ ತಿರುಳು ಮಾತ್ರವಲ್ಲ, ಬೀಜವೂ ಆರೋಗ್ಯಕಾರಿ ಗೊತ್ತಾ?

Seeds of water melon is good for health

ಇನ್ನೇನು ಬಿಸಿಲಿನ ಧಗೆ ಆರಂಭವಾಗಲಿದೆ. ಸುಡು ಬಿಸಿಲಿನಲ್ಲಿ ಹಣ್ಣು ತಿನ್ನೋದು ಮನಕ್ಕೆ, ದೇಹಕ್ಕೆ ಮುದ ನೀಡುತ್ತೆ.  ಅದರಲ್ಲಿಯೂ ಕಲ್ಲಂಗಡಿ ಹಣ್ಣು ಬೇಸಿಗೆಯ ಸಂಜೀವಿನಿ. ಇದರ ತಿರುಳು ಮಾತ್ರವಲ್ಲ, ಬೀಜವೂ ಆರೋಗ್ಯಕಾರಿ ಗೊತ್ತಾ?

- ಅಬ್ಬ ರಾಶಿ ರಾಶಿ ಕಲ್ಲಂಗಡಿ ಬೀಜ ಸಿಗುತ್ತದೆ ಎಂದು ರಗಳೆ ಮಾಡಿಕೊಳ್ಳುತ್ತೇವೆ. ಆದರೆ, ಜಲಾಂಶವಿರುವ ಈ ಹಣ್ಣಿನಲ್ಲಿ ವಿಟಮನ್ ಎ ಮತ್ತು ಸಿ ಪೊಟ್ಯಾಷಿಯಂ, ಮೆಗ್ನೇಷಿಯಂ, ಬಿ1, ಬಿ6, ಇರುತ್ತದೆ. 

 - ಈ ಹಣ್ಣಿನ ಬೀಜದಲ್ಲಿ ಅತ್ಯಧಿಕ ಪ್ರಮಾಣದ ಮೆಗೇಷಿಯಂ ಇದ್ದು, ಇದು ಹೃದಯ ಆರೋಗ್ಯಕ್ಕೆ ಸಹಕಾರಿ. 

- ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

- ಕಲ್ಲಂಗಡಿ ಬೀಜವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಉರಿಯೂತದಿಂದ ಅಥವಾ ಬಾವು ಕಾಣಿಸಿಕೊಂಡಲ್ಲಿ, ಮುಕ್ಕಾಲು ಕಪ್‌ ಬಿಸಿನೀರಿಗೆ ಒಂದು ಚಮಚ ಈ ಪುಡಿ, ಒಂದು ಚಮಚ ಜೇನುತುಪ್ಪದೊಂದಿಗೆ ಕುಡಿಯಬೇಕು. ಆಗ ಊತ ಕಡಿಮೆಯಾಗುತ್ತದೆ.

- ಬೀಜದಲ್ಲಿರೋ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕಲು, ಸಹಕರಿಸಿ, ವೃದ್ಧಾಪ್ಯವನ್ನು ದೂರವಾಗಿಸುತ್ತದೆ.

- ಈ ಬೀಜದ ತೆಗೆದ ಎಣ್ಣೆ ಮೊಡವೆಗಳನ್ನು ಹೋಗಿಸಿ, ತ್ವಚೆಯ ಸೂಕ್ಷ್ಮ ರಂಧ್ರದಲ್ಲಿರುವ ಕೊಳೆ ಹಾಗೂ ಮೃತ ಜೀವಕೋಶಗಳನ್ನು ತೊಲಗಿಸುತ್ತದೆ.

- ಈ ಬೀಜದ ಎಣ್ಣೆಯಲ್ಲಿರುವ ಪ್ರೋಟೀನ್ ಹಾಗೂ ಅಮೈನೋ ಆಮ್ಲ ಕೂದಲಿನ ಬುಡವನ್ನು ಸದೃಢಗೊಳಿಸುತ್ತವೆ. 

- ಈ ಬೀಜಗಳನ್ನು ಹುರಿದು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಾಂತಿಯುತವಾಗುತ್ತದೆ.

Follow Us:
Download App:
  • android
  • ios