ಡಯಾಬಿಟಿಸ್ ರೋಗಿಗಳಿನ್ನು ನೋವು ಅನುಭವಿಸಬೇಕಿಲ್ಲ..! ನಿಮಗಿಲ್ಲಿದೆ ಗುಡ್ ನ್ಯೂಸ್

Scientists create insulin pill that will replace painful injections for diabetics
Highlights

ಡಯಾಬಿಟಿಸ್ ರೋಗಿಗಳು ಇನ್ನು ಜೀವನ ಪರ್ಯಂತ ನೋವನ್ನು ಅನುಭವಿಸಬೇಕಿಲ್ಲ. ನಿಮಗಿಲ್ಲಿದೆ ಒಂದು ಗುಡ್ ನ್ಯೂಸ್. 

ಬೆಂಗಳೂರು :  ಡಯಾಬಿಟಿಸ್ ನೊಂದಿಗೆ ಹೋರಾಡುತ್ತಿದ್ದೀರಾ. ನಿತ್ಯವೂ ಇನ್ಸುಲಿನ್ ಇಂಜೆಕ್ಷನ್ ತೆಗದುಕೊಂಡು ನೋವುಣ್ಣುತ್ತಿದ್ದೀರಾ. ಹಾಗಾದ್ರೆ ನೀವಿನ್ನು ಚಿಂತೆ ಮಾಡುವ ಅಗತ್ಯವಿಲ್ಲ. ಚಿಂತೆ ಬಿಟ್ಟು ನೆಮ್ಮದಿಯಿಂದ ಜೀವನ ಸಾಗಿಸಬಹುದು. 

ಕಳೆದ ಕೆಲ ವರ್ಷಗಳಿಂದ ವೈದ್ಯಕೀಯ ಲೋಕವು ಸಾಕಷ್ಟು ಪ್ರಮಾಣದಲ್ಲಿ ಮುಂದುವರಿದಿದ್ದು, ಡಯಾಬಿಟಿಸ್ ರೋಗಿಗಳಿಗೆ ವೈದ್ಯರು ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. 

ಅನೇಕ ವಿಫಲ ಪ್ರಯತ್ನದ ಫಲವಾಗಿ ಕೊನೆಗೆ ಸಫಲವಾಗಿ ಡಯಾಬಿಟಿಸ್ ಹೊಂದಿರುವವರು ಮಾತ್ರೆಯ ರೂಪದಲ್ಲಿ ಸೇವನೆ ಮಾಡುವ ಔಷಧ ಕಂಡು ಹಿಡಿದಿದ್ದಾರೆ. 

ಇನ್ಸುಲಿನ್ ಇಂಜೆಕ್ಷನ್ ಬದಲಾಗಿ ಈ ಮಾತ್ರೆ ಸೇವನೆ ಮಾಡಿದಾಗ ರಕ್ತಕ್ಕೆ ಅಗತ್ಯ ಇನ್ಸುಲಿನ್ ಒದಗಿಸುತ್ತದೆ. ಇದರಿಂದ ಇಂಜೆಕ್ಷನ್ ಎಂದರೆ ಬೆಚ್ಚಿ ಬೀಳುವ ಮಧುಮೇಹಿಗಳು ರಿಲ್ಯಾಕ್ಸ್ ಆಗಬಹುದು. ಆದರೆ ಇದು ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ರೋಗಿಗಳಿಗೋ ಎನ್ನುವುದು ಮಾತ್ರ ಇನ್ನೂ ಕನ್ಫರ್ಮ್ ಆಗಿಲ್ಲ. 

loader