ಹಣ್ಣಿಂದ ಎಲ್ಲ ರೀತಿಯ ಪ್ರೋಟಿನ್, ಮಿನರಲ್ಸ್ ದೊರೆಯುತ್ತದೆ. ಇದು ಸ್ಟ್ರೋಕ್, ಮಧುಮೇಹ ಮತ್ತು ಕ್ಯಾನ್ಸರ್ ಅನ್ನು ದೂರ  ಮಾಡುತ್ತದೆ. ಊಟ ತಿಂಡಿ ನಂತರ ಹಣ್ಣು ತಿನ್ನುವ ಅಭ್ಯಾಸವನ್ನು ಹಲವರು ಇಟ್ಟಿಕೊಂಡಿರುತ್ತಾರೆ. ಆದರೆ ಆಹಾರ ಸೇವಿಸಿದ ನಂತರ ನೀರು ಕುಡಿದರೆ, ಅನಾರೋಗ್ಯಕ್ಕೆ ಅಡಿಪಾಯವೆಂಬುವುದು ಅನೇಕರಿಗೆ ಗೊತ್ತೇ ಇಲ್ಲ. ರು ಆರೋಗ್ಯಕ್ಕೆ ಒಳ್ಳೆಯದು ಎಂದು ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿಗೆ ನೀರು ಸೇವಿಸುವವರೂ ಇದ್ದಾರೆ. 

ಭಾರೀ ಭೋಜನದ ನಂತರ ಜೀರ್ಣವಾಗಲಿ ಎಂದು ಬಾಳೆಹಣ್ಣು, ಸೇಬು ಸೇವಿಸುತ್ತೇವೆ. ಈ ಹಣ್ಣುಗಳನ್ನು ತಿಂದ ನಂತರ ಅಪ್ಪಿ ತಪ್ಪಿಯೂ ನೀರಾಗಲಿ, ಹಾಲನ್ನಾಗಿ ಕುಡೀಬಾರದು. ಹಾಗೆ ಮಾಡಿದರೋ, ಹಣ್ಣಿನಲ್ಲಿರೋ ಆ್ಯಸಿಡ್ ಅಂಶ ನೀರಿನೊಂದಿಗೆ ಬೆರೆಯುತ್ತದೆ. ಇದು ಪಚನ ಕ್ರಿಯೆಗೆ ತೊಂದರೆಯನ್ನುಂಟು ಮಾಡುವುದಲ್ಲದೇ, ಗ್ಯಾಸ್ಟ್ರಿಕ್‌ನಂಥ ಸಮಸ್ಯೆಯನ್ನೂ ತಂದೊಡ್ಡುತ್ತದೆ.  

ಕಲ್ಲಂಗಡಿ, ಸೌತೆಕಾಯಿಯಂಥ ಅಧಿಕ ನೀರಿನಂಶ ಇರುವ ಹಣ್ಣುಗಳನ್ನು ತಿಂದಾಗ, ವಿನಾಕಾರಣ ನೀರು ಕುಡಿಯುವ ಅಗತ್ಯವೇ ಇಲ್ಲ. ಇದರಲ್ಲಿರೋ ನೀರನಂಶವೇ ದೇಹಕ್ಕೆ ಸಾಕಾಗುತ್ತದೆ. ಇಂಥ ಹಣ್ಣುಗಳನ್ನು ತಂದು ನೀರು ಸೇವಿಸಿದರೆ, ಲೂಸ್ ಮೋಷನ್ ಆಗುವ ಸಾಧ್ಯತೆಯೂ ಇರುತ್ತದೆ. 

ಒಳ್ಳೆಯದು ಒಳ್ಳೆಯದು ಎಂದು ನಾವು ತಿನ್ನುವ ಕೆಲವು ಹಣ್ಣು, ತರಕಾರಿಗಳನ್ನು ತಿನ್ನಲೂ ವಿಧಾನಗಳಿವೆ. ಅದನ್ನು ಅರಿತುಕೊಂಡು ನಡೆದರೆ ಮಾತ್ರ, ಅತ್ಯುತ್ತಮ ಪಥ್ಯವಾಗಿ, ಆರೋಗ್ಯ ಸುಧಾರಿಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.