ಮಕ್ಕಳು ಇಷ್ಟ ಪಡೋ ಪಾಸ್ತಾ ಮಾಡೋದು ಹೇಗೆ?

First Published 5, Jun 2018, 1:54 PM IST
Right way to cook pasta
Highlights

ಈಗಿನ ಮಕ್ಕಳಿಗೆ ಇಟಾಲಿಯನ್ ಫುಡ್ ಕಡೆ ಒಲವು ಜಾಸ್ತಿ.  ಚಳಿಗೂ ಸೈ, ಮಳೆಗೂ ಸೈ ಎನಿಸಿಕೊಳ್ಳುವ ವೈಟ್ ಆ್ಯಂಡ್ ರೆಡ್ ಪಾಸ್ತಾವೆಂದರಂತೂ ಅಚ್ಚುಮೆಚ್ಚು. ಹಾಗಂತೆ ಹೊರಗೆ ತಿಂದರೆ ಅಷ್ಟು ಒಳ್ಳೆಯದಲ್ಲ. ಮನೆಯಲ್ಲಿಯೂ ಮಾಡಬಹುದು. ತುಸು ಹೆಚ್ಚು ಕಮ್ಮಿಯಾದರೂ ಮಾತ್ರ ರುಚಿ ಹಾಳಾಗುತ್ತೆ. ಹಾಗಾದರೆ ಸರಿಯಾಗಿ ತಯಾರಿಸೋ ವಿಧಾನವೇನು?

2 ಮಿನಿಟ್ಸ್ ತಿನಿಸೆಂದೇ ಖ್ಯಾತವಾದ ಪಾಸ್ತಾ ಸರಿಯಿಲ್ಲವೆಂದು ದೂರುವವರೇ ಹೆಚ್ಚು. ಅಷ್ಟಕ್ಕೂ ಇದನ್ನು ಸರಿಯಾಗಿ ಬೇಯಿಸದಿದ್ದಲ್ಲಿ, ಸಾಕಷ್ಟು ಉಪ್ಪು, ಹುಳಿ ಹಾಕದಿದ್ದಲ್ಲಿ ರುಚಿ ಕೆಡುತ್ತೆ. 

  • ಕೊಳ್ಳುವಾಗಲೇ ಒಳ್ಳೆಯ  ಬ್ರ್ಯಾಂಡ್ ಪಾಸ್ತಾ ಕೊಂಡು ಕೊಳ್ಳಿ. ಕಳಪೆ ಹಿಟ್ಟಿನಿಂದ ಮಾಡಿದ ಪಾಸ್ತಾ ರುಚಿಯಾಗಿರುವುದಿಲ್ಲ.
  •  ನೀರು ಕುದಿ ಬಂದ ನಂತರವೇ ಪಾಸ್ತಾ ಹಾಕಿ. 
  •  ನೀರಿಗೆ ಸರಿಯಾದ ಪ್ರಮಾಣದಲ್ಲಿ ಉಪ್ಪು ಸೇರಿಸಿ.
  •  ಪಾಸ್ತಾ ತೇಲುವಷ್ಟು ನೀರಿರಲಿ. 
  •  ನೀರಿನಿಂದ ಹೊರ ತೆಗೆದ ನಂತರ ಪಾಸ್ತಾವನ್ನು ಶೋಧಿಸಬಾರದು. ಹಾಗೆ ಮಾಡಿದಲ್ಲಿ ಪಾಸ್ತಾದ ಮೃದುತ್ವ ಕಳೆದು ಹೋಗುತ್ತದೆ.
  •  ಪಾಸ್ತಾ ಮತ್ತು ಸಾಸ್ ಒಂದೇ ಸಮವಾಗಿ ಬೇಯಿಸಬೇಕು. ಇದು ಹೆಚ್ಚು ಕಮ್ಮ ಆದರೂ ರುಚಿ ಕೆಡುತ್
loader