ಸಿದ್ದೆ ಅಕ್ಕಿ ಅನ್ನ ತಿನ್ನುವಂತೆ ಮಾಡೋ ಮಾವಿನ ಖಡಿ ರೆಸಿಪಿ

First Published 26, May 2018, 4:02 PM IST
Recipe of mango kadi
Highlights

ಇದು ಮಾವಿನ ಹಣ್ಣಿನ ಸೀಸನ್. ಮಾವಿನ ಕಾಯಿ ಚಿತ್ರಾನ್ನ, ಮಾವಿನ ಮಿಡಿ ಉಪ್ಪಿನ ಕಾಯಿ, ಮಾವಿನ ಹಣ್ಣಿನ ರಸಾಯನ, ಸಾಸಿವೆ, ಗೊಜ್ಜು....ಅಬ್ಬಾ ಒಂದೋ, ಎರಡೋ? ಹಣ್ಣಿನ ಋತು ಮುಗಿಯುವವರೆಗೂ ಹಣ್ಣುಗಳ ರಾಜ ಮಾವಿನದ್ದೇ ಕಾರುಬಾರು.

ಮೊಸರಲ್ಲಿ ಮಾಡೋ ಖಡಿ ಎಲ್ಲರಿಗೂ ಗೊತ್ತು.  ಆದರೆ, ಮಾವಿನ ಖಡಿ ಯಾವತ್ತಾದರೂ ಟ್ರೈ ಮಾಡಿದ್ರಾ? ಹೇಗೆ ಮಾಡೋದು?

ಬೇಕಾಗುವ ಸಾಮಾಗ್ರಿಗಳು

 

- ಅರ್ಧ ಕಪ್ ಅರ್ಧಂಬರ್ಧ ಹಣ್ಣಾದ ಮಾವಿನ ತಿರುಳು.

 

- 3 ಚಮಚ ಕಡ್ಲೆ ಹಿಟ್ಟು

 

- ಕಾಲು ಸ್ಪೂನ್ ಅರಿಷಿಣದ ಪುಡಿ

 

- ರುಚಿಗೆ ತಕ್ಕಷ್ಟು ಉಪ್ಪು 

 

-3 ಕಪ್ ಹುಳಿ ಮಜ್ಜಿಗೆ

 

- 2 ಚಮಚ ಎಣ್ಣೆ

 

- 1 ಚಿಟಿಕೆ ಇಂಗು

 

- ಅರ್ಧ ಕಪ್ ಜೀರಿಗೆ

 

- 6-8 ಕರಿ ಬೇವಿನ ಸೊಪ್ಪು 

 

- 3 ಸಣ್ಣಗೆ ಹೆಚ್ಚಿರುವ ಮೇಣಸಿನ ಕಾಯಿ. 

 

-1 ಚಮಚ ಬೆಲ್ಲ.

 

 ಮಾಡುವ ವಿಧಾನ

- ಒಂದು ಪಾತ್ರೆಯಲ್ಲಿ ಅರ್ಧಂಬರ್ಧ ಹಣ್ಣಾದ ಮಾವಿನ ತಿರುಳು, ಕಡ್ಲೆ ಹಿಟ್ಟು, ಅರಿಷಿಣ ಮತ್ತು ಉಪ್ಪು ಮಿಶ್ರಣ ಮಾಡಬೇಕು

- ಅದಕ್ಕೆ ಹುಳಿ ಮಜ್ಜಿಗೆ ಸೇರಿಸಿ

- ಬಾಣಲೆಯಲ್ಲಿ ಎಣ್ಣೆ ಹಾಕಿ, ಬಿಸಿ ಮಾಡಿ, ನಂತರ ಇಂಗು, ಜೀರಿಗೆ, ಕೆರಿಬೇವಿನ ಸೊಪ್ಪು ಹಾಗು ಮೆಣಸಿಕಾಯಿ ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಿ. 

- ಒಂದು ನಿಮಿಷದ ನಂತರ ಮತ್ತೆ ಮಾವಿನ ತಿರುಳನ್ನು ಬೆರೆಸಿ, ಅದಕ್ಕೆ ಬೆಲ್ಲ ಸೇರಿಸಿ. 

- ಆಗಿರುವ ಖಡಿಗೆ ಅಗತ್ಯದಷ್ಟು ನೀರು ಸೇರಿಸಿ 5 ನಿಮಿಷ ಬೇಯಿಸಿ. 

-ಅನ್ನದ ಜತೆ ಸವಿಯಲು, ರುಚಿಕರವಾದ ಖಡಿ ಸಿದ್ಧ.

loader