ಅಬ್ಬಾ, ಗೋಲ್ ಗಪ್ಪಾವನ್ನು ಹೀಗ್ ಮಾಡ್ತಾರಾ?

First Published 19, Oct 2018, 4:38 PM IST
Reason why you should not have gol gappe on streets
Highlights

ಯಾರಿಗೆ ತಾನೆ ಗೋಲ್ ಗುಪ್ಪ ಇಷ್ಟವಿಲ್ಲ ಹೇಳಿ? ಬಾಯಲ್ಲಿ ನೀರು ತರಿಸುವ ಇದನ್ನು ಒಂದೆರಡು ಪ್ಲೇಟ್ ತಿಂದರೆ ತೃಪ್ತಿಯೇ ಆಗೋಲ್ಲ. ಹೀಗೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಗೋಲ್ ಗುಪ್ಪಾವನ್ನು ಹೇಗ್ ಮಾಡ್ತಾರೆ ಗೊತ್ತಾ?

ಬೀದಿ ಬದಿಯಲ್ಲಿ ಮಾರೋದೆಲ್ಲ ಕ್ಲೀನ್ ಅಲ್ಲವೆಂದು ನಮಗೆ ಗೊತ್ತು. ಆದರೆ, ಆ ರುಚಿ ಮಾತ್ರ ಬಾಯಲ್ಲಿ ನೀರೂರಿಸುವುದು ಸುಳ್ಳಲ್ಲ. ಆ ತಿಂಡಿಯನ್ನು ಮಾಡಲು ಬಳಸುವ ನೀರು, ಕೊಳಕು ಕೈ...ಎಲ್ಲವೂ ಸೇರಿ ಬ್ಯಾಕ್ಟೀರಿಯಾದ ಆಗರವಾಗೋದು ಸುಳ್ಳಲ್ಲ. ಈ ತಿಂಡಿಗಳನ್ನು ಹೇಗೆ ಮಾಡ್ತಾರೆ ಗೊತ್ತಾ?

  • ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುತ್ತೆ. ಅಲ್ಲಿ ಸೊಳ್ಳೆಯೂ ಇರುತ್ತೆ. ಇಂಥ ಕೊಳಕು ಜಾಗದಲ್ಲಿಯೇ ನಿಂತು ಮಾರುವ ಗೋಲ್ ಗುಪ್ಪಾವನ್ನು ತಿನ್ನುವುದಾದರೂ ಹೇಗೆ?
  • ಈ ಪೂರಿಯನ್ನು ಕರಿಯೋ ಎಣ್ಣೆಯ ಬಣ್ಣವೇ ಬದಲಾಗಿರುತ್ತದೆ. ಅದನ್ನು ನೋಡಿದರೆ ಸಾಕು, ಅನಾರೋಗ್ಯ ಕಾಡುತ್ತೆ. ಇನ್ನು ತಿಂದರೆ? - ಈ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ತಿಂದರೆ, ದೇಹದಲ್ಲಿ ಕೊಲೆಸ್ಟರಾಲ್ ಹೆಚ್ಚಿ, ಹೃದಯ ಸಂಬಂಧಿ ರೋಗ ಬರುವುದು ಗ್ಯಾರಂಟಿ.
  • ಗೋಲ್ ಗುಪ್ಪ ಮಾಡಲು ಹಾಗೂ ಅದರೊಂದಿಗೆ ಕೊಡುವ ಪಾನಿ ತಯಾರಿಸಲು ಶುದ್ಧ ನೀರನ್ನು ಬಳಸುವುದೇ ಇಲ್ಲ. ಬೇಧಿಯಂಥ ಸಮಸ್ಯೆ ಕಾಡುವುದು ಸಹಜ.
  • ಕೊಡುವವರ ಕೈ ಸಹ ಶುದ್ಧವಾಗಿರುವುದಿಲ್ಲ. ಇದರಿಂದಲೂ ಕಾಯಿಲೆ ಹರಡುತ್ತೆ.
  • ಆಲೂಗಡ್ಡೆಯನ್ನು ತೊಳೆದು ಬಳಸೋದೇ ಇಲ್ಲ. ಇದೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಒಂದೇ ಕವರ್‌ನಲ್ಲಿ ಪೂರಿಯನ್ನು ಸ್ಟೋರ್ ಮಾಡಿರುತ್ತಾರೆ. ಆ ಕೊಳಕು ಕವರ್‌ನಿಂದಲೂ ಬ್ಯಾಕ್ಟೀರಿಯಾ ಹೆಚ್ಚಾಗೋ ಸಾಧ್ಯತೆ ಇರುತ್ತದೆ.
loader