ಬಾಳೆಹಣ್ಣು ಹಾರ್ಟ್ ಬೀಟ್ ಕಂಟ್ರೋಲ್ ಮಾಡುತ್ತದೆ. ಪೊಟ್ಯಾಷಿಯಂ ಅಧಿಕವಿರುವ ಇದರಲ್ಲಿ ರಕ್ತದೊತ್ತಡವನ್ನು ಸಮತೋಲನವಾಗಿಸುವ ಗುಣವೂ ಇದೆ. ಎಲ್ಲ ಹಬ್ಬ ಹರಿದಿನಗಳಲ್ಲಿ ಬಾಳೆಕಾಯಿ ಪಲ್ಯ ಮಾಡುತ್ತೇವೆ. ಇಲ್ಲವೇ ಬಜ್ಜಿ ತಯಾರಿಸುತ್ತಾರೆ. ಆದರೆ ತುಸು ವಿಭಿನ್ನವಾಗಿ ಬಾಳೆಕಾಯಿ ಫ್ರೈ ಮಾಡಬಹುದು
ಹೊರಗೆ ಮಳೆ ಸುಯ್ಯನೇ ಸುರಿಯುತ್ತಿದ್ದರೆ, ಬಾಳಿಕಾಯಿ ಬಜ್ಜಿ ಮಾಡೋದು ಗೊತ್ತು. ಇಲ್ಲ ಚಿಪ್ಸ್ ಮಾಡಿ ನಾಲ್ಕು ದಿನವಿಟ್ಟುಕೊಂಡು ತಿನ್ನುವುದೂ ಗೊತ್ತು. ಆದರೆ, ಇದರ ಫ್ರೈ ಮಾಡಬಹುದೆಂಬುವುದು ಗೊತ್ತಾ? ಇಲ್ಲಿದೆ ರೆಸಿಪಿ, ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
- 1 ಬಾಳೆಕಾಯಿ
- ಕಾಲು ಚಮಚ ಅರಿಶಿಣ
- ಸಾಂಬಾರ್ ಪುಡಿ
- ಕಾಲು ಚಮಚ ಮೆಣಸಿನ ಪುಡಿ
- ಅರ್ಧ ಚಮಚ ಉಪ್ಪು
- 2 ಚಮಚ ಎಣ್ಣೆ
- 1 ಚಮಚ ಸಾಸಿವೆ
- ಅರ್ಧ ಚಮಚ ಉದ್ದಿನ ಬೇಳೆ
- ಅರ್ಧ ಚಮಚ ಜೀರಿಗೆ
- ಅರ್ಧ ಚಮಚ ಸೋಂಪಿನ ಕಾಳು
- 1 ಕೆಂಪು ಮೆಣಸಿನ ಕಾಯಿ
- ಸ್ವಲ್ಪ ಇಂಗು
- ಕರಿಬೇವು
ಮಾಡುವ ವಿಧಾನ:
- ಬಾಳೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು, ಅದಕ್ಕೆ ಅರಿಷಿಣ, ಸಾಂಬಾರ್ ಪುಡಿ, ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ, ಕಲಸಿ.
- ಒಂದು ಪಾತ್ರೆಯಲ್ಲಿ ಕಾದ ಎಣ್ಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಸೋಂಪು ಕಾಳು, ಕೆಂಪು ಮೆಣಸು, ಇಂಗು ಮತ್ತು ಕರಿಬೇವು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ.
- ನಂತರ ಮಿಶ್ರಣ ಮಾಡಿದ ಬಾಳೆಕಾಯಿಯನ್ನು ಪಾತ್ರೆಗೆ ಹಾಕಿ ಸ್ವಲ್ಪ ನೀರು ಸೇರಿಸಿ 10 ನಿಮಿಷ ಕುದಿಸಿ. ಈಗ ಬಾಳೆಕಾಯಿ ಫ್ರೈ ರೆಡಿ.
