ಒಂದು ಮದುವೆಯಾಗಿ ಅನೇಕರ ಜೊತೆ ಸಂಬಂಧ ಇಟ್ಟುಕೊಳ್ಳುವುದು ಸಾಧ್ಯವೇ?

Polyamory
Highlights

ಒಂದು ಮದುವೆಯಾದರೆ ಮೋನೋಗಮಿ, ಅನೇಕವಿದ್ದರೆ  ಪಾಲಿಗಮಿ. ಒಂದೇ ಮದುವೆಯಾಗಿ ಅನೇಕರ ಜೊತೆ  ಸಂಬಂಧ ಇಟ್ಟುಕೊಂಡಿದ್ದರೆ ಅದು ಪಾಲಿಯಾಮೊರಿ. ಇದು ಸಾಧ್ಯವೇ ಎಂದು ಅಚ್ಚರಿಯಿಂದ ಕೇಳುವವರಿಗೆ ಅನೇಕ
ಪ್ರಶ್ನೆಗಳಿರುತ್ತವೆ. ಪಾಲಿಯೋಮೊರಿಯ ಏಳು ಹೆಜ್ಜೆಗಳು ಹೀಗೆ:

ಒಂದು ಮದುವೆಯಾದರೆ ಮೋನೋಗಮಿ, ಅನೇಕವಿದ್ದರೆ  ಪಾಲಿಗಮಿ. ಒಂದೇ ಮದುವೆಯಾಗಿ ಅನೇಕರ ಜೊತೆ  ಸಂಬಂಧ ಇಟ್ಟುಕೊಂಡಿದ್ದರೆ ಅದು ಪಾಲಿಯಾಮೊರಿ. ಇದು ಸಾಧ್ಯವೇ ಎಂದು ಅಚ್ಚರಿಯಿಂದ ಕೇಳುವವರಿಗೆ ಅನೇಕ
ಪ್ರಶ್ನೆಗಳಿರುತ್ತವೆ. ಪಾಲಿಯೋಮೊರಿಯ ಏಳು ಹೆಜ್ಜೆಗಳು ಹೀಗೆ:

ಪಾಲಿಯೋಮೊರಿ ಲೈಂಗಿಕ ಸ್ವೇಚ್ಛೆ ಅಲ್ಲ: ಹಲವಾರು ಮಂದಿಯ ಜೊತೆ  ಸಂಬಂಧ ಹೊಂದುವುದು ಅಂದರೆ ಲೈಂಗಿಕ ಸ್ವೇಚ್ಛೆ ಎಂದು  ಭಾವಿಸಬೇಕಾಗಿಲ್ಲ. ಎಷ್ಟೋ ಸಂಬಂಧಗಳಲ್ಲಿ ಲೈಂಗಿಕ ಸಂಬಂಧವೇ ಇರುವುದಿಲ್ಲ. ಅದು ಕೇವಲ ಗೆಳೆತನ ಅಥವಾ ಮಾನಸಿಕ ಅಗತ್ಯ ಮಾತ್ರವೇ  ಆಗಿರಬಹುದು. ಜೊತೆಗಿರುವುದು, ಮಾತಾಡುವುದು, ಬಾಂಧವ್ಯ  ಆಗಲೂಬಹುದು. ಹಾಗಂತ ಲೈಂಗಿಕತೆ ವರ್ಜ್ಯ ಅಲ್ಲ. 

ಸುಖ ಬೇಕು ಜವಾಬ್ದಾರಿ ಬೇಡ ಅನ್ನುವವರಿಗಲ್ಲ: ಇಂಥ ಸಂಬಂಧಗಳಲ್ಲಿ  ಬಂಧನ ಇರುವುದಿಲ್ಲ. ಬೇಕಾದಷ್ಟು ಸ್ವಾತಂತ್ರ್ಯ ಇರುತ್ತದೆ. ಬೇಡ ಅನ್ನಿಸಿದಾಗ ಬಿಟ್ಟು ಹೋಗಬಹುದು. ಯಾವುದಕ್ಕೂ ಕಮಿಟ್ ಆಗದೇ ಇರುವವರಿಗೆ ಈ ಸಂಬಂಧ ಅನ್ನುವುದು ಕೂಡ ನಿಜವಲ್ಲ. ಇದು  ದಾಂಪತ್ಯಕ್ಕಿಂತ ಹೆಚ್ಚು ಗಾಢವಾಗಿರುವ ಸಂಬಂಧವೂ ಆಗಬಹುದು.

ಇಲ್ಲಿ ಹೊಟ್ಟೆಕಿಚ್ಚಿನ ಮಾತೇ ಇಲ್ಲ: ಸಾಮಾನ್ಯವಾಗಿ ಗಂಡುಹೆಣ್ಣುಗಳಿಬ್ಬರೂ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿಗಳೇ ಆಗಿರುವುದರಿಂದ ಇಂಥ ಸಂಬಂಧ  ಸಾಧ್ಯವೇ ಇಲ್ಲ ಎಂದು ನಂಬಲಾಗುತ್ತದೆ. ಆದರೆ ವಾಸ್ತವದಲ್ಲಿ  ಹಾಗಿರುವುದಿಲ್ಲ. ಇಲ್ಲಿ ಪರಸ್ಪರರ ಬಗ್ಗೆ ಗೌರವ, ಪ್ರೀತಿ, ಅಕ್ಕರೆ ಎಲ್ಲವೂ  ಇರುತ್ತದೆ. ಒಡೆದುಹೋಗುತ್ತಿರುವ ಸಮಾಜದಲ್ಲಿ ಮತ್ತೆ ಕೂಡುಕುಟುಂಬದ  ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಈ ಸಂಬಂಧ ಎಂದು  ನಂಬಲಾಗುತ್ತಿದೆ.

ಇದು ಲೈಂಗಿಕ ವಿಕಾರ ಅಲ್ಲ: ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಪರಸ್ಪರ  ಸಂಬಂಧ ಹೊಂದಿದಾಗ ಸಮೂಹಕಾಮಕ್ಕೆ ಅವಕಾಶ ಆಗುವುದಿಲ್ಲವೇ?  ಇದು ವಿಕೃತ ಲೈಂಗಿಕತೆ ಅಲ್ಲವೇ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಇದು ಹಾಗಲ್ಲ ಅನ್ನುತ್ತಾರೆ ಈ ಸಂಬಂಧದಲ್ಲಿ ತೊಡಗಿಕೊಂಡವರು. ಕ್ರಮೇಣ  ಅಂಥ ಆಸಕ್ತಿಗಳು ಹೊರಟು ಹೋಗಿ ಶುದ್ಧವಾದ ಪ್ರೀತಿ ಉಗಮವಾಗುತ್ತದೆ. ಕೇರಿಂಗ್ ಮತ್ತು ಶೇರಿಂಗ್ ಮುನ್ನೆಲೆಗೆ ಬರುತ್ತದೆ ಅನ್ನುವುದು  ಲೋಕಾಭಿಪ್ರಾಯ.

ವಿವಾಹ ಬಂಧನದ ಭಯವುಳ್ಳರಿಗೆ ಇದು ಉಪಾಯ ಅಲ್ಲ: ನನಗೆ ಮದುವೆ  ಬೇಕಾಗಿಲ್ಲ. ಹರಿವ ನೀರಿನಂತೆ ಇರುತ್ತೇನೆ ಅನ್ನುವವರು ಈ  ಸಂಬಂಧದೊಳಗೆ ಹೊಕ್ಕು ಸುಖವಾಗಿರಬಹುದೇ? ಇದು ಲಿವ್-ಇನ್ ಸಂಬಂಧದಂತೆ ಅಲ್ಲ. ಇದರ ಸ್ವರೂಪವೇ ಬೇರೆ. ಇದು ಸಾಮಾನ್ಯವಾಗಿ  ಘಟಿಸುವುದು ವಿವಾಹಿತರ ನಡುವೆಯೇ.

ಇದು ಏಡ್ಸ್‌ನಂಥ ರೋಗಗಳಿಗೆ ಕಾರಣವಾಗಲಾರದೇ?:

ಇದೀಗ ನಿಜವಾದ ಪ್ರಶ್ನೆ. ಈ ಸಂಬಂಧ ಹುಟ್ಟುಹಾಕುವ ಬಹುಕೋನ ಲೈಂಗಿಕತೆಯಿಂದ ರೋಗಕ್ಕೆ ತುತ್ತಾಗುವ ಸಂಭವ ಎಷ್ಟು? ಇಂಥ ಸಂಬಂಧಗಳಲ್ಲಿ  ತೊಡಗಿಕೊಳ್ಳುವವರು ಸುರಕ್ಷಿತ ಲೈಂಗಿಕತೆಗೆ ಹೆಚ್ಚು ಒತ್ತುಕೊಡುತ್ತಾರೆ.
ಆದ್ದರಿಂದ ಅಂಥದ್ದೇನೂ ಆಗದು ಎನ್ನುವುದು ಇದರ ಪ್ರತಿಪಾದಕರ ವಾದ. 

ಎಲ್ಲರೂ ನಮ್ಮವರಾದರೆ ನಿಜಕ್ಕೂ ನಮ್ಮವರು ಯಾರು?: ಇಂಥ  ಸಂಬಂಧಗಳಲ್ಲಿ ನಿಜಕ್ಕೂ ಅಕ್ಕರೆ, ಆತ್ಮೀಯತೆ ಇರಲು ಸಾಧ್ಯವೇ? ಯಾರ  ಬಗ್ಗೆ ಹೆಚ್ಚಿನ ಪ್ರೀತಿ ಇರುತ್ತದೆ? ಪ್ರೀತಿ ಉಳಿಯುತ್ತದೆಯಾ? ಇದು ಕೇವಲ  ಸಹಪ್ರಯಾಣದಷ್ಟೇ ನಿರ್ಲಿಪ್ತವಾಗಿ  ಇರುವ ಸಾಧ್ಯತೆಯಿಲ್ಲವೇ?  ಒಬ್ಬರ ಕಷ್ಟಕ್ಕೆ ಸುಖಕ್ಕೆ ನೋವಿಗೆ  ಮತ್ತೊಬ್ಬರು ನಿಜಕ್ಕೂ  ಸ್ಪಂದಿಸುತ್ತಾರಾ ಎಂಬ  ಪ್ರಶ್ನೆಗೂ ಇದರಲ್ಲಿ  ತೊಡಗಿಕೊಂಡವರು ಉತ್ತರ ಕಂಡುಕೊಂಡಿದ್ದಾರೆ. ಇದೊಂದು ಗೆಳೆಯರ
ಗುಂಪಿನಂತೆ ಕೆಲಸ ಮಾಡುವುದರಿಂದ  ಸಂಬಂಧಗಳು ಮತ್ತಷ್ಟು  ಬಲವಾಗುತ್ತವೆ ಅನ್ನುತ್ತಾರೆ.

loader