ನಿಜವಾದ ಸಾಮರ್ಥ್ಯ ಹೊರ ಬರಬೇಕೆಂದರೆ ಹೀಗೆ ಮಾಡಬೇಕು

Personality Growth Story
Highlights

ನವ ಚಿಟ್ಟೆಯೊಂದು ಮೊಟ್ಟೆ, ಲಾರ್ವಾ ಹಂತಗಳನ್ನು ದಾಟಿ ಕೊನೆಯ ಹಂತದಲ್ಲಿ  ಪೊರೆಯಿಂದ ಹೊರಬರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿತ್ತು. ಎತ್ತಲೋ ಹೋಗುತ್ತಿದ್ದ ವ್ಯಕ್ತಿ ಇದನ್ನು ಕಂಡು ನಿಂತ. ಪೊರೆಯ ಚಿಕ್ಕ ರಂಧ್ರದಿಂದ ಹೊರಬರಲು ಆ ನವಚಿಟ್ಟೆ ತಿಣುಕಾಡಿ, ಒದ್ದಾಡಿ ಇನ್ನಿಲ್ಲದಂತೆ ಕಷ್ಟಪಡುತ್ತಿತ್ತು. ಬಹಳ ಸುಸ್ತಾಗಿರಬೇಕು, ಕೊನೆಗೊಮ್ಮೆ ತನ್ನ ಪ್ರಯತ್ನ ನಿಲ್ಲಿಸಿಬಿಟ್ಟಿತು. ಅದು ಆ ಪೊರೆಯೊಳಗೆ ಸಿಕ್ಕಿಹಾಕಿಕೊಂಡಂತಿತ್ತು. ವ್ಯಕ್ತಿ ತಾಳ್ಮೆಯಿಂದ ನೋಡಿದ. ಊಹೂಂ, ಚಲನೆ ಇಲ್ಲ. ಆತ ಚಿಟ್ಟೆಗೆ ಸಹಾಯ ಮಾಡಲು ನಿರ್ಧರಿಸಿದ. ತನ್ನ ಜೇಬಿನಿಂದ ಕತ್ತರಿ ತಗೊಂದು ಆ ಪೊರೆಯನ್ನು ತೆಗೆದುಹಾಕಿದ. 

ನವ ಚಿಟ್ಟೆಯೊಂದು ಮೊಟ್ಟೆ, ಲಾರ್ವಾ ಹಂತಗಳನ್ನು ದಾಟಿ ಕೊನೆಯ ಹಂತದಲ್ಲಿ  ಪೊರೆಯಿಂದ ಹೊರಬರಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿತ್ತು. ಎತ್ತಲೋ ಹೋಗುತ್ತಿದ್ದ ವ್ಯಕ್ತಿ ಇದನ್ನು ಕಂಡು ನಿಂತ. ಪೊರೆಯ ಚಿಕ್ಕ ರಂಧ್ರದಿಂದ ಹೊರಬರಲು ಆ ನವಚಿಟ್ಟೆ ತಿಣುಕಾಡಿ, ಒದ್ದಾಡಿ ಇನ್ನಿಲ್ಲದಂತೆ ಕಷ್ಟಪಡುತ್ತಿತ್ತು. ಬಹಳ ಸುಸ್ತಾಗಿರಬೇಕು, ಕೊನೆಗೊಮ್ಮೆ ತನ್ನ ಪ್ರಯತ್ನ ನಿಲ್ಲಿಸಿಬಿಟ್ಟಿತು.

ಅದು ಆ ಪೊರೆಯೊಳಗೆ ಸಿಕ್ಕಿಹಾಕಿಕೊಂಡಂತಿತ್ತು. ವ್ಯಕ್ತಿ ತಾಳ್ಮೆಯಿಂದ ನೋಡಿದ. ಊಹೂಂ, ಚಲನೆ ಇಲ್ಲ. ಆತ ಚಿಟ್ಟೆಗೆ ಸಹಾಯ ಮಾಡಲು ನಿರ್ಧರಿಸಿದ. ತನ್ನ ಜೇಬಿನಿಂದ ಕತ್ತರಿ ತಗೊಂದು ಆ ಪೊರೆಯನ್ನು ತೆಗೆದುಹಾಕಿದ.  ಈಗ ಚಿಟ್ಟೆ ಸುಲಭವಾಗಿ ಹೊರಬಂತು. ಆದರೆ ಅದರ ದೇಹ ಊದಿಕೊಂಡಂತಿತ್ತು. ರೆಕ್ಕೆಗಳು ಕುಗ್ಗಿಹೋದಂತೆ ಅಶಕ್ತವಾಗಿದ್ದವು. ಅದೆಲ್ಲ ಸರಿಹೋಗುತ್ತದೆ ಅಂದುಕೊಂಡ ಆ ವ್ಯಕ್ತಿ. ತಾನೇ ಆ ಕುಗ್ಗಿದ ರೆಕ್ಕೆಗಳನ್ನು ಬಿಡಿಸಲು ಪ್ರಯತ್ನಿಸಿದ. ಸೂಕ್ಷ್ಮರೆಕ್ಕೆಗಳು ಇನ್ನಷ್ಟು ದುರ್ಬಲವಾದವು. ಮನುಷ್ಯ ಮಾಡಿದ ದೊಡ್ಡ ಸಹಾಯದಿಂದ ಆ ಚಿಟ್ಟೆಗೆ ಕೊನೆಯವರೆಗೂ ಹಾರಲಾಗಲೇ  ಇಲ್ಲ. 

ಚಿಕ್ಕ ರಂಧ್ರದಿಂದ ಹೊರಬರಲು ಆ ಚಿಟ್ಟೆ ಮುನ್ನುಗ್ಗುವ ಯತ್ನವೇ ಅದರ ರೆಕ್ಕೆಗಳಲ್ಲಿ ಶಕ್ತಿ ತುಂಬುತ್ತದೆ. ಆ ಶಕ್ತಿಯಿಂದ ಚಿಟ್ಟೆ ಸ್ವತಂತ್ರವಾಗಿ ಹಾರುವುದು ಸಾಧ್ಯವಾಗುತ್ತದೆ. 

loader