Asianet Suvarna News Asianet Suvarna News

ಫೋಟೋದಲ್ಲಿ ಫಸ್ಟ್ ನಿಮಗೇನ್ ಕಾಣುತ್ತೆ, ಇದು ನೀವೆಷ್ಟು Workaholic ತಿಳಿಸುತ್ತೆ!

ಕೆಲಸದ ವಿಷಯಕ್ಕೆ ಬಂದಾಗ ಒಬ್ಬೊಬ್ಬರು ಕೆಲಸ ಮಾಡುವ ರೀತಿ ಒಂದೊಂದು ರೀತಿಯಿರುತ್ತದೆ. ಕೆಲವೊಬ್ಬರು ತುಂಬಾ ಆರಾಮದಾಯಕವಾಗಿ ವರ್ಕ್ ಮಾಡಬಹುದು. ಇನ್ನು ಕೆಲವರು ಅತೀಯಾಗಿ ಕೆಲಸ ಮಾಡಬಹುದು. ಈ ಪೋಟೋ ನೋಡಿ, ತಕ್ಷಣಕ್ಕೆ ನಿಮಗೇನ್ ಕಾಣುತ್ತೆ ಅನ್ನೋದು ನೀವೆಷ್ಟು ವರ್ಕೋಹಾಲಿಕ್ ಅನ್ನೋದನ್ನು ತಿಳಿಸುತ್ತೆ.

Optical illusion reveals your personality traits, Kindness vs Workaholic Vin
Author
First Published Sep 24, 2023, 3:26 PM IST

ವ್ಯಕ್ತಿತ್ವ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಒಬ್ಬ ವ್ಯಕ್ತಿ ಇದ್ದಂತೆ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಇಷ್ಟ-ಕಷ್ಟಗಳು, ಯಾವುದೇ ಕೆಲಸವನ್ನು ಮಾಡುವ ರೀತಿ, ಜೀವನದ ಬಗೆಗಿರುವ ಧೋರಣೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲಸದ ವಿಷಯಕ್ಕೆ ಬಂದಾಗಲೂ ಅಷ್ಟೆ. ಒಬ್ಬೊಬ್ಬರು ಕೆಲಸ ಮಾಡುವ ರೀತಿ ಒಂದೊಂದು ರೀತಿಯಿರುತ್ತದೆ. ಕೆಲವೊಬ್ಬರು ತುಂಬಾ ಆರಾಮದಾಯಕವಾಗಿ ವರ್ಕ್ ಮಾಡಬಹುದು. ಇನ್ನು ಕೆಲವರು ಅತೀಯಾಗಿ ಕೆಲಸ ಮಾಡಬಹುದು. ಇನ್ನು ಕೆಲವರು ತುಂಬಾ ಈಝಿಯಾಗಿ ಮಾಡಿ ಮುಗಿಸಿಬಿಡಬಹುದು. ಮತ್ತೆ ಕೆಲವರು ದಿನಪೂರ್ತಿ ಕೆಲಸ ಮಾಡುತ್ತಲೇ ಇರಲು ಇಷ್ಟಪಡಬಹುದು. ಇದರಲ್ಲಿ ನೀವು ಯಾವ ರೀತಿ? ಆಪ್ಟಿಕಲ್ ಇಲ್ಯೂಶನ್‌ನ ಈ ಫೋಟೋ ನೋಡಿ ನೀವು ಸಾಧಾರಣ ವರ್ಕರಾ ಅಥವಾ ವರ್ಕೋಹಾಲಿಕಾ ಅನ್ನೋದನ್ನು ತಿಳ್ಕೊಳ್ಳಿ

ಇತ್ತೀಚೆಗೆ, ಆಪ್ಟಿಕಲ್‌ ಇಲ್ಯೂಶನ್‌ನ ಫೋಟೋಗಳು ಜನರಿಗೆ ಹೆಚ್ಚು ಇಷ್ಟವಾಗುತ್ತಿವೆ. ಇದು ವ್ಯಕ್ತಿಯ ನೈಜ ಸ್ವಭಾವದ (Behaviour) ಬಗ್ಗೆ ಕೆಲವೊಂದು ಮಾಹಿತಿಯನ್ನು ನೀಡುತ್ತದೆ. ಇದು ಸಂಪೂರ್ಣ ನಿಜವೆಂದು ಹೇಳುವಂತಿಲ್ಲ. ಆದರೆ ಕೆಲವೊಮ್ಮೆ ಇದು ಭಾಗಶಃ ನಿಜ, ಇನ್ನು ಕೆಲವೊಮ್ಮೆ ಭಾಗಶಃ ಸುಳ್ಳಾಗಿರುತ್ತದೆ. ಈ ಕುತೂಹಲಕಾರಿ ಆಪ್ಟಿಕಲ್ ಭ್ರಮೆಯು ವ್ಯಕ್ತಿತ್ವಕ್ಕೆ (Personality) ಕನ್ನಡಿಯಂತೆ ಕಾರ್ಯನಿರ್ವಹಿಸುತ್ತದೆ, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತದೆ. 

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಪೋಟೋ ನೋಡಿ ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳ್ಕೊಳ್ಳಿ
ಈ ಫೋಟೋವನ್ನು ಆಪ್ಟಿಕಲ್ ಇಲ್ಯೂಷನ್ ಸ್ಪೆಷಲಿಸ್ಟ್ ಮಿಯಾ ಯಿಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರು ಜಿಜ್ಞಾಸೆ ಒಗಟುಗಳು ಮತ್ತು ಆಪ್ಟಿಕಲ್ ಭ್ರಮೆಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾದ ಸಾಮಾಜಿಕ ಮಾಧ್ಯಮದಲ್ಲಿ (Social media) ಜನಪ್ರಿಯ ವ್ಯಕ್ತಿ. ಇವರ ಆಪ್ಟಿಕಲ್ ಇಲ್ಯೂಶನ್ ಯಾವಾಗಲೂ ವ್ಯಕ್ತಿಯ ನಿಜವಾದ ಗುಣ ನಡವಳಿಕೆಗಳನ್ನು ಬಹಿರಂಗಪಡಿಸುತ್ತದೆ. ಈಗ ನೀವು ಈ ಫೋಟೋ ನೋಡಿ ನಿಮ್ಮ ಕೆಲಸದ ರೀತಿಯ ಬಗ್ಗೆ ತಿಳ್ಕೊಳ್ಳಿ.

ಮೊದಲಿಗೆ ಈ ಚಿತ್ರವನ್ನು ನೋಡಿ. ಮೊದಲಿಗೆ ನಿಮಗೆ ಒಬ್ಬ ವ್ಯಕ್ತಿ ಕಾಣುತ್ತಾನಾ ಅಥವಾ ಕೊಶ್ಚನ್‌ ಮಾರ್ಕ್‌ ಕಾಣುತ್ತದಾ ಎಂಬುದನ್ನು ಗಮನಿಸಿ. ಕೆಲವೊಬ್ಬರಿಗೆ ಥಟ್ಟನೆ ನೋಡಿದಾಗ ಪ್ರಶ್ನಾರ್ಥಕ ಚಿಹ್ನೆ ಕಾಣಬಹುದು, ಇನ್ನು ಕೆಲವರಿಗೆ ವ್ಯಕ್ತಿಯ ಮುಖ ಕಾಣಬಹುದು. 

ಮೊದಲು ವ್ಯಕ್ತಿಯನ್ನು ನೋಡಿದರೆ
ಒಬ್ಬ ವ್ಯಕ್ತಿ ಪೋಟೋವನ್ನು ನೋಡಿದ ತಕ್ಷಣ ಮೊದಲು ಮನುಷ್ಯನ ಮುಖವನ್ನು ಗಮನಿಸಿದರೆ ಹೆಚ್ಚು ಸಹಾನುಭೂತಿ ಹೊಂದಿದ್ದಾನೆ ಎಂದರ್ಥ. ತಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ದಯೆ ಮತ್ತು ಸಹಾನುಭೂತಿ ಹೊಂದಿರುವವರು ಆಗಿರುತ್ತಾರೆ. ತಮ್ಮ ಸುತ್ತಮುತ್ತಲಿನ ವಾತಾವರಣ ಹೆಚ್ಚು ಪೀಸ್‌ಫುಲ್ ಆಗಿರಬೇಕೆಂದು ಬಯಸುತ್ತಾರೆ. ಆದರೆ ಇಂಥವರು ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸಬಹುದು, ಏಕೆಂದರೆ ಅವರು ಇತರರಿಂದ ನಿರಂತರ ಗಮನವನ್ನು ನಿರೀಕ್ಷಿಸುತ್ತಾರೆ. ಕೆಲವೊಮ್ಮೆ, ಅವರು ಅತಿಯಾದ ಆದರ್ಶವಾದಿಗಳಾಗಿರಬಹುದು. ಇದು ಅವರಿಗೆ ಸಂಬಂಧದಲ್ಲಿ (Relationship) ಅಡ್ಡಿಯನ್ನುಂಟು ಮಾಡಬಹುದು. 

ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

ಮೊದಲು ಪ್ರಶ್ನಾರ್ಥಕ ಚಿಹ್ನೆಯನ್ನು ನೋಡಿದರೆ
ಪೋಟೋವನ್ನು ನೋಡಿದ ತಕ್ಷಣ ಆರಂಭದಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ನೋಡಿದರೆ, ನೀವು ಇತರ ಅನ್ವೇಷಣೆಗಳಿಗೆ ಆದ್ಯತೆ ನೀಡುವ ಬದಲು ಜೀವನದ ವಿವಿಧ ಅಂಶಗಳಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಗಮನಹರಿಸುತ್ತೀರಿ ಎಂದರ್ಥ. ನಿಮ್ಮ ಹವ್ಯಾಸಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ನಿಮ್ಮ ಗುರಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅವುಗಳ ಕಡೆಗೆ ಶ್ರದ್ಧೆಯಿಂದ ಕೆಲಸ ಮಾಡಲು ಹೆಚ್ಚು ಪರಿಶ್ರಮ ಹಾಕುತ್ತೀರಿ.  

ಮಿಯಾ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಪ್ರಕಾರ ನೀವು, 'ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವಿರಿ. ನೀವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದ್ದೀರಿ ಮತ್ತು ಅವುಗಳನ್ನು ಸಾಧಿಸಲು ಹೆಚ್ಚುವರಿ ಕೆಲಸ ಮಾಡುತ್ತೀರಿ. ಅಂದರೆ ವರ್ಕೋಹಾಲಿಕ್ ಆಗಿರುತ್ತೀರಿ' ಎಂದು ತಿಳಿದುಬರುತ್ತದೆ. 

Follow Us:
Download App:
  • android
  • ios