ಕೆಲಸದ ನಡುವೆ ತಮ್ಮ ಮನೆಗೆ ತೆರಳಿ ಸಂಗಾತಿಯೊಂದಿಗೆ ಸೆಕ್ಸ್‌ ನಡೆಸಲು ಒಂದು ಗಂಟೆಯ ವಿರಾಮ ನೀಡುವಂತೆ ಓವರ್‌'ಟೊರ್ನಿಯದ ಕೌನ್ಸಿಲರ್‌ ಪೆರ್‌ ಎರಿಕ್‌ ಮುಸ್ಕೊಸ್‌ ಎಂಬವರು ಸಲಹೆ ನೀಡಿದ್ದಾರೆ.

ತಮಾಷೆಯಲ್ಲ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಚೇರಿಯಲ್ಲಿ ಕೆಲಸದ ಸಂದರ್ಭಗಳಲ್ಲೂ ಕೆಲವರಿಗೆ ತಮ್ಮ ಸಂಗಾತಿಯೊಂದಿಗೆ ಕಳೆದ ರೊಮ್ಯಾಂಟಿಕ್‌ ಕ್ಷಣಗಳು ಆಗಾಗ ಕಾಡಬಹುದು. ಅಂಥವರಿಗೆ ಅರೆ ಕ್ಷಣದ ಬಿಡುವು ಸಿಕ್ಕಿದರೂ, ಸಂಗಾತಿಯನ್ನು ನೋಡುವ ಅವಕಾಶ ಸಿಕ್ಕಿದರೆ ಹೇಗೆ ಎಂಬ ಯೋಚನೆ ಬರುತ್ತಿರುತ್ತದೆ. ಅಂಥವರ ಭಾವನೆಗಳಿಗೆ ಬೆಲೆಗೊಟ್ಟು ಸ್ವೀಡನ್‌ನ ಕೌನ್ಸಿಲರ್‌ ಒಬ್ಬರು ಮಂಡಿಸಿರುವ ಪ್ರಸ್ತಾಪ ಕೇಳಿದರೆ ನಿಮಗೆ ಅಚ್ಚರಿಯಾಗದಿರದು. ಕೆಲಸದ ನಡುವೆ ತಮ್ಮ ಮನೆಗೆ ತೆರಳಿ ಸಂಗಾತಿಯೊಂದಿಗೆ ಸೆಕ್ಸ್‌ ನಡೆಸಲು ಒಂದು ಗಂಟೆಯ ವಿರಾಮ ನೀಡುವಂತೆ ಓವರ್‌'ಟೊರ್ನಿಯದ ಕೌನ್ಸಿಲರ್‌ ಪೆರ್‌ ಎರಿಕ್‌ ಮುಸ್ಕೊಸ್‌ ಎಂಬವರು ಸಲಹೆ ನೀಡಿದ್ದಾರೆ. ಬಾಂಧವ್ಯ ಸುಧಾರಣೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಇದರಿಂದ ಅನುಕೂಲ ಎಂಬುದವರ ಅಭಿಪ್ರಾಯ.

(epaper.kannadaprabha.in)