ದಾಂಪತ್ಯದಲ್ಲಿ ರಸಿಕತೆ ಹುಟ್ಟಿಸೋ ಹಲವಾರು ವಿಷಯಗಳು ಇರುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಸಾಕು, ಜತೆಯಲ್ಲಿರೋ ಪ್ರತೀ ಕ್ಷಣವೂ ರೊಮ್ಯಾಂಟಿಕ್ ಆಗಿರುತ್ತೆ. ಸಂಬಂಧ ರೊಮ್ಯಾಂಟಿಕ್ ಆಗಿರಲು ಇಲ್ಲಿವೆ ಸುಂದರವಾದ ಟಿಪ್ಸ್
ದಾಂಪತ್ಯದಲ್ಲಿ ರಸಿಕತೆ ಹುಟ್ಟಿಸೋ ಹಲವಾರು ವಿಷಯಗಳು ಇರುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಸಾಕು, ಜತೆಯಲ್ಲಿರೋ ಪ್ರತೀ ಕ್ಷಣವೂ ರೊಮ್ಯಾಂಟಿಕ್ ಆಗಿರುತ್ತೆ.
ಪುರುಷರಿಗೆ ತುಸು ರಸಿಕತೆ ಹೆಚ್ಚೇ ಎನ್ನುತ್ತಾರೆ. ಹೆಣ್ಣು ರಸಿಕಳಾದರೂ, ಅವಳಿಗಿರೋ ಜವಾಬ್ದಾರಿಗಳು ಆ ರಸಿಕತೆಯನ್ನು ತುಸು ದೂರ ಮಾಡಿರುತ್ತೆ. ಕೇವಲ ಕಿಸ್, ಸೆಕ್ಸ್ ಮಾತ್ರವಲ್ಲ, ಇನ್ನೂ ಬೇರೆ ಬೇರೆ ಸಂಗತಿಗಳೂ ರೊಮ್ಯಾಂಟಿಕ್ ಎಂದೆನಿಸುತ್ತದೆ. ಏನವು?
ಕಡಲಿಂಗ್ : ಮುದ್ದು ಮಾಡುವುದು ಕೇವಲ ಮಹಿಳೆಯರಿಗೆ ಮಾತ್ರ ಅಲ್ಲ, ಬದಲಾಗಿ ಪುರುಷರಿಗೂ ಇಷ್ಟವಾಗುತ್ತದೆ. ಭಾವನೆಗಳನ್ನು ಹುದುಗಿಟ್ಟು ಕೊಳ್ಳುವ ಗಂಡಿಗೆ, ಪತ್ನಿಯ ಇಂಥ ವರ್ತನೆಗಳು ಖುಷಿ ಕೊಡುತ್ತದೆ.
ಹೋಮ್ ಫುಡ್: ದಿನಾ ಮಾಡಿ ಬಡಿಸೋ ಪತ್ನಿಯ ಅಡುಗೆ ಪತ್ನಿಗೆ ರುಚಿ ಎನಿಸೋದು ಕಡಿಮೆ. ಆದರೂ, ವಿಶೇಷ ಕಾಳಜಿ ವಹಿಸಿ, ಪತಿ ಇಷ್ಟ ಪಡೋ ಆಹಾರ ಮಾಡಿ ಬಡಿಸಿದಾಗ ಪತಿ ಖುಷಿಯಾಗುವುದು ಗ್ಯಾರಂಟಿ. ಆದರೆ, ಸದಾ ಪತಿ ಅದೇ ರೀತಿ ಖುಷಿ ಪಡುತ್ತಾನೆಂದು ನಿರೀಕ್ಷಿಸುವುದು ತಪ್ಪು.
ಮಡಿಲಲ್ಲಿ ಮಗುವಾಗೋದು: ಪತ್ನಿ ಮಡಿಲಲ್ಲಿ ಮಲಗುವುದು ಪತಿಗೆ ತುಂಬಾ ಇಷ್ಟ. ಆಕೆಯ ಮಡಿಲಲ್ಲಿ ಮಲಗಿ, ಆಕೆ ತನ್ನ ಕೈಯಿಂದ ಪತಿಯ ಕೂದಲನ್ನು ಸವರುತ್ತಿದ್ದರೆ ಅದರಿಂದ ಪತಿಗೆ ಇನ್ನಿಲ್ಲದ ಆನಂದ ಸಿಗುತ್ತದೆ.
ರಾತ್ರಿ ರೈಡ್: ಪತ್ನಿ ಜೊತೆ ತಂಪಾದ ರಾತ್ರಿಯಲ್ಲಿ ರೈಡ್ ಮಾಡುತ್ತಾ, ಆಕೆಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾ, ರೊಮ್ಯಾಂಟಿಕ್ ಮಾತುಗಳನ್ನು ಆಡುತ್ತಿದ್ದರೆ... ವಾವ್ ಅದಕ್ಕಿಂತ ಸುಂದರ ರಾತ್ರಿ ಇರಲಾರದು.
ಸರ್‌ಪ್ರೈಸ್: ಕೇವಲ ಹುಡುಗಿಯರಿಗೆ ಮಾತ್ರ ಸರ್‌ಪ್ರೈಸ್ ಗಿಫ್ಟ್ ಅಥವಾ ಈವೆಂಟ್ ಇಷ್ಟವಾಗೋದಿಲ್ಲ. ಬದಲಾಗಿ ಪುರುಷರಿಗೂ ಇದು ಇಷ್ಟ. ಇದರಿಂದ ಅವರ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.
ಸ್ನಾನ: ಪ್ರತಿದಿನ ಇಬ್ಬರೂ ಬ್ಯುಸಿಯಾಗಿರುತ್ತಾರೆ. ಅಪರೂಪಕ್ಕೊಮೆಯಾದರೂ ಜೊತೆಯಾಗಿ ಸ್ನಾನ ಮಾಡಿದರೆ ಮನಸ್ತಾಪ ಕಳೆದು ಹೋಗಿ, ಮನಸ್ಸು ಹಗುರವಾಗುತ್ತದೆ.
ಡ್ಯಾನ್ಸ್ : ಸಂದರ್ಭ ಸಿಕ್ಕಿದಾಗಲೆಲ್ಲ ಜೊತೆಯಾಗಿ ರೊಮ್ಯಾಂಟಿಕ್ ಹಾಡಿಗೆ ಅಥವಾ ಟಪ್ಪಂಗುಚ್ಚಿ ಹಾಡಿಗೆ ಹೆಜ್ಜೆ ಹಾಕಿದರೆ, ಜೀವನ ರಸಮಯವಾಗಿರುತ್ತದೆ.
ಕೈ ಹಿಡಿಯುವುದು: ಸಾವಿರಾರು ಜನರ ಮಧ್ಯೆ ಪತ್ನಿ ಪತಿಯ ಕೈ ಹಿಡಿದು ನಡೆಯುವಾಗ ಪತಿಗೆ ಖುಷಿ ಎನಿಸುತ್ತದೆ. ಎಷ್ಟೇ ಜಗಳವಾಗಲಿ, ವೈಮನಸ್ಸು ಇರಲಿ, ರಾತ್ರಿಯೂ ಸುಮ್ಮನೆ ಕೈ ಕೈ ಹಿಡಿದು ಮಲಗಿದರೆ, ಎಲ್ಲ ನೋವು, ದುಃಖಗಳು ದೂರವಾಗುತ್ತದೆ.
ಕೆಲಸ ಮಾಡುವಾಗ ಮಸಾಜ್: ಪತಿ ಕೆಲಸದಲ್ಲಿ ಮಗ್ನನಾಗಿದ್ದರೆ, ಹಿಂದಿನಿಂದ ಹೋಗಿ ಅವರ ತಲೆ ಮತ್ತು ಬೆನ್ನಿಗೆ ಮಸಾಜ್ ಮಾಡಿದರೆ ಅವರ ಮನಸ್ಸು ಶಾಂತವಾಗುತ್ತದೆ. ಜೊತೆಗೆ ಇದು ಅವರಿಗೆ ರೋಮ್ಯಾಂಟಿಕ್ ಫೀಲ್ ನೀಡುತ್ತದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 7, 2018, 1:46 PM IST