ಉಗುರಿನ ಕಲೆಗುಂಟು ಆರೋಗ್ಯದೊಂದಿಗೆ ನಂಟು

ನಮ್ಮ ಉಗುರು ಮೇಲೆ ಮೂಡುವ ಮಚ್ಚೆ ಅರೋಗ್ಯದ ಸ್ಥತಿ ಹೇಳುತ್ತದೆ. ಕೆಲವು ತಿಂಗಳಿಗೊಮ್ಮೆ ಕರೆಯದೇ ಬರುವ ಅತಿಥಿ ಹಾಗೆ ಬರುವ ಈ ಮಚ್ಚೆ ಆರೋಗ್ಯದ ಗುಟ್ಟು ಹಿಡಿದೇ ಬರುತ್ತದೆ. ಮೆನಿಕ್ಯೂರ್ ಮತ್ತು ಪೆಡಿಕ್ಯೂರ್ ಎಂದು ವ್ಯಯಿಸಿ, ಉಗುರಿನ ಆರೈಕೆ ಮಾಡಿಕೊಳ್ಳುತ್ತೇವೆ. ಆದರೆ, ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ, ಉಗುರಿನ ಸೌಂದರ್ಯಕ್ಕೂ ಒಳ್ಳೆಯದು, ಆರೋಗ್ಯಕ್ಕೂ ಒಳಿತು.

Nails depict human health

ಉಗುರಿನ ಮೇಲೆ ಬಿಳಿ ಗೆರೆಗಳು, ಮಚ್ಚೆ ಮತ್ತು ಚುಕ್ಕಿಗಳು ಕಾಣಿಸಿಕೊಳ್ಳುವುದನ್ನು ಲ್ಯುಕೋನಿಚಿಯಾ ಎನ್ನುತ್ತಾರೆ. ಸಾಮಾನ್ಯವಾಗಿ ಉಗುರು ಮೇಲಿನ ಪದರದಲ್ಲಿ ಗಾಯವಾದರೆ ಅಥವಾ ಮುರಿದು ಹೋದರೆ, ಅಲರ್ಜಿಯಾದರೆ ಮೂಡುವ ಗುರುತಿಗೆ ಲ್ಯುಕೋನಿಚಿಯಾ ಎನ್ನುತ್ತಾರೆ. ಇದು ಶಿಲೀಂಧ್ರಗಳಿಂದ ಸೋಂಕು ತಗುಲಿ ಅಥವಾ ದೇಹದಲ್ಲಿ ಸತುವಿನ ಅಂಶ ಕಡಿಮೆಯಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

ಈ ಮಚ್ಚೆ ಏನನ್ನು ಸೂಚಿಸುತ್ತದೆ?

  • ದೊಡ್ಡದಾಗಿ ಚಂದ್ರಾಕಾರದ ಮಚ್ಚೆ ಇದ್ದರೆ, ಆರೋಗ್ಯ ತುಂಬಾ ಚೆನ್ನಾಗಿದೆ ಎಂದರ್ಥ. ಚಂದ್ರ ಚಿಕ್ಕದಾಗಿದ್ದರೆ ರೋಗ ನಿರೋಧಕ ಶಕ್ತಿ ಕಡಿಮೆ ಎಂದರ್ಥ. ಇವರಿಗೆ ಪಚನ ಕ್ರಿಯೆ ನಿಧಾನವಾಗಿರುತ್ತದೆ.
  • ಚಂದ್ರಾಕಾರದ ಮಚ್ಚೆ ಇಲ್ಲದಿದ್ದರೆ, ಥೈರಾಯಿಡ್ ಗ್ರಂಥಿಗಳು ದುರ್ಬಲವಾಗಿದ್ದು, ದಪ್ಪ ಆಗುವುದು ಮತ್ತು ಕೂದಲು ಉದುರೋದು ಹೆಚ್ಚುತ್ತದೆ. 
  • ಇರುವ 10 ಬೆರಳುಗಳಲ್ಲಿ ಕನಿಷ್ಠ 8 ಉಗುರಿಗೆ ಚಂದ್ರದ ಗುರುತಿರಬೇಕು ಇಲ್ಲವಾದರೆ ವಿಟಮಿನ್ ಎ ಮತ್ತು ಅಗತ್ಯ ಪೌಷ್ಟಿಕಾಂಶಗಳ ಕೊರತೆ ಇದೆ ಎಂದರ್ಥ. 
  • ಬಿಳಿ ಮಚ್ಚೆ ಒಂದು ಬಾರಿ ಕಾಣಿಸಿದರೆ ಮತ್ತೊಂದು ಬಾರಿ ಮಾಯವಾಗುತ್ತದೆ. ಇಂಥ ಸಮಸ್ಯೆ ಹೊಂದಿರುವವರು ದೇಹ ಕೇಳುವಷ್ಟು ಆಹಾರ ಸೇವಿಸುತ್ತಿಲ್ಲವೆಂದು ಪರಿಗಣಿಸಬೇಕು. 
  • ಉಗುರು ಅರಿಷಿಣ ಬಣ್ಣಕ್ಕೆ ತಿರುಗಿದರೆ, ಲಿವರ್ ಸಮಸ್ಯೆ ಇದೆ ಎನ್ನಬಹುದು. ಇದು ಕಾಮಾಲೆ ರೋಗದ ಲಕ್ಷಣವೂ ಆಗಿರಬಹುದು. 
  • ಉಗುರು ಬಿಳುಚಿಕೊಂಡಿದ್ದರೆ, ರಕ್ತ ಕಡಿಮೆ ಇದೆ ಎಂದರ್ಥ. ಇವರು ಹೃದಯ ಬಡಿತವೂ ಕಡಿಮೆ ಇರುತ್ತದೆ. ಹಿಮೊಗ್ಲೋಬಿನ್ ಸಹ ಹೆಚ್ಚಾಗುವಂತೆ ನೋಡಿಕೊಳ್ಳುವುದು ಒಳ್ಳೆಯದು.
  • ಕಪ್ಪು ಕಲೆ ಇದ್ದರೆ ಅವರಿಗೆ ಚರ್ಮ ಕ್ಯಾನ್ಸರ್ ಇರುವ ಸಾಧ್ಯತೆ ಇರುತ್ತದೆ. 
Latest Videos
Follow Us:
Download App:
  • android
  • ios