ಸೋಲೂರು ಗ್ರಾಮದಲ್ಲಿ ಸುಸಜ್ಜಿತವಾದ 200 ಹಾಸಿಗೆಗಳ ಎಂ.ಆರ್.ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಇದೆ. ಈ ಚಿಕಿತ್ಸಾಲಯದಲ್ಲಿ ಮಧುಮೇಹ, ರಕ್ತದೊತ್ತಡ, ಪಾರ್ಶ್ವ ವಾಯು, ಬೊಜ್ಜು, ತಲೆನೋವು, ಅಜೀರ್ಣ ಸಂಬಂಧಿ ಸಮಸ್ಯೆಗಳು, ಗಂಟು ನೋವು ಹಾಗೂ ಇನ್ನಿತರ ಕಾಯಿಲೆಗಳಿಗೆ ಔಷಧರಹಿತ ಚಿಕಿತ್ಸೆಯನ್ನು ನೀಡುತ್ತಿದೆ. ನೀರಿನ ಚಿಕಿತ್ಸೆ, ಮಣ್ಣಿನ ಸ್ನಾನ, ಮಸಾಜ್, ಪಿಸಿಯೋಥೆರಪಿ, ಅಕ್ಯುಪಂಕ್ಚರ್, ಕೊಲಾನ್ ಹೈಡ್ರೋಥೆರಪಿ, ಸ್ಟೀಂ ಬಾತ್, ಸೊನಾಬಾತ್, ಪಥ್ಯ ಚಿಕಿತ್ಸೆ, ಉಪವಾಸ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸೆಗಳನ್ನು ನೀಡುವ ಹಾಗೂ ಆರೋಗ್ಯಕರ ಜೀವನ ಪದ್ಧತಿ ಕಲಿಸಿಕೊಡುವ ಆರೋಗ್ಯಶಿಕ್ಷಣ ಕೇಂದ್ರ ಇದಾಗಿದೆ. ಈ ಆಸ್ಪತ್ರೆಯನ್ನು 20 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದು, ಜನರಲ್ ವಾರ್ಡ್, ಸ್ಪೆಷಲ್ ವಾರ್ಡ್ ಹಾಗೂ ಕಾಟೇಜ್‌ಗಳ ಸೌಲಭ್ಯವಿದೆ. ಸಂಪರ್ಕ ವಿಳಾಸ: ಎಂ.ಆರ್.ಆರ್. ಪ್ರಕೃತಿ ಚಿಕಿತ್ಸಾ ಆಸ್ಪತ್ರೆ. ಸೋಲೂರು ಗ್ರಾಮ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ- 562127
ದೂರವಾಣಿ ಸಂಖ್ಯೆ: 080 22682900, ಮೊಬೈಲ್ ನಂ:- 9972639888
ಇಮೇಲ್ ವಿಳಾಸ: info@mrrnature.com , www.mrrnaturecure.com