Viral News: ರಾತ್ರಿ ಭೂತ ಕಂಡು ಹನುಮಾನ್ ಚಾಲೀಸಾ ಕೇಳಿದ ಮಹಿಳೆಗೆ ಬೆಳಿಗ್ಗೆ ಸತ್ಯ ಗೊತ್ತಾಯ್ತು!
ಭೂತ – ದೆವ್ವಗಳನ್ನು ನಂಬುವ ಜನರು ಸಣ್ಣ ಸಪ್ಪಳವಾದ್ರೂ ಭಯಗೊಳ್ತಾರೆ. ಕಲ್ಪನೆ ಇಲ್ಲದ ಸಂದರ್ಭದಲ್ಲಿ ಭೂತದ ಆಕಾರ ಕಾಣಿಸಿಕೊಂಡ್ರೆ ಧೈರ್ಯವಂತರೂ ಹೆದರುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತಾ ಕಂಡ ಭೂತದ ಕಥೆ ಹೇಳಿದ್ದಾಳೆ.

ಭೂತ- ದೆವ್ವದ ಸಿನಿಮಾಗಳನ್ನು ನೋಡಿದ ಜನರು ರಾತ್ರಿ ಪೂರ್ತಿ ನಿದ್ರೆ ಮಾಡಲ್ಲ. ರಾತ್ರಿ ಇರಲಿ ಹಗಲಿನಲ್ಲಿ ಕನ್ನಡಿ ನೋಡೋಕೂ ಭಯಪಡುವವರಿದ್ದಾರೆ. ಹಾಗಿರುವಾಗ ರೀಲ್ ಅಲ್ಲದೆ ರಿಯಲ್ ನಲ್ಲಿ ಭೂತ ಕಾಣಿಸಿಕೊಂಡ್ರೆ ಏನಾಗ್ಬೇಡ. ಅದು ರಾತ್ರಿ, ಮನೆಯ ಬಾಲ್ಕನಿ ಬಳಿ ಭೂತ ಕಣ್ಣಿಗೆ ಬಿದ್ರೆ ಮಕ್ಕಳ ಚಡ್ಡಿ ಒದ್ದೆ ಆಗಿರುತ್ತೆ. ದೊಡ್ಡವರು ಮನೆಯೊಳಗೆ ಬಂದು ಬೆವರುತ್ತಾರೆ. ಕೆಲವರು ದೇವರ ಮನೆಗೆ ಓಡಿದ್ರೆ ಮತ್ತೆ ಕೆಲವರು ನಿದ್ರೆ ಬಿಟ್ಟು, ಭೂತ ಮನೆಯೊಳಗೆ ಬಂದ್ರೆ ಅಂತ ಕಾಯ್ತಾರೆ. ಇನ್ನು ಕೆಲವರು ಹೊದ್ದು ಮಲಗಿದೋರು ಹೊದಿಕೆ ತೆಗೆಯುವ ಸಾಹಸ ಮಾಡೋದಿಲ್ಲ. ಗಾಯತ್ರಿ ಮಂತ್ರ, ಹನುಮಾನ್ ಚಾಲಿಸಾ ಹೀಗೆ ನಾನಾ ಮಂತ್ರಗಳು ಜನರ ಬಾಯಿಂದ ಬರ್ತಿರುತ್ತವೆ. ಭೂತ ನೋಡಿ, ನಾಲ್ಕೈದು ದಿನ ಜ್ವರ ಬಂದು ಮಲಗಿದವರಿದ್ದಾರೆ. ಭೂತದ ಬಗ್ಗೆ ಬರೆಯೋದು ಸುಲಭ, ನೋಡಿದ್ರೆ ಆಗುವ ಭಯ ಅನುಭವಿಸಿದೋನಿಗೆ ಗೊತ್ತು. ಈಗ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾಳೆ. ಆಕೆ ಹೇಳೋದನ್ನು ಕೇಳಿದ್ರೆ ಒಂದ್ಕಡೆ ನಗು ಬರುತ್ತೆ. ಇನ್ನೊಂದು ಕಡೆ ರಾತ್ರಿ ನಮ್ಮ ಕಣ್ಣಿಗೂ ಭೂತ ಕಾಣಿಸಿದ್ರೆ ಎಂಬ ಭಯ ಶುರುವಾಗುತ್ತೆ.
ವೈರಲ್ (Viral) ಆಗಿದೆ ಈ ವಿಡಿಯೋ ; ಅನಿರುದ್ಧ ಜೋಶಿ ಹೆಸರಿನ ಟ್ವಿಟರ್ (Twitter ) ಖಾತೆಯಲ್ಲಿ ಮಹಿಳೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಮಹಿಳೆಗೆ ರಾತ್ರಿ ನಿದ್ರೆ ಬರಲಿಲ್ಲವಂತೆ. ಸ್ವಲ್ಪ ಹೊತ್ತು ಬಾಲ್ಕನಿ (Balcony) ಯಲ್ಲಿ ಸುತ್ತಿ ಬರುವ ನಿರ್ಧಾರ ಮಾಡಿದ್ದಾಳೆ. ಅದರಂತೆ ಬಾಲ್ಕನಿಗೆ ಹೋಗಿದ್ದಾಳೆ. ಆದ್ರೆ ಅಲ್ಲಿ ಕಂಡ ದೃಶ್ಯ ನೋಡಿ ಕಂಗಾಲಾಗಿದ್ದಾಳೆ. ಭಯದಿಂದ ಮನೆಯೊಳಗೆ ಬಂದ ಮಹಿಳೆ, 10 – 15 ಬಾರಿ ಹನುಮಾನ್ ಚಾಲೀಸಾವನ್ನು ಕೇಳಿದ್ದಾಳಂತೆ. ಮಹಿಳೆಗೆ ಬಾಲ್ಕನಿ ಮುಂದಿದ್ದ ಮರವೊಂದರಲ್ಲಿ ಭೂತ (Ghost) ಕಾಣಿಸಿಕೊಂಡಿದೆ. ಬಟ್ಟೆ ಧರಿಸಿದ್ದ, ಮಹಿಳೆ ಆಕಾರವೊಂದು ಆಕೆ ಕಣ್ಣಿಗೆ ಬಿದ್ದಿದೆ. ನಮ್ಮಲ್ಲಿ ಭೂತ ಹಾಗೂ ಮರಕ್ಕೆ ಅವಿನಾಭಾವ ಸಂಬಂಧವಿದೆ. ನಾವು ಸಾಮಾನ್ಯವಾಗಿ ಹುಣಸೆ ಮರ ಸೇರಿದಂತೆ ದೊಡ್ಡ ಮರಗಳಲ್ಲಿ ಭೂತ, ದೆವ್ವಗಳು ನೇತಾಡುತ್ತಿರುತ್ತವೆ ಎಂಬ ಕಥೆಯನ್ನು ಕೇಳಿದ್ದೇವೆ. ಮಹಿಳೆ ಕೂಡ ಇದು ಭೂತವೆಂದುಕೊಂಡು ರಾತ್ರಿಯಿಡಿ ನಿದ್ರೆ ಮಾಡಿಲ್ಲ. ಹನುಮಾನ್ ಚಾಲೀಸಾ ಕೇಳ್ತಾ, ಭಯ ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾಳೆ.
ಬಾಡಿ ಬಿಲ್ಡ್ ಮಾಡ್ಕೊಳ್ಳೋಕೆ ನೆರವಾಗೋ ವೆಜ್ ಆಹಾರಗಳಿವು
ಬೆಳಿಗ್ಗೆ ಆಗಿದ್ದೇನು? : ಭೂತದ ಭಯದಲ್ಲೇ ರಾತ್ರಿ ಕಳೆದ ಮಹಿಳೆ ಬೆಳಿಗ್ಗೆ ಅಲ್ಲೇ ಭೂತವಿದ್ಯಾ ಎಂಬುದನ್ನು ಚೆಕ್ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ಧೈರ್ಯ ಮಾಡಿ ಬಾಲ್ಕನಿಗೆ ಹೋಗಿದ್ದಾಳೆ. ಆದ್ರೆ ಅಲ್ಲಿ ಆಗ ಕಂಡ ದೃಶ್ಯ ಆಕೆಗೂ ನಗು ತರಿಸಿದ್ದಲ್ಲದೆ, ಹಿಂದಿನ ರಾತ್ರಿ ನಡೆದ ಘಟನೆಯಿಂದ ಕೋಪವೂ ಬಂದಿದೆ. ಮಹಿಳೆಯೊಬ್ಬರು ತಮ್ಮ ನೈಟಿಯನ್ನು ವಿಚಿತ್ರವಾಗಿ ಒಣ ಹಾಕಿದ್ದಾರೆ. ನೈಟಿಗೆ ಹ್ಯಾಂಗರ್ ಹಾಕಿ ಅದನ್ನು ಮರಕ್ಕೆ ನೇತು ಹಾಕಿದ್ದಾರೆ. ರಾತ್ರಿ ಮಹಿಳೆಗೆ ನೈಟಿ ಮಾತ್ರ ಕಾಣಿಸಿದೆಯೇ ವಿನಃ ಹ್ಯಾಂಗರ್ ಕಾಣಿಸಿಲ್ಲ. ಹಾಗಾಗಿ ಮಹಿಳೆ ಅದನ್ನು ಭೂತ ಎಂದುಕೊಂಡಿದ್ದಾಳೆ. ಯಾರಾದ್ರೂ ನೈಟಿಯನ್ನು ಹೀಗೆ ಒಣ ಹಾಕ್ತಾರಾ ಎಂದು ಮಹಿಳೆ ವಿಡಿಯೋದಲ್ಲಿ ಪ್ರಶ್ನೆ ಮಾಡಿದ್ದಾಳೆ
ಅಬ್ಬಾ.. ಏನ್ ಡ್ರೆಸ್ ಸೆನ್ಸ್: ಕಿಯಾರಾ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ..!
ವೈರಲ್ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ : ಟ್ವಿಟರ್ ನಲ್ಲಿ ಪೋಸ್ಟ್ ಆದ ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ. 77 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಕ್ಯಾಮರಾ ಇಲ್ಲದೆ ಫ್ರ್ಯಾಂಕ್ ಮಾಡೋದು ಅಂದ್ರೆ ಇದೇ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಕಥೆಯನ್ನು ಚೆನ್ನಾಗಿ ಹೆಣೆದಿದ್ದೀರಿ, ಇದು ಸತ್ಯವಲ್ಲ, ವಿಡಿಯೋಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.