ಹೆಂಡ್ತಿ ಹಾಗೂ ಮರಿಯನ್ನು ಬೆನ್ನಲ್ಲೇ ಹೊತ್ತು ಸಾಗುವ ಜಗತ್ತಿನ ಏಕೈಕ ಪ್ರಾಣಿ ಇದು
ಅನಟಿಯೇಟರ್ಸ್ ಎಂಬ ಪ್ರಾಣಿಗಳು ತಮ್ಮ ಮರಿಗಳನ್ನು ಬೆನ್ನ ಮೇಲೆ ಹೊತ್ತು ಸಾಗುತ್ತವೆ. ದಕ್ಷಿಣ ಅಮೆರಿಕಾದಲ್ಲಿ ಕಂಡುಬರುವ ಈ ಪ್ರಾಣಿಗಳು ಇರುವೆಗಳು ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ ಮತ್ತು ಒಂದು ಸಮಯದಲ್ಲಿ ಒಂದು ಮರಿಯನ್ನು ಮಾತ್ರ ಹೊಂದಿರುತ್ತವೆ.
ಪ್ರಾಣಿ ಲೋಕವೇ ಒಂದು ಅದ್ಭುತ ಪ್ರಪಂಚ. ಮನುಷ್ಯರಂತೆ ಮಾತನಾಡದಿದ್ದರೂ ಪ್ರಾಣಿಗಳು ತಮ್ಮ ಭಾವನೆಯನ್ನು ತಮ್ಮ ಕೃತಿಯಲ್ಲಿ ತೋರಿಸುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಈ ಪ್ರಾಣಿಯೊಂದು ಸದಾಕಾಲ ತನ್ನ ಹೆಂಡತಿ ಹಾಗೂ ಮಗುವನ್ನು ತನ್ನ ಬೆನ್ನ ಮೇಲೆ ಹೊತ್ತು ಸಾಗುತ್ತದೆ. ಅನಟಿಯೇಟರ್ಸ್ ಎಂದು ಕರೆಯಲ್ಪಡುವ ಈ ಪ್ರಾಣಿಗಳು ತಮ್ಮ ಸಂಗಾತಿ ಹಾಗೂ ಮಗುವನ್ನು ಬೆನ್ನಮೇಲೆ ಹೊತ್ತು ಸಾಗುತ್ತದೆ ಎಂದು ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತಾಯಿ ಅನಟಿಯೇಟರ್ಸ್ ತನ್ನ ಮರಿಯನ್ನು ಬೆನ್ನ ಮೇಲೆ ಹೊತ್ತು ಸಾಗುವುದು ಹೌದು ಆದರೆ ಗಂಡು ಅನಟಿಯೇಟರ್ಸ್ ತನ್ನ ಸಂಗಾತಿ ಹಾಗೂ ಮರಿಯನ್ನು ಹೊತ್ತು ಸಾಗುವುದಿಲ್ಲ ಎಂಬ ಅಭಿಪ್ರಾಯ ಹಲವರದ್ದು. ಆದರೂ ಇದೊಂದು ಅನಟಿಯೇಟರ್ಸ್ ತನ್ನ ಬೆನ್ನ ಮೇಲೆ ದೊಡ್ಡದಾದ ಮತ್ತೊಂದು ಪ್ರಾಣಿಯನ್ನು ಅದರ ಬೆನ್ನಮೇಲೆ ಪುಟ್ಟ ಮರಿಯನ್ನು ಹೊತ್ತು ಸಾಗುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಟಮಂಡುವಾ ಅಥವಾ ಅನಟಿಯೇಟರ್ಸ್ ಎಂದು ಕರೆಯುವ ಈ ಪ್ರಾಣಿಗಳು ಭಾರತ ಮೂಲದಲ್ಲ, ಹೀಗಾಗಿ ಇದಕ್ಕೆ ಭಾರತೀಯ ಭಾಷೆಗಳಲ್ಲಿ ಏನೆಂದು ಕರೆಯುವರು ಎಂದು ತಿಳಿಯದು. ಈ ಪ್ರಾಣಿಯ ವೈಜ್ಞಾನಿಕ ಹೆಸರೇ ಟಮಂಡುವಾ ಅಥವಾ ವರ್ಮಿಲಿಂಗ್ವಾ, ಅನಟಿಯೇಟರ್ಸ್, ಸಸ್ತನಿ ವರ್ಗಕ್ಕೆ ಸೇರಿದ ಈ ಪ್ರಾಣಿ ಮೈರ್ಮೆಕೋಫಾಗಿಡೆ ಎಂಬ ಕುಟುಂಬಕ್ಕೆ ಸೇರುತ್ತದೆ. ಅನಟಿಯೇಟರ್ಸ್‌ಗಳು ಸಾಮಾನ್ಯವಾಗಿ ದಕ್ಷಿಣ ಅಮೆರಿಕಾದಾದ್ಯಂತ ಕಂಡುಬರುತ್ತವೆ, ಗಯಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಸುರಿನಾಮ್, ಫ್ರೆಂಚ್ ಗಯಾನಾ, ಬ್ರೆಜಿಲ್ ಮತ್ತು ಪರಾಗ್ವೆ ದೇಶದಾದ್ಯಂತ ಈ ಜೀವಿಗಳು ಕಂಡು ಬರುತ್ತವೆ. ಇದರ ಜೊತೆಗೆ ಉರುಗ್ವೆ, ಅರ್ಜೆಂಟೀನಾ, ಬೊಲಿವಿಯಾ, ಪೆರು, ಈಕ್ವೆಡಾರ್, ಕೊಲಂಬಿಯಾ ಮತ್ತು ವೆನೆಜುವೆಲಾದ ಭಾಗಗಳಲ್ಲಿ ವಾಸ ಮಾಡುತ್ತವೆ. ಇವುಗಳ ಜೀವಿತಾವಧಿ ಕನಿಷ್ಠ 10ರಿಂದ 14 ವರ್ಷಗಳು. ಇರುವೆಗಳು, ಗೆದ್ದಲು ಹುಳುಗಳು, ಗೊಬ್ಬರದ ಹುಳುಗಳನ್ನು ತಿಂದು ಬದುಕುತ್ತವೆ.
ನಾಯಿ ಹೇರ್ ಟ್ರಿಮ್ ಮಾಡ್ತೀನಿ ಅಂತ್ಹೇಳಿ, ನಾಲಿಗೆಯನ್ನೇ ಕಟ್ ಮಾಡೋದ ಸಲೂನ್ ಓನರ್?
ಆಂಟಿಯೇಟರ್‌ಗಳು ತಮ್ಮ ಉದ್ದನೆಯ ಮೂತಿಗೆ ಹೆಸರುವಾಸಿಯಾದ ಆಕರ್ಷಕ ಜೀವಿಗಳಾಗಿದ್ದು, ಒಂದೇ ದಿನದಲ್ಲಿ ಸಾವಿರಾರು ಇರುವೆಗಳು ಮತ್ತು ಗೆದ್ದಲುಗಳನ್ನು ಸೇವಿಸುವ ಪ್ರಭಾವಶಾಲಿ ಸಾಮರ್ಥ್ಯ ಇವರಿಗಿದೆ. ಇವುಗಳು ತಮ್ಮ ಮರಿಗಳು ಹುಟ್ಟಿದ ನಂತರ ಅವುಗಳನ್ನು ಹಲವಾರು ತಿಂಗಳುಗಳ ಕಾಲ ಬೆನ್ನಿನ ಮೇಲೆಯೇ ಹೊತ್ತು ಸಾಗುತ್ತವೆ. ಜನಿಸಿದ 3ರಿಂದ 4 ವರ್ಷಗಳಿಗೆಲ್ಲಾ ಲೈಂಗಿಕತೆಯ ಪ್ರಾಪ್ತ ವಯಸ್ಸಿಗೆ ಬರುವ ಈ ಪ್ರಾಣಿ ಒಂದು ಸಲಕ್ಕೆ ಒಂದು ಮರಿಯನ್ನು ಮಾತ್ರ ಇಡುತ್ತದೆ. ಸಾಧು ಜೀವಿಗಳಾಗಿದ್ದು, ತಮ್ಮ ಆವಾಸ ಸ್ಥಾನವಾದ ಮಧ್ಯ ಅಮೆರಿಕಾದಿಂದ ಇತ್ತಿಚೆಗೆ ಕಣ್ಮರೆಯಾಗುತ್ತಿವೆ. ಆದರೆ ಕೀಟಗಳ ಜನಸಂಖ್ಯೆಯನ್ನು ನಿಯಂತ್ರಿಸಲು ಅವುಗಳು ತುಂಬಾ ಅಗತ್ಯವಾಗಿವೆ.
88 ಕೋಟಿ ರೂಗೆ ಪಾಂಡ ತಂದ ಮೃಗಲಾಯಕ್ಕೆ ಆರ್ಥಿಕ ಸಂಕಷ್ಟ, ಹಿಂದಿರುಗಿಸಲು ನಿರ್ಧಾರ!