ಈ ಗಂಡನಿಗೆ ಪತ್ನಿಯ 8 ಅಡಿ ಹೊಟ್ಟೆ ಎಂದರೆ ಅಚ್ಚು ಮೆಚ್ಚಂತೆ!

First Published 28, Jun 2018, 5:25 PM IST
Love is Blind, Hubby Loves Wifes Eight Foot Belly, Funny Story
Highlights

ಪ್ರೀತಿ ಕುರುಡು ಎಂಬುದು ಹಳೆಯ ಗಾದೆ. ಈ ಸ್ಟೋರಿ ಸಹ ಅದೇ ರೀತಿಯದ್ದೆ. ಒಂದು ಕಾಲದಲ್ಲಿ ಮಾಡೆಲ್ ಆಗಿದ್ದ ಹೆಂಡತಿ ಇಂದು ದಢೂತಿಯಾಗಿದ್ದರೂ ಆಕೆಯನ್ನು ಮಾಡಲ್ ಎಂದೇ ಆರಾಧಿಸುತ್ತಿರುವ ಕತೆ ...

ಹೆಂಡತಿ ಎಂದರೆ ಹೇಗಿರಬೇಕು? ತಕ್ಷಣಕ್ಕೆ ಈ ಪ್ರಶ್ನೆ ಕೇಳಿದರೆ ಮದುವೆಯಾಗದವರು ನೂರಾರು ಉತ್ತರ ಕೊಟ್ಟಾರು. ಬಳುಕುವ ಲತೆಯಂತೆ ಇರಬೇಕು. ಆ ನಟಿಯ ಹಾಗೆ ಇರಬೇಕು..ಬಾಲಿವುಡ್ ಹಿರೋಯಿನ್ ಅಂತೆ ಇರಲೇಬೇಕು... ಎಂಬ ಬಗೆ ಬಗೆಯ ಉತ್ತರ ಬರಬಹುದು. ಮದುವೆಯಾದವರ ಕೇಳಿದರೆ... ಉಸ್ಸಪ್ಪಾ ಎಂದು ಏದುಸಿರು ತೆಗೆದು ಒಂದೆಲ್ಲಾ ಒಂದು ಕೊಂಕು ಹೇಳಿಯೆ ಇರ್ತಾರೆ.

ತಳಕು, ಬಳ್ಳಿಯಂತೆ ತಮ್ಮ ಸಂಗಾತಿ ಇರಬೇಕೆಂದು ಬಯಸುವುದು ಎಲ್ಲ ಪುರುಷರ ಮಹಾನ್ ಕನಸು. ತುಸು ದಪ್ಪದವಳು ಸಿಕ್ಕಿದರೂ, ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಇಲ್ಲೊಬ್ಬ ತನ್ನ ಹೆಂಡತಿಗೆ 8 ಅಡಿ ದಪ್ಪದ ಹೊಟ್ಟೆ ಇದ್ದರೂ ಆಕೆಯನ್ನೇ ಮನಸಾರೇ ಪ್ರೀತಿಸುತ್ತಾನಂತೆ! ಆಕೆ ಹೊಟ್ಟೆ ತುಂಬಿಸುವಷ್ಟು ಅಡುಗೆಯನ್ನೂ ಮಾಡಿ ಕೊಡುತ್ತಾನಂತೆ!..

ಇದೆಂಥಾ ಪ್ರೀತಿ, ಪ್ರಿಯಕರನಿಗೆ ರಕ್ತ ಹೀರಲು ಬಿಡ್ತಾಳಂತೆ ಇವಳು!?

ಏನಪ್ಪಾ ಈ ಕತೆ ಅಂತೀರಾ.. ಈ ವಿಡಿಯೋ ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ. ದಢೂತಿ ದೇಹದ ಗಾಯ್ಲಾ ನೆಯುಫೆಲ್ಡ್ ಚಟುವಟಿಕೆಯಿಂದಲೇ ಇದ್ದಾರೆ. ಒಂದು ಕಾಲದಲ್ಲಿ ಎರಡು ವರ್ಷ ಕಾಲ ಈಕೆ ಮಾಡೆಲಿಂಗ್ ಸಹ ಮಾಡಿದ್ದಳಂತೆ. ಪ್ರೀತಿ ಕುರುಡು ಎನ್ನುವುದಕ್ಕಿ ನಿದರ್ಶನ ಬರೆದಂತೆ ಈ ಸ್ಟೋರಿಯಿದೆ. ನೀವು ಈ ಗಂಡ -ಹೆಂಡತಿಯ ಮಧುರ ಪ್ರೇಮದ ಪರಿ ನೋಡಿಕೊಂಡು ಬನ್ನಿ..

loader