Asianet Suvarna News Asianet Suvarna News

ಇದೆಂಥಾ ಪ್ರೀತಿ, ಪ್ರಿಯಕರನಿಗೆ ರಕ್ತ ಹೀರಲು ಬಿಡ್ತಾಳಂತೆ ಇವಳು!?

ಪ್ರಪಂಚದಲ್ಲಿ ಎಂತೆಂಥ ರೀತಿಯ ಪ್ರೇಮ ಪ್ರಕರಣಗಳು, ಪ್ರೀತಿ-ಪ್ರಣಯಗಳು ಇರುತ್ತವೆಯೋ ಗೊತ್ತಿಲ್ಲ. ಆದರೆ ಇದು ಮಾತ್ರ ಅತ್ಯಂತ ಕ್ರೂರ.

Vampire Man Regularly Drinks His Girlfriends Blood

ತರಕಾರಿ ಕತ್ತರಿಸುವಾಗ ಚಾಕುವಿನಲ್ಲಿ ಬೆರಳನ್ನು ಕುಯ್ದುಕೊಂಡರೆ ಬೆರಳನ್ನು ಬಾಯಿಗಿಟ್ಟು ರಕ್ತ ಹೀರಿಕೊಳ್ಳುತ್ತೇವೆ. ಇನ್ನು ಹಾಲಿವುಡ್ ಸಿನಿಮಾದಲ್ಲಿಯೂ ಇಂಥ ರಕ್ತ ಹೀರುವ ಸನ್ನಿವೇಶಗಳಿಗೆ ಕಡಿಮೆ ಏನೂ ಇರುವುದಿಲ್ಲ.

ಆದರೆ ಇಲ್ಲೊಬ್ಬ ಪುಣ್ಯಾತ್ಮ ತನ್ನ ಪ್ರಿಯತಮೆಯ ರಕ್ತವನ್ನೇ ಹೀರುತಯ್ತಾನೆ. ಆಕೆ ಸಹ ರಕ್ತ ಕುಡಿಯಲು ಅವಕಾಶ ನೀಡುತ್ತಾಳೆ. ಅಲ್ಲದೇ ತನಗೆ ಇದರಲ್ಲಿ ಸಂತಸ ಇದೆ ಎಂದು ಸಹ ಹೇಳುತ್ತಾಳೆ.

ಮಾನವನ ರಕ್ತ ಕುಡಿಯುವುದು ಒಂದು ರೋಗವೆ? ಇಲ್ಲಿಯವರೆಗೆ ನಡೆದ ಸಂಶೋಧನೆಗಳು ಇದನ್ನೊಂದು ಡಿಸಾರ್ಡರ್ ಅಥವಾ ಅಸ್ವಸ್ಥತೆ ಎಂದು ಕರೆದಿವೆ. ಬ್ಯಾಲ್ಯದಲ್ಲಿನ ಘಟನೆಗಳು, ಕೆಂಪು ಬಣ್ಣಕ್ಕೆ ತಕ್ಷಣ ಆಕರ್ಷಿತವಾಗುವುದು, ಅತಿರೇಖದ ಸಿನಿಮಾ ವೀಕ್ಷಣೆ ಮಾಡುವುದು, ಅಪರಾಧ ಸಂಬಂಧಿ ಪುಸ್ತಕ ಓದುವುದು ಈ ರೀತಿಯ ವಿಚಾರಗಳು ಇಂಥ ರೋಗದ ಮೂಲವಾಗಬಹುದು ಎಂದು ಹೇಳಲಾಗಿದೆ.

Follow Us:
Download App:
  • android
  • ios