ಫ್ರಾನ್ಸ್‌ಗೆ ಸೇರಿದ ಒಂದು ದ್ವೀಪದಲ್ಲಿ ವಿಜಯ್ ಮಲ್ಯಗೆ ಸೇರಿದ ಲೆ ಗ್ರಾಂಡ್ ಜಾರ್ಡಿನ್ ಎಂಬ ಐಷಾರಾಮಿ ಭವನವಿದೆ. ಇದಕ್ಕೆ ಮಲ್ಯ ಕತಾನ್ ನ್ಯಾಷನಲ್ ಬ್ಯಾಂಕ್‌ನಿಂದ 213 ಕೋಟಿ ರೂ. ಸಾಲ ಪಡೆದಿದ್ದಾರೆ . ಅಲ್ಲಿ 17 ಬೆಡ್‌ರೂಂ, ಹೆಲಿಪ್ಯಾಡ್, ಎಲ್ಲ ಇವೆ. ಸಾಲ ಬಾಕಿಯಾಗಿರುವುದರಿಂದ ಭವನ ಸೀಝ್ ಮಾಡಲು ಹೋದ ಬ್ಯಾಂಕ್‌ನವರಿಗೆ ಅಚ್ಚರಿಯಾಗುವಂತೆ ಅಲ್ಲಿ ಕಂಡದ್ದು ತೇಪೆ ಬಿದ್ದ ಗೋಡೆಗಳು ತುಕ್ಕು ಹಿಡಿದ ಬೇಲಿ, ದೂಳು ತುಂಬಿದ ಕೋಣೆಗಳು. ಸಾಲ ಕೊಟ್ಟ ಹಣ ಗೋತಾ. ನಿರ್ವಹಣೆಯಿಲ್ಲದೆ ಐಷಾರಾಮಿ ಬಂಗಲೆ ಕೂಡ ಗೋತಾ.

 ಅದು ಹಾಳಾಗಲಿ, ಆದರೇನಂತೆ, ಅದಕ್ಕೆ ಬದಲಾಗಿ ಇನ್ನೊಂದು ಬಂಗಲೆ ಕೊಡುತ್ತೇನೆ ಅನ್ನುವ ತಾಕತ್ತು ಮಲ್ಯಂದು. ಅವರ ಬಳಿ ಇನ್ನೂ ಅಂಥ ಹಲವು ವಿಲಾಸಿ ಬಂಗ್ಲೆಗಳಿರೋದು ಅದ್ಕೆ ಕಾರಣ.  ಲಿಕ್ಕರ್ ಬ್ಯಾರನ್ ವಿಜಯ್ ಮಲ್ಯ ಸುಮಾರು 8000 ಕೋಟಿ ರುಪಾಯಿ ಬ್ಯಾಂಕ್‌ಗಳಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅವರ ಆಸ್ತಿ ವಶಪಡಿಸಿಕೊಂಡು, ಅವನ್ನು ಮಾರಿ ಸಾಲ ವಸೂಲಿ ಮಾಡೋಕೆ ಬ್ಯಾಂಕ್‌ಗಳು ಟ್ರೈ ಮಾಡ್ತಿವೆ. ಆದರೆ ಅದೂ ಕಷ್ಟ. ಉದಾಹರಣೆಗೆ ಗೋವಾದಲ್ಲಿರೋ ಅವರ 90 ಕೋಟಿ ಬಾಳೋ ಬಂಗಲೆ 73 ಕೋಟಿಗೆ ಹರಾಜಾಗಿತ್ತು.

ಗೂಗಲ್ ಸಿಇಒ ಬ್ರೇಕ್‌ಫಾಸ್ಟ್ ಇದಂತೆ!

 ಕ್ಯಾಲಿಫೋರ್ನಿಯಾ ಹೌಸ್
1987ರಲ್ಲಿ, ವಿಜಯ್ ಮಲ್ಯ ಕ್ಯಾಲಿಫೋರ್ನಿಯಾದಲ್ಲಿದ್ದಾಗ, ಅವರ ಪತ್ನಿ ಸಮೀರಾ ತಯ್ಯಬ್ಜೀ ಗರ್ಭವತಿಯಾಗಿದ್ದರು. ಆಗ ಅವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ತಲೆದೋರಿತು. ಕ್ಯಾಲಿಫೋರ್ನಿಯಾದಲ್ಲೇ ಉಳಿಯುವಂತೆ ಡಾಕ್ಟರ್ ಸೂಚಿಸಿದರು. ಮಲ್ಯ ಒಂದು ಹೆಜ್ಜೆ ಮುಂದೆ ಹೋಗಿ, 12 ಲಕ್ಷ ಡಾಲರ್ ಬೆಲೆಯ ಐಷಾರಾಮಿ ಬಂಗಲೆಯನ್ನೇ ಖರೀದಿಸಿದರು. 11 ಸಾವಿರ ಚದರ ಅಡಿ ವಿಸ್ತೀರ್ಣದ ಈ ಬಂಗಲೆಯ ಗೋಡೆಗಳು ಪಾಬ್ಲೊ ಪಿಕಾಸೋನ ಬೆಲೆಬಾಳುವ ವರ್ಣಚಿತ್ರಗಳಿಂದ ಅಲಂಕೃತವಾಗಿವೆ. ಟೈಗರ್ ವುಡ್, ಸೆರೆನಾ ವಿಲಿಯಮ್ಸ್, ವೀನಸ್ ವಿಲಿಯಮ್ಸ್ ಇಲ್ಲಿ ಇವರ ನೆರೆಹೊರೆ.

ಮಾಬುಲಾ ಗೇಮ್ ಲಾಡ್ಜ್, ಜೊಹಾನ್ಸ್‌ಬರ್ಗ್
ಇದು ಸುಮಾರು 12000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಕಾಡಿನ ನಡುವಿನ ಬಂಗಲೆ, ಜೊಹಾನ್ಸ್‌ಬರ್ಗ್‌ನಿಂದ ಎರಡು ಗಂಟೆ ದೂರದಲ್ಲಿದೆ. ದಕ್ಷಿಣ ಆಫ್ರಿಕದ ಬೆಲೆಬಾಳುವ ಖಾಸಗಿ ಕಾಡಿನ ಭವನಗಳಲ್ಲಿ ಒಂದು. ಇದರ ಸುತ್ತಮುತ್ತಲಿನ 25000 ಎಕರೆ ಕಾಡನ್ನೂ ಖರೀದಿಸಿದ್ದಾರೆ ಮಲ್ಯ. ಆಸ್ತಿಯ ಒಟ್ಟು ಮೌಲ್ಯ 60 ಲಕ್ಷ ಡಾಲರ್. ಸುಂದರ ಪ್ರಕೃತಿಯ ನಡುವಿನ ಈ ಲಾಡ್ಜ್‌ನಲ್ಲಿ 47 ರೂಮ್‌ಗಳು, 3 ಸೂಟ್‌ಗಳಿವೆ.

17 ಬೆಡ್‌ರೂಂನ ಮಲ್ಯ ಬಂಗ್ಲೆ ಧೂಳಿನ ಅರಮನೆ!...

 ತ್ರೀ ಕೊಂಡೋಸ್, ಟ್ರಂಪ್ ಪ್ಲಾಜಾ, ನ್ಯೂಯಾರ್ಕ್
2010ರ ಸೆಪ್ಟೆಂಬರ್‌ನಲ್ಲಿ ಮಲ್ಯ, ನ್ಯೂಯಾರ್ಕಿನ ಹೃದಯಭಾಗದಲ್ಲಿರುವ ಟ್ರಂಪ್ ಪ್ಲಾಜಾದಲ್ಲಿ ಒಂದು ದುಬಾರಿ ಪೆಂಟ್‌ಹೌಸನ್ನು ಖರೀದಿಸಿದರು. ಇದರಲ್ಲಿ ಮೂರು ಫ್ಲ್ಯಾಟ್ ಗಳಿವೆ. ಒಂದು ಮಲ್ಯ ಮಗಳು ತಾನ್ಯಾ ಹೆಸರಲ್ಲಿದೆ. ಬೆಲೆ 24 ಲಕ್ಷ ಡಾಲರ್. ಈ ಪ್ಲಾಜಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಲಿಕತ್ವಕ್ಕೆ ಸೇರಿದೆ. ಟ್ರಂಪ್, ಗಾಯಕ ಬೇಯೋನ್ಸ್, ನಟ ಬ್ರೂಸ್ ವಿಲ್ಲಿಸ್ ಮೊದಲಾದವರು ಇದರ ನಿವಾಸಿಗಳು.

 ಕ್ಲಿಫ್ಟನ್ ಎಸ್ಟೇಟ್, ಜೊಹಾನ್ಸ್‌ಬರ್ಗ್
ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್ ನ ಕ್ಲಿಫ್ಟನ್ ಬೀಚ್‌ ಪಕ್ಕದಲ್ಲಿದೆ ಈ ಐಷಾರಾಮಿ ಕಟ್ಟಡ. ಕಣ್ಣು ಬಿಟ್ಟರೆ ಕ್ಲಿಫ್ಟನ್ ಬೀಚ್‌ನ ಸೊಗಸು. ಇದರ ಬೆಲೆ ಸುಮಾರು 84 ಲಕ್ಷ ಡಾಲರ್. ಪಟ್ಟಣದ ದುಬಾರಿ ಬೀದಿ ಎನಿಸಿಕೊಂಡಿರುವ ನೆಟಲ್‌ಟನ್ ಬೀದಿ ಇದರ ನೆಲೆ. ಕಿಂಗ್ ಕಾರ್ಲ್ ಗುಸ್ತಫ್, ಕ್ವೀನ್ ಸಿಲ್ವಿಯಾ, ನಟ ನಿಕೊಲಸ್ ಕೇಜ್, ಜಾರ್ಜ್ ಮೈಕೇಲ್ ಮುಂತಾದ ಸೆಲೆಬ್ರಿಟಿಗಳೆಲ್ಲ ಇಲ್ಲಿ ಬಂದು ತಂಗುತ್ತಾರೆ. ಮಸಾಜ್ ಪಾರ್ಲರ್, ಹೆಲಿಪ್ಯಾಡ್, ಬೆಸ್ಟ್ ಜಿಮ್‌ಗಳೆಲ್ಲ ಇವೆ.

 ಕಿಂಗ್‌ಫಿಶರ್ ಟವರ್, ಬೆಂಗಳೂರು
ಉದ್ಯಾನ ನಗರಿಯ ಮಧ್ಯಭಾಗದಲ್ಲಿರುವ ಕಿಂಗ್‌ಫಿಶರ್ ಟವರ್ ಇರುವ ಜಾಗದಲ್ಲಿ ಮೊದಲು ಅವರ ತಂದೆಯ ದೊಡ್ಡ ಮನೆ ಇತ್ತು. ಈಗ ತಲಾ 8000 ಚದರ ಅಡಿಯ 84 ಅಪಾರ್ಟ್‌ಮೆಂಟ್‌ಗಳು ಇವೆ. 40000 ಚದರಡಿಯ ಹೆಲಿಪ್ಯಾಡನ್ನೂ ಹೊಂದಿರುವ ಪೆಂಟ್‌ಹೌಸ್, ಮಲ್ಯರ ವೈಯಕ್ತಿಕ ಬಳಕೆಗಾಗಿ ಇದೆ.

ಕುಣಿಗಲ್ ಸ್ಟಡ್ ಫಾರಂ, ಬೆಂಗಳೂರು
ರೇಸ್ ಹುಚ್ಚು ಹೊಂದಿರುವ ಮಲ್ಯ ಕುಣಿಗಲ್ ಸ್ಟಡ್ ಫಾರಂ ಖರೀದಿಸಿದ್ದರಲ್ಲಿ ಅಚ್ಚರಿಯೇನಿಲ್ಲ.  ಕುದುರೆಗಳ ತರಬೇತಿ ಹಾಗೂ ಸಂತಾನೋತ್ಪಾದನಾ ಕೇಂದ್ರವಿದು. 400 ಎಕರೆ ಜಾಗದಲ್ಲಿ ವಿಸ್ತರಿಸಿದೆ.