ಜೀರಿಗೆ ರವೆ ವಡೆ

Instant Jeera Vada
Highlights

ಪ್ರತಿಯೊಂದೂ ಅಡುಗೆ ಮನೆಯಲ್ಲಿರೋ ಒಗ್ಗರಣೆ ಡಬ್ಬದಲ್ಲಿ ಜೀರಿಗೆ ಇದ್ದೇ ಇರುತ್ತದೆ. ವಿಧವಿಧವಾಗಿ ನಮ್ಮ ಆರೋಗ್ಯಕ್ಕೂ ಅಗತ್ಯ. ಜೀರಿಗೆ ಸೇವನೆ ಪಚನ ಕ್ರಿಯೆ ವೃದ್ಧಿಸಲು ಸಹಕರಿಸುತ್ತದೆ. ಇದೇ ಜೀರಿಗೆಯಿಂದ ಚುಮುಚುಮು ಚಳಿಗೆ ಕುರುಕಲು ತಿಂಡಿಯನ್ನು ಮಾಡಬಹುದು.  ಈ ಮಳೆಗಾಲದ ಚಳಿಗೆ ನಿಮಗಾಗಿ ನೀಡಿದ್ದೇವೆ ಜೀರಿಗೆ ರವೆ ವಡೆ. ಮಾಡಿ ನೋಡಿ.

ಬೇಕಾಗುವ ಸಾಮಗ್ರಿ:

- 1 ಬಟ್ಟಲು ರವೆ 

- 4 ಹಸಿಮೆಣಸಿನಕಾಯಿ

- 2 ಚಮಚ ತುಪ್ಪ

- 6-5 ಚಮಚ ಜೀರಿಗೆ

-2-3 ಚಮಚ ಅಕ್ಕಿ ಹಿಟ್ಟು

- ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಸೋಡಾ.

ಮಾಡುವ ವಿಧಾನ :

ಲೋಕಲ್ ರವೆ, ಅಕ್ಕಿಹಿಟ್ಟಿಗೆ ತುಪ್ಪದೊಂದಿಗೆ ಜೀರಿಗೆ, ಸಣ್ಣಗೆ ಹೆಚ್ಚಿದ ಹಸಿಮೆಣಸು, ಸೋಡಾ, 1 ಚಮಚ ಉಪ್ಪನ್ನು ಸೇರಿಸಬೇಕು. ಈ ಹಿಟ್ಟನ್ನು ಕಾದ ಎಣ್ಣೆಯಲ್ಲಿ ಕರಿದರೆ ರವೆ ವಡೆ ಸಿದ್ಧ.

loader