Kidney Illegal Business : ಕಾನೂನು ಬಿಗಿಯಾಗಿದ್ರೂ ಅಂಗ ಮಾರಾಟ ಕಡಿಮೆಯಾಗಿಲ್ಲ

ಅಂಗ ದಾನ ಮಹಾ ದಾನ ನಿಜ. ಆದ್ರೆ ಅಂಗ ದಾನ, ಮನುಷ್ಯ ಸತ್ತ ಮೇಲಾದ್ರೆ ಅದು ಮಹಾದಾನವಾಗುತ್ತದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬದುಕಿರುವ ಜನರು, ಬದುಕು ನಡೆಸಲು ಅಂಗ ಮಾರಾಟಕ್ಕೆ ಮುಂದಾಗ್ತಿದ್ದಾರೆ. ಭಾರತದಲ್ಲಿ ಇದು ಹೆಚ್ಚಾಗಲು ಮುಖ್ಯ ಕಾರಣವೇನು ಗೊತ್ತಾ? 
 

Human Organ Trade In India on high even strict rule implemented

ಮಾನವ (Human) ನ ದೇಹ (Body) ದ ಪ್ರತಿಯೊಂದು ಅಂಗ (Organ) ವೂ ಬಹಳ ಮುಖ್ಯ. ಒಂದು ಅಂಗವಿಲ್ಲದೆ ಹೋದ್ರೆ ನಾವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಮಾನವನ ಅಂಗಕ್ಕೆ ಬಹಳ ಬೇಡಿಕೆಯಿದೆ. ಆದ್ರೆ ಡೋನರ್ ಗಳ ಸಂಖ್ಯೆ ತುಂಬಾ ಕಡಿಮೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಅಕ್ರಮವಾಗಿ ಅಂಗಗಳ ಮಾರಾಟ ದಂಧೆ ನಡೆಯುತ್ತಿದೆ. ಕಿಡ್ನಿ ನಮ್ಮ ದೇಹದ ಕಾರ್ಯಗಳನ್ನು ಮಾಡಲು ಬಹಳ ಮುಖ್ಯ. ಈ ಕಿಡ್ನಿ ಅಕ್ರಮ ದಂಧೆ ಭಾರತ ಸೇರಿದಂತೆ ವಿಶ್ವದಾದ್ಯಂತ ಎಲ್ಲೆ ಮೀರಿ ನಡೆಯುತ್ತಿದೆ. ಇಂದು ನಾವು ಮಾನವ ಅಂಗಗಳ ಅಕ್ರಮ ಮಾರಾಟದ ಬಗ್ಗೆ ನಿಬ್ಬೆರಗಾಗುವ ವಿಷ್ಯಗಳನ್ನು ಹೇಳ್ತೇವೆ.

ಭಾರತದಲ್ಲಿದೆ ಕಠಿಣ ಕಾನೂನು : ನಿಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ಮಾನವನ ಅಂಗಗಳ ಮಾರಾಟಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಯಲ್ಲಿದೆ. 1994ರಲ್ಲಿಯೇ ಕಾನೂನು ಜಾರಿಗೆ ಬಂದಿದೆ. ಮಾನವ ಅಂಗಗಳ ಅಕ್ರಮ ಮಾರಾಟ ದಂಧೆಯಲ್ಲಿ ಸಿಕ್ಕಿಬಿದ್ದ ವ್ಯಕ್ತಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುತ್ತದೆ. ಹಾಗೆಯೇ 20 ಲಕ್ಷದಿಂದ 1 ಕೋಟಿಯವರೆಗೆ ದಂಡ ವಿಧಿಸಲಾಗುತ್ತದೆ. ಕಠಿಣ ಶಿಕ್ಷೆಯ ಮಧ್ಯೆಯೇ ಭಾರತದಲ್ಲಿ ಮಾನವ ಅಂಗಗಳ ಅಕ್ರಮ ಮಾರಾಟ ನಡೆಯುತ್ತಿದೆ.

ಮಾನವ ಅಂಗಗಳ ಅಕ್ರಮ ಮಾರಾಟ ದಂಧೆ ಎಷ್ಟು ದೊಡ್ಡದಿದೆ ? : 
ಗ್ಲೋಬಲ್ ಫೈನೆನ್ಸಿಯಲ್ ಇಂಟಿಗ್ರಿಟಿ (GFI) ಪ್ರಕಾರ, ಪ್ರತಿ ವರ್ಷ ಎಷ್ಟು ಅಂಗಗಳ ಕಸಿ ನಡೆಯುತ್ತದೆಯೋ ಅದ್ರಲ್ಲಿ ಶೇಕಡಾ 10ರಷ್ಟು ಕಾನೂನಿಗೆ ವಿರುದ್ಧವಾಗಿಯೇ ನಡೆಯುತ್ತದೆ. ಅದ್ರಲ್ಲೂ ಕಿಡ್ನಿಯ ಅಕ್ರಮ ದಂಧೆ ಹೆಚ್ಚಿನ ಪ್ರಮಾಣದಲ್ಲಿದೆ.

Kids' Health: ಡೈಪರ್ ನಲ್ಲಿ ಪತ್ತೆಯಾಯ್ತು ವಿಷಕಾರಿ ಕೆಮಿಕಲ್

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಕಿಡ್ನಿ ಅಕ್ರಮ ಮಾರಾಟ ನಡೆಯುತ್ತದೆ. ಭಾರತದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿ ವರ್ಷ ತನ್ನ ಕಿಡ್ನಿ ಮಾರಾಟ ಮಾಡ್ತಾರೆ. ಇದು 2007ರ ವರದಿಯಾಗಿದ್ದು, ಈಗ ಸಂಖ್ಯೆ ಹೆಚ್ಚಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ಮಾನವನ ಅಂಗಗಳ ಮಾರಾಟ – ಖರೀದಿ ಕಾನೂನು ಬಾಹಿರವಾಗಿದೆ. ಆದ್ರೆ ಇರಾನ್ ನಲ್ಲಿ ಮಾತ್ರ ಇದಕ್ಕೆ ಯಾವುದೇ ಕಾನೂನಿಲ್ಲ. ವಿಶ್ವದಲ್ಲಿ ಮಾನವ ಅಂಗಗಳ ಅಕ್ರಮ ಮಾರಾಟದ ಮಾರುಕಟ್ಟೆ 1.2 ಅರಬ್ ಡಾಲರ್ ಅಂದ್ರೆ 13 ಸಾವಿರ ಕೋಟಿಯಿದೆ ಎಂದು ಅಂದಾಜಿಸಲಾಗಿದೆ.

ಕಿಡ್ನಿ ಬೆಲೆ 1 ಕೋಟಿ ರೂಪಾಯಿ : ಮಾನವ ಅಂಗಗಳ ದಾನಿಗಳು ಬಡವರು. ಹಣದ ಅವಶ್ಯಕತೆಯಿರುವವರಿಗೆ ಹಣದ ಆಸೆ ತೋರಿಸಿ ಅವರ  ಅಂಗಗಳನ್ನು ಪಡೆಯಲಾಗುತ್ತದೆ. ಅದ್ರಲ್ಲಿ ಕಿಡ್ನಿ ಮುಂಚೂಣಿಯಲ್ಲಿದೆ. ಒಂದು ಕಿಡ್ನಿ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ. ಆದ್ರೆ ಕಿಡ್ನಿ ದಾನ ಮಾಡಿದವನಿಗೆ ಸಿಗೋದು ಬರೀ 3 ಲಕ್ಷ ರೂಪಾಯಿ. ಉಳಿದ ಹಣವನ್ನು ಕಾಳಸಂತೆ ಜನರು ಹಂಚಿಕೊಳ್ತಾರೆ.

ಫ್ರೇಶ್ ಕಬ್ಬಿನ ಹಾಲು ಓಕೆ, ಸ್ವಲ್ಪ ಹೊತ್ತಿನ ನಂತರ ಸೇವಿಸಿದ್ರೆ ಕೆಡುತ್ತೆ ಆರೋಗ್ಯ!

ಅಂಗ ಮಾರಾಟಕ್ಕೆ ಮುಖ್ಯ ಕಾರಣ : ಕಠಿಣ ಕಾನೂನು ಜಾರಿಯಲ್ಲಿದ್ದರೂ ಜನರು ಏಕೆ ಅಂಗ ಮಾರಾಟಕ್ಕೆ ಮುಂದಾಗ್ತಾರೆ ಎಂಬುದನ್ನು ನೋಡೋಣ. 

ಖರ್ಚು : ಖರ್ಚನ್ನು ನಿಭಾಯಿಸಲು ಜನರು ಕಿಡ್ನಿ ಅಥವಾ ದೇಹದ ಬೇರೆ ಅಂಗ ಮಾರಾಟಕ್ಕೆ ಮುಂದಾಗ್ತಾರೆ. 2002ರಲ್ಲಿ ತಮಿಳುನಾಡಿನಲ್ಲಿ ಸಮೀಕ್ಷೆಯೊಂದು ನಡೆದಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರು ಅಂಗ ಮಾರಾಟಕ್ಕೆ ಕಾರಣವನ್ನು ಹೇಳಿದ್ದರು. ಅದ್ರಲ್ಲಿ ಶೇಕಡಾ 96ರಷ್ಟು ಮಂದಿ ಖರ್ಚಿಗಾಗಿ ಈ ಕೆಲಸ ಮಾಡಿರೋದಾಗಿ ಒಪ್ಪಿಕೊಂಡಿದ್ದರು. 

ಬಡತನ – ನಿರುದ್ಯೋಗ : ಬಡತನ ಹಾಗೂ ನಿರುದ್ಯೋಗ ಕೂಡ ಅಂಗ ಮಾರಾಟಕ್ಕೆ ಮುಖ್ಯ ಕಾರಣವಾಗಿದೆ. 2011- 2012ರ ವರದಿ ಪ್ರಕಾರ ಭಾರತದಲ್ಲಿ ಈಗ್ಲೂ ಶೇಕಡಾ 22ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.

ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವುದು : ಮಾನವ ಅಂಗಗಳಿಗೆ ಬೇಡಿಕೆ ಹೆಚ್ಚಿದೆ. ಆದ್ರೆ ಅದಕ್ಕೆ ತಕ್ಕಂತೆ ಪೂರೈಕೆಯಿಲ್ಲ. ಇದನ್ನೇ ಜನರು ತಮ್ಮ ಲಾಭಕ್ಕೆ ಬಳಸಿಕೊಂಡಿದ್ದಾರೆ. ಅಕ್ರಮವಾಗಿ ಅಂಗಗಳ ಮಾರಾಟ ಮಾಡ್ತಿದ್ದಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ಹಣ ಗಳಿಸ್ತಿದ್ದಾರೆ.

Human Organ Trade In India on high even strict rule implemented

 

Latest Videos
Follow Us:
Download App:
  • android
  • ios