Asianet Suvarna News Asianet Suvarna News

ನಾಲ್ಕ ದಿನದ ಬದುಕಲ್ಲಿ ಹೊಂದಿಕೊಳ್ಳಲು ಕೆಲವು ಟಿಪ್ಸ್...

'There will be such things in the world such as perfect married life and perfect spouse' ಎನ್ನೋ ಮಾತಿದೆ. ದಾಂಪತ್ಯವೆಂದರೆ ಹೊಂದಾಣಿಕೆಯಷ್ಟೇ. ಇಲ್ಲಿ ಪೊಸೆಸಿವ್‌ನೆಸ್, ಪ್ರೇಮ...ಎಲ್ಲವೂ ಸುಸೂತ್ರವಾಗಿದ್ದರೆ ಮಾತ್ರ ಬದುಕು ಬಂಗಾರವಾಗುತ್ತದೆ. ಹಾಗಂತ ಪ್ರೀತಿ ನೆಪದಲ್ಲಿ ದಂಪತಿಯಿಬ್ಬರೂ ಕೇವಲ ತ್ಯಾಗಕ್ಕೆ ಮುಂದಾಗಬಾರದು. ನಾವಿಷ್ಟ ಪಡುತ್ತಿದ್ದೇವೆ ಎಂಬೊಂದೇ ಕಾರಣಕ್ಕೆ ನಮ್ಮನ್ನೂ ಇಷ್ಟಪಡಲಿ ಎಂದು ಬಯಸುವುದು ತಪ್ಪು. ಆದರೆ, ಪ್ರೀತಿಗೆ ಎಲ್ಲವನ್ನೂ ಗೆಲ್ಲುವ ಶಕ್ತಿ ಇರುತ್ತದೆ ಎಂಬುದನ್ನು ಮರೆಯಬಾರದು. 

How to win husband heart

'ಒಲಿದರೆ ನಾರಿ ಮುನಿದರೆ ಮಾರಿ...'ಎನ್ನುವ ಒಕ್ಕಣಿಕೆ ಎಲ್ಲರಿಗೂ ಗೊತ್ತು. ಗಂಡನನ್ನು ಪಳಗಿಸುವುದೊಂದೇ ಗುರಿ ಎಂದು ತಪ್ಪು ತಿಳುವಳಿಕೆ ಇರುತ್ತದೆ ಹೆಣ್ಣಿಗೆ. ಆದರೆ, ಅದರಿಂದ ಏನೂ ವರ್ಕ್ ಔಟ್ ಆಗೋಲ್ಲ ಎನ್ನುವುದು ಗೊತ್ತಿಲ್ಲ. ಗಂಡನನ್ನು ಗೆಲ್ಲಲು ಇಲ್ಲಿವೆ ಸಿಂಪಲ್ ಟಿಪ್ಸ್...

- ಯಾವುದೇ ಸಂದರ್ಭದಲ್ಲೂ ಗಂಡನ ತಾಯಿಯನ್ನು ಟೀಕಿಸಲು ಹೋಗಬೇಡಿ. ಇಂಥ ಟೀಕೆಗಳು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ ಎಂಬುವುದು ನೆನಪಿರಲಿ. 

- ಕೆಲಸ ಮುಗಿಸಿ, ಮನೆಗೆ ಬರುವ ಪತಿ ಮಹಾಶಯನಿಗೆ ಸುಸ್ತಾಗಿ ಹೋಗಿರುತ್ತದೆ. ಆದಷ್ಟು ನಗುಮೊಗದ ಸ್ವಾಗತವಿರಲಿ. ತಲೆ ಬಿಸಿ ತರುವಂಥ ಸುದ್ದಿಗಳನ್ನು ತಕ್ಷಣವೇ ಹೇಳಬೇಡಿ. ಸಮಾಧಾನವಿರಲಿ. ನನಗಾಗಿ ಚಿಂತಿಸುವವರಿದ್ದಾರೆ ಅನ್ನುವ ಖುಷಿಯಲ್ಲಿ ಪತಿ ಮನಸ್ಸು ಚಿಗುರುತ್ತದೆ.

- ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆ ಇರಲಿ. ಚೀಟಿ ಕಟ್ಟುವಂಥ ವ್ಯವಹಾರಕ್ಕೆ ಕೈ ಹಾಕಬೇಡಿ. ಸೀರೆ ಅಂಗಡಿಯಲ್ಲಿ ಸಾಲ ಪಡೆದ ಸಂಗತಿ ಆಗಿರಬಹುದು ಅಥವಾ ಪಕ್ಕದ ಮನೆಯವರಿಗೆ ಶೂರಿಟಿ ಹಾಕುವ ವಿಷಯವೇ ಆಗಿರಬಹುದು, ಪತಿಯೊಂದಿಗೆ ಚರ್ಚಿಸಿ, ನಿರ್ಧಾರಕ್ಕೆ ಬನ್ನಿ. ಅಕಸ್ಮಾತ್ ಏನಾದರೂ ಎಡವಟ್ಟು ಆದಲ್ಲಿ ಯಾವ ಪತಿಯೂ ಪತ್ನಿಯನ್ನು ಕ್ಷಮಿಸಲಾರ. 

- ಮನೆಯಲ್ಲಿದ್ದಾಗಲೂ ಶುಭ್ರವಾಗಿರೋ, ನೀಟಾಗಿರೋ ಬಟ್ಟೆ ಧರಿಸಿ. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ. ದುಪ್ಪಟ್ಟಾದಂತೆ ಟವೆಲ್ ಹಾಕ್ಕೊಂಡು, ನೈಟಿ ಧರಿಸಿ ಶಾಲೆಯಿಂದ ಬರುವ ಮಗುವನ್ನು ಕರೆದುಕೊಂಡು ಹೋಗುವ ಪತ್ನಿ ಎಂದರೆ ಪತಿಗೆ ಒಂಥರ ರೇಜಿಗೆ ಹುಟ್ಟಿಸುತ್ತದೆ ಎಂಬುವುದು ನೆನಪಿರಲಿ.

- ಗಂಡನ ದುಶ್ಚಟವನ್ನು ಹಂಗಿಸಬೇಡಿ. ಅದನ್ನು ಓವರ್‌ಕಮ್ ಮಾಡಿಕೊಳ್ಳಲು ಸಹಕರಿಸಿ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ.

Follow Us:
Download App:
  • android
  • ios