ನನಗೆ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ ನನಗೂ ನನ್ನ ಹೆಂಡತಿಗೂ ಹನ್ನೊಂದು ವರ್ಷಗಳ ಅಂತರವಿರುವುದರಿಂದ ಬಹಳಷ್ಟು ವಿಚಾರಗಳಲ್ಲಿ ಅವಳ ವರ್ತನೆಗೂ ನನ್ನ ವರ್ತನೆಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ.

ಇದರಿಂದ ತುಂಬಾ ಸಲ ಮನಸ್ಥಾಪವೂ ಉಂಟಾಗಿದೆ. ತುಂಬಾ ಸಲ ಅವಳಿಗೆ ಸರಿಯಾಗಿ ಏನೂ ಗೊತ್ತಿಲ್ಲ ಎಂದುಕೊಂಡು ನಾನೇ ಸಹಿಸಿಕೊಂಡು ಹೋಗುತ್ತಿದ್ದೇನೆ. ಆದರೆ ಕೆಲವು ವೇಳೆ ಇದು ಅತಿಯಾಗಿ ಸಹಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಒಂದು ಚಿಕ್ಕ ಮಗುವಿದೆ. ಅದರ ಮುಖವನ್ನು ನೋಡಿಕೊಂಡಾದರೂ ಅನುಸರಿಸಿಕೊಂಡು ಹೋಗೋಣ ಅನ್ನಿಸುತ್ತದೆ. ಆದರೆ ಸಂಸಾರ ಕೆಲವು ವೇಳೆ ತಲೆನೋವು ಎನ್ನಿಸುತ್ತದೆ. ಏನು ಮಾಡಲಿ?
 

- ಕಿರಣ್ ಜಿ. ತುಮಕೂರು (ಹೆಸರು ಬದಲಾಯಿಸಲಾಗಿದೆ] 

 

ನಿಮ್ಮ ಸಲಹೆ ಸೂಚನೆಗಳನ್ನು suvarnanewsindia@gmail.comಗೆ ಕಳುಹಿಸಿ....