Asianet Suvarna News Asianet Suvarna News

ಸಾಂಪ್ರದಾಯಿಕವಾದ ಬಾಯಿ ನೀರೂರಿಸುವ ಕಾಯಿ ಕಡುಬು ಮಾಡುವುದು ಹೇಗೆ..?

ಸಾಂಪ್ರದಾಯಿಕವಾದ ಬಾಯಿ ನೀರೂರಿಸುವ ಕಾಯಿ ಕಡುಬು ಮಾಡುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

How To Make Kayikadubu

ಸಾಂಪ್ರದಾಯಿಕವಾದ ಬಾಯಿ ನೀರೂರಿಸುವ ಕಾಯಿ ಕಡುಬು ಮಾಡುವುದು ಹೇಗೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

 

1 ಕಪ್ ಅಕ್ಕಿ ಹಿಟ್ಟು

1 ಕಪ್ ತೆಂಗಿನ ತುರಿ

ಅರ್ಧ ಕಪ್  ಬೆಲ್ಲ

2 ಕಪ್ ನೀರು

1ರಿಂದ 2 ಲಕ್ಕಿ

2 ಟೀ ಸ್ಪೂನ್ ತುಪ್ಪ

ಉಪ್ಪು ರಚಿಗೆ ತಕ್ಕಷ್ಟು

ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆ

 

ಮಾಡುವ ವಿಧಾನ :

*ಒಂದು ಬಾಣಲೆಯಲ್ಲಿ ನೀರು, ಅರ್ಧ ಟೀಸ್ಪೂನ್ ತುಪ್ಪ ಮತ್ತು ಉಪ್ಪು ಹಾಕಿ ಕುದಿಯಲು ಇಡಿ

*ನೀರು ಕುದಿಯಲು ಪ್ರಾರಂಭಿಸಿದ  ನಂತರ ಅಕ್ಕಿ ಹಿಟ್ಟನ್ನು ಹಾಕಿ, ಒಮ್ಮೆ ಚೆನ್ನಾಗಿ ಮಗುಚಿ ಸ್ಟವ್ ಆಫ್ ಮಾಡಿ

*ಮುಚ್ಚಳ ಮುಚ್ಚಿ ಪಕ್ಕಕ್ಕಿಡಿ

*ಮಿಕ್ಸಿ ಜಾರಿಗೆ ತೆಂಗಿನ ತುರಿ ಮತ್ತು ಏಲಕ್ಕಿ ಹಾಕಿ ನೀರು ಹಾಕದೇ ಪುಡಿ ಮಾಡಿ

*ಪುಡಿಮಾಡಿದ ತೆಂಗಿನ ತುರಿ ಬೆಲ್ಲವನ್ನು  ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ ಹೂರಣ ಸಿದ್ಧ ಮಾಡಿಕೊಳ್ಳಿ

*ಅಕ್ಕಿ ಹಿಟ್ಟನ್ನು ನಾದಿ

ಒಂದು ಲಿಂಬೆ ಗಾತ್ರದ ಹಿಟ್ಟು ತೆಗೆದುಕೊಂಡು ತುಪ್ಪ ಸವರಿದ ಪ್ಲಾಸ್ಟಿಕ್ ಹಾಳೆ ಮೇಲೆ ವೃತ್ತಾಕಾರವಾಗಿ ತಟ್ಟಿ

ಮಧ್ಯದಲ್ಲಿ ಹೂರಣ ಇಟ್ಟು ಮಡಿಸಿ

ಹಬೆಯಲ್ಲಿ ಬಾಳೆ ಎಲೆ ಮೇಲಿಟ್ಟು ಬೇಯಿಸಿ

Follow Us:
Download App:
  • android
  • ios